ಮಂಡ್ಯ: ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಕೊಂಡೋತ್ಸವ ನೋಡುವ ಸಲುವಾಗಿ  ಮನೆಯ ತಾರಸಿ ಏರಿದ್ದ ವೇಳೆ ಮನೆಯ ತಾರಸಿ ಕುಸಿದು ಇಬ್ಬರು ಮಹಿಳೆಯರು ಮೃತಪಟ್ಟು 50 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಗೆರೆಪುರ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.


COMMERCIAL BREAK
SCROLL TO CONTINUE READING

ಗ್ರಾಮದಲ್ಲಿ ನಡೆಯುತ್ತಿದ್ದ ಬಸವೇಶ್ಚರ ದೇವರ ಕೊಂಡೋತ್ಸವ (Basaveshwara Devara Konda) ನೋಡಲು ದೇವಸ್ಥಾನ ಮುಂದೆ ಇದ್ದ ಮಾದೇಗೌಡರ ಮನೆಯ ತಾರಸಿ ಮೇಲೆ 100 ಕ್ಕೂ ಜನರು ಜಮಾಯಿಸಿದ್ದರು. ಈ ವೇಳೆ ತಾರಸಿ ಕುಸಿದಿದ್ದು, ಅದೇ ಗ್ರಾಮದ ಸರಸ್ವತಿ ಹಾಗೂ ಪುಟ್ಟಲಿಂಗಮ್ಮ ಎನ್ನುವ ಇಬ್ಬರು ಮಹಿಳೆಯರು ತಾರಸಿ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ‌.


ಇದನ್ನೂ ಓದಿ- Vairamudi Utsava: ವಿಶ್ವ ಪ್ರಸಿದ್ದ ವೈರಮುಡಿ ಉತ್ಸವಕ್ಕೆ ದೀಪಾಲಂಕಾರದ ರಂಗು


ಈ ಘಟನೆಯಲ್ಲಿ ತಾರಸಿ ಮೇಲಿದ್ದ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಮದ್ದೂರಿನ ಆಸ್ಪತ್ರೆಗೆ (Hospital) ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. 


ಇದನ್ನೂ ಓದಿ- Viral Video ನೋಡಿ: ಕೊಂಡ ಹಾಯುವಾಗ ಕೊಂಡಕ್ಕೆ ಬಿದ್ದ ಅರ್ಚಕ


ಇದಲ್ಲದೆ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ‌. ಹಲವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತಂತೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.