ಮಂಗಳೂರು ಶಾಲೆ ಪ್ರಕರಣ: ಶಾಸಕರ ವಿರುದ್ಧ ಎಫ್ಐಆರ್ ಹಾಕಿರುವ ಪೋಲಿಸ್ ಅಧಿಕಾರಿ ಅಮಾನತಿಗೆ ಬೊಮ್ಮಾಯಿ ಆಗ್ರಹ
ಮಂಗಳೂರಿನ ಸೆಂಟ್ ಜೆರೋಸಾ ಶಾಲೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸಿರುವ ಪಾಂಡೇಶ್ವರ ಪೊಲಿಸ್ ಠಾಣೆಯ ಪೊಲಿಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಬೆಂಗಳೂರು: ಮಂಗಳೂರಿನ ಸೆಂಟ್ ಜೆರೋಸಾ ಶಾಲೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸಿರುವ ಪಾಂಡೇಶ್ವರ ಪೊಲಿಸ್ ಠಾಣೆಯ ಪೊಲಿಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಇದನ್ನೂ ಓದಿ: ಕ್ರೈಂ ಕಂಟೆಂಟ್ ಜೊತೆಗೊಂದು ತ್ರಿಕೋನ ಪ್ರೇಮಕಥೆ.. ʼಎವಿಡೆನ್ಸ್ʼ ಲಿರಿಕಲ್ ಸಾಂಗ್ ರಿಲೀಸ್!
ಪ್ರಕರಣ ಕುರಿತು ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಅನಿಲ್ ಜರಾಬ್ ಲೊಬೊ ಅವರು ದೂರು ಕೊಟ್ಟಿದ್ದಾರೆ.ಅದು ಶಾಲೆಯಲ್ಲಿ ನಡೆದಿರುವ ಘಟನೆಯ ಬಗ್ಗೆ ದೂರು ಕೊಟ್ಟಿದ್ದಾರೆ. ಮೊದಲು ಮಕ್ಕಳು ದೂರು ಕೊಟ್ಟಾಗ ಅದನ್ನು ಎಫ್ಐ ಆರ್ ಮಾಡಲಿಲ್ಲ. ಅದನ್ನು ಪ್ರಾಥಮಿಕ ವಿಚಾರಣೆ ಮಾಡಿದಾಗ ಅದರಲ್ಲಿ ತಪ್ಪು ಕಂಡಿಲ್ಲ ಅಂತ ಎಫ್ ಐ ಆರ್ ಮಾಡಿಲ್ಲ ಅಂತೀರಾ. ಶಾಸಕರ ವಿರುದ್ದ ಯಾವುದೇ ವಿಚಾರಣೆ ಮಾಡದೇ ಎಫ್ ಐಆರ್ ಮಾಡಿದ್ದೀರಾ. ಪೊಲಿಸರು ತಮ್ಮ ಕೆಲಸದಲ್ಲಿ ತಾರತಮ್ಯ ಮಾಡುತ್ತಿರುವುದು ಸ್ಪಷ್ಟವಾಗಿದೆ. ಶಾಸಕರ ಮೇಲೆ ಎಫ್ ಐ ಆರ್ ಹಾಕಿರುವ ಪೊಲಿಸ್ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು. ಇಲ್ಲದಿದ್ದರೆ ತಾರರಮ್ಯ ಮಾಡಿದಂತೆ ಆಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಜಾಕ್ ಪಾಟ್ ಪ್ರೇಮೋತ್ಸವ ವೇದಿಕೆಯಲ್ಲಿ ಸಂಗೀತ ಸುಧೆ!
ಶಿಕ್ಷಕಿಯನ್ನು ಆ ಶಾಲೆಯ ಆಡಳಿತ ಮಂಡಳಿ ಅಮಾನತು ಮಾಡಿದೆ. ಆ ಆಡಳಿತ ಮಂಡಳಿಯನ್ನು ನಾನು ಅಭಿನಂದಿಸುತ್ತೇನೆ. ಅವರು ನ್ಯಾಯಯುತವಾದ ತೀರ್ಮಾನ ಮಾಡಿದ್ದಾರೆ. ಸರ್ಕಾರವೂ ನ್ಯಾಯಯುತವಾದ ತೀರ್ಮಾನ ಮಾಡಿದರೆ ಮಾತ್ರ ಸರ್ಕಾರಕ್ಕೆ ಗೌರವ ಬರುತ್ತದೆ ಎಂದು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.