ಹಾವೇರಿ: ಹಾನಗಲ್ ಗ್ಯಾಂಗ್‌ ರೇಪ್ ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ಒಪ್ಪಿಸುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಹಾವೇರಿ ಎಸ್ಪಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ಬದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. 


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಜಂಗಲ್ ರಾಜ್ ಇದೆ, ತುಗಲಕ್ ದರ್ಬಾರ್ ಇದೆ. ತಾಲಿಬಾನ್ ಶಕ್ತಿಗಳು ತಲೆ ಎತ್ತುತ್ತಿವೆ ಅತ್ಯಾಚಾರ ಆದ ನಾಲ್ಕು ದಿನದ ಬಳಿಕ ಕೇಸ್ ಮಾಡಿದ್ದಾರೆ. ಹಾನಗಲ್ ಪೊಲೀಸರು ಕೇಸ್ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ದುಷ್ಟರ ಜೊತೆಗೆ ಪೊಲೀಸರು ಸೇರಿದ್ದಾರೆ ನಾಚಿಕೆಯಾಗಬೇಕು ಇವರಿಗೆ ಎಂದು ವಾಗ್ದಾಳಿ ನಡೆಸಿದರು.


ಇದನ್ನೂ ಓದಿ: ಈ ಫೋಟೋದಲ್ಲಿರುವ ಮುದ್ದಾದ ಮಗು ಯಾರು ಗೊತ್ತಾ? ಪುನೀತ್‌ ರಾಜ್‌ಕುಮಾರ್‌ ಅವರ ಸಿನಿಮಾದ ನಾಯಕಿ ಈಕೆ! 


ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲಿಸರ‌ ಮೂಲಕ ಸಂತ್ರಸ್ಥೆಗೆ ಆಮಿಷವೊಡ್ಡಿದ್ದರು. ಪಿಎಸ್ ಐ ಎಲ್ಲ ವ್ಯವಹಾರ ಮಾಡಿದ್ದು, ಪಿಎಸ್ ಐ ಅವರನ್ನು ಸಸ್ಪೆಂಡ್ ಮಾಡಲಿಲ್ಲ. ಅಮಾಯಕರನ್ನು ಬಂಧಿಸಿ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ನಂಬರ್ ತೋರಿಸುತ್ತಿದ್ದಾರೆ. ಅಲ್ಪ ಸಂಖ್ಯಾತರ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಈಗ ಅಲ್ಪ ಸಂಖ್ಯಾತರ ರಕ್ಷಣೆ  ಮಾಡಿ ನೋಡೊಣ ಎಂದು ಸವಾಲು ಹಾಕಿದರು. 


ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ನೈತಿಕ ಪೊಲೀಸ್ ಗಿರಿಗೆ ಅವಕಾಶ ಕೊಡುವುದಿಲ್ಲ ಅಂತ ಮುಖ್ಯಮಂತ್ರಿ ಹೇಳುತ್ತಾರೆ.  ನೈತಿಕ ಪೊಲಿಸ್ ಗಿರಿ ತಡೆಯಲು ವಿಶೇಷ ಘಟಕ ಸ್ಥಾಪಿಸುವುದಾಗಿ ಹೇಳುತ್ತಾರೆ. ಎಲ್ಲಿದೆ ನಿಮ್ಮ‌ ಸೆಲ್, ಸಿದ್ದರಾಮಯ್ಯ ನವರ ಸೆಲ್ ಡೌನ್ ಆಗಿದೆ. ಒಬ್ಬ ಹೆಣ್ಣುಮಗಳನ್ನ ರಕ್ಚಣೆ ಮಾಡಲು ಸಾಧ್ಯವಾಗಿಲ್ಲ. ಅಲ್ಪಸಂಖ್ಯಾತರನ್ನ ಏನು ರಕ್ಷಣೆ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 


ಗ್ಯಾಂಗ್ ರೇಪ್ ಪ್ರಕರಣದಲ್ಲಿ ಎಸ್ ಐಟಿ ರಚಿಸುವಂತೆ ಬೇಡಿಕೆ ನಿರಂತರವಾಗಿರುತ್ತದೆ. ತಾಲೂಕು ಹಾಗೂ ಜನರ ಬಳಿಗೆ ಈ ಹೋರಾಟ ಕೊಂಡೊಯ್ಯುತ್ತೇವೆ. ಇದನ್ನು ಸುಮ್ಮನೆ ಬಿಡುವುದಿಲ್ಲ, ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ. ಪ್ರಕರಣದ ಎಸ್ ಐಟಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಜೀವಾವದಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. 


ಇದನ್ನೂ ಓದಿ: "ಶಿಕ್ಷಣ ಕಲಿತು ನಾವು ಮೌಡ್ಯ ಆಚರಿಸಬಾರದು.‌ ಶಿಕ್ಷಣದ ಬೆಳಕಿನಿಂದ ನಾವು ಮೌಡ್ಯದಿಂದ ಹೊರಗೆ ಬರಬೇಕು" 


ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಯಾಗಿದ್ದಾರೆ. ಪೊಲೀಸರು ಗೂಂಡಾಗಳ ಜೊತೆ ಕೈಜೋಡಿಸಿದ್ದಾರೆ. ಜಿಲ್ಲೆಯಲ್ಲಿ ಕಾನೂನಿನ ಭಯವಿಲ್ಲ. ಬ್ಯಾಡಗಿಯಲ್ಲಿ ನಿನ್ನೆ ಘಟನೆ ನಡೆದಿದೆ. ಹಾನಗಲ್ ನಲ್ಲಿ ಘಟನೆ ನಡೆದ ಮೇಲು ನಿನ್ನೆ ಬ್ಯಾಡಗಿಯಲ್ಲಿ ನಡೆದಿದೆ ಯಾಕೆ ? ಸಂತ್ರಸ್ತೆ ಮೇಲೆ ರೇಪ್ ಆದರೂ,  ಕೇಸ್ ಹಾಕಲಿಲ್ಲ. ನಾನು ಎಸ್ಪಿಗೆ ಪೋನ್ ಮಾಡಿದ್ದೆ ರೇಪ್ ‌ಆಗಿಲ್ಲ. ಅಂತ ಹೇಳಿದ್ದರು. ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ಹೇಳಿಕೆ ಕೊಟ್ಟ ಮೇಲೆ ಕೇಸ್ ಆಯ್ತು. ಕೇಸ್ ಮಾಡದೆ ಇರಲು ಯಾವ ರಾಜಕೀಯ ಒತ್ತಡ ಇತ್ತು ಎಂದು ಪ್ರಶ್ನಿಸಿದರು.
ಪೊಲೀಸ್ ಸ್ಟೇಷನ್ ಸೆಟ್ಲಮೆಂಟ್ ಸೆಂಟರ್ ಆಗಿವೆ. ಪೊಲೀಸರು ಇದನ್ನು ಮುಚ್ಚಿ ಹಾಕಿದ್ದಾರೆ. ಸಂತ್ರಸ್ತೆ ಯ ಆರೋಗ್ಯ ತಪಾಸಣೆ ಮಾಡಲಿಲ್ಲ. ಸಿಎಂಗೆ ಮುಖಭಂಗವಾಗುತ್ತದೆ ಎಂದು ಸಂತ್ರಸ್ಥೆಯನ್ನು ಶಿರಸಿಗೆ ಶಿಪ್ಟ್ ಮಾಡಿದ್ದಾರೆ. ಸರಕಾರವೇ ಸಂತ್ರಸ್ತೆಗೆ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದರು.


ವಿಪಕ್ಷ ನಾಯಕ ಆರ್ ಅಶೋಕ ಮಾತನಾಡಿ, 8 ತಿಂಗಳಲ್ಲಿ ಈ ಸರ್ಕಾರ ಬಂದ ಮೇಲೆ ನಿರಂತರ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ.  ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ ಇವರೆಲ್ಲ ನಮ್ಮ ಬ್ರದರ್ ಸಿಸ್ಟರ್ ಅಂದರು. ಈಗ ಸಿಸ್ಟರ್ ರೇಪ್ ಆಗಿದೆ ಇಲ್ಲಿ. ಎಲ್ಲಪ್ಪ ನಿನ್ನ ಬ್ರದರ್ ಸಿಸ್ಟರ್ ಗಳು. ರೇಪ್ ಮಾಡುವವರನ್ನು ಬ್ರದರ್ ಸಿಸ್ಟರ್ ಅಂದಿಯಲ್ಲಪ್ಪ. ರಾಜ್ಯದಲ್ಲಿ ರೇಪ್ ಗಳು ದಿನನಿತ್ಯ ನಡೆಯುತ್ತಿದೆ. ಹಾವೇರಿ ಜಿಲ್ಲೆಯಲ್ಲಿ 6 ತಿಂಗಳಲ್ಲಿ 7 ರೇಪ್ ಆಗಿದೆ. ಇದೆ ಗ್ಯಾಂಗ್ ರೇಪ್ ಮಾಡಿದೆಯಂತೆ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.