BBMP Chief commissioner : ಕಳೆದ ಭಾರಿಯಂತೆ ಈ ಭಾರಿಯುವು ವಾರ್ಡಿಗೆ ಒಂದೇ ಗಣೇಶ!?
ಗಣೇಶ ಚತುರ್ಥಿಗೆ ಬಿಬಿಎಂಪಿಯಿಂದ ಹಲವು ನಿಯಮಗಳಿವೆ. ಕಳೆದ ಬಾರಿಯ ನಿಯಮಗಳನ್ನೇ ಈ ಬಾರಿಯೂ ಮುಂದುವರೆಸುವ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬೆಂಗಳೂರು : ಗಣೇಶ ಚತುರ್ಥಿಗೆ ಬಿಬಿಎಂಪಿಯಿಂದ ಹಲವು ನಿಯಮಗಳಿವೆ. ಕಳೆದ ಬಾರಿಯ ನಿಯಮಗಳನ್ನೇ ಈ ಬಾರಿಯೂ ಮುಂದುವರೆಸುವ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಗಣೇಶೋತ್ಸವ ಆಚರಣೆ ವಿಚಾರವಾಗಿ ಮಾತನಾಡಿದ ಆಯುಕ್ತ ತುಷಾರ್ ಗಿರಿನಾಥ್, ಕಳೆದ ಬಾರಿ ವಾರ್ಡಿಗೆ ಒಂದು ಗಣಪ ಅನ್ನೊ ನಿಯಮವಿತ್ತು. ಈ ಬಾರಿಯೂ ಕಳೆದ ವರ್ಷದ ನಿಯಮ ಜಾರಿ ಬಗ್ಗೆ ಚರ್ಚೆ ಮಾಡ್ತೀವಿ. ಈ ಬಾರಿಯೂ ವಾರ್ಡಿಗೆ ಒಂದೇ ಗಣೇಶ ನಿಯಮ ತರುತ್ತಾ ಬಿಬಿಎಂಪಿ? ಪಿಓಪಿ ಗಣಪತಿಗಳನ್ನ ತಯಾರು ಮಾಡಬಾರದು ಅನ್ನೋ ನಿಯಮವಿದೆ. ಪಿಓಪಿ ವಿಗ್ರಹಗಳಿಗಿಲ್ಲ ಅನುಮತಿ. ಪಿಓಪ ಗಣಪತಿ ವಿಗ್ರಹಳನ್ನ ಮಾರಾಟ ಮಾಡಿದ್ರೆ ಕೂಡಲೇ ಕ್ರಮ ಕೈಗೊಳ್ಳುತ್ತವೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆಗೆ ಬಿಬಿಎಂಪಿ ಕ್ರಮ ಕೈಗೊಳ್ಳಲಾಗುತ್ತದೆ.
ಇದನ್ನೂ ಓದಿ : ಬ್ಯಾಂಕ್ ಸಾಲ ಮಾಡಿ ಎಸ್ಕೇಪ್ ಆದ ಉದ್ಯಮಿಗಳ ವಿರುದ್ಧ ಗುಡುಗಿದ ನಿವೃತ್ತ ಕಮಿಷನರ್ ಭಾಸ್ಕರ್ ರಾವ್
ದೋಷಪೂರಿತ ರಾಷ್ಟ್ರ ಧ್ವಜ ವಿತರಣೆ ವಿಚಾರವಾಗಿ ಮಾತನಾಡಿಯಾ ಅವರು, ಬಿಬಿಎಂಪಿಯ ಎಲ್ಲಾ ವಲಯದ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಡಿಫೆಕ್ಟ್ ಇರುವ ಬಾವುಟವನ್ನ ವಿತರಣೆ ಮಾಡದಂತೆ ಸೂಚನೆ ನೀಡಲಾಗಿದೆ. ಯಾವುದಾದ್ರೂ ಬಾವುಟ ಡಿಫಾಲ್ಟ್ ಇದ್ರೇ ವಾಪಾಸ್ ಪಡೆಯಲಾಗುತ್ತೆ. ಬಳಿಕ ಬೇರೆ ತೆಗೆದುಕೊಂಡು ಹೋಗಲು ಹೇಳಲಾಗಿದೆ ಎಂದು ಹೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.