ಮಹದೇವಪುರ ವ್ಯಾಪ್ತಿಯಲ್ಲೂ ರಾಜಕಾಲುವೆಗಳ ಒತ್ತುವರಿ.. ಶೀಘ್ರ ತೆರವಿಗೆ ಸೂಚನೆ
ಬಿಬಿಎಂಪಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದರು.
ಬೆಂಗಳೂರು: ಬಿಬಿಎಂಪಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದರು.
ಹೊರಮಾವು ವಾರ್ಡ್ ಪೂರ್ವ ಪಾಮ್ ಬೀಚ್ ಅಪಾರ್ಟ್ಮೆಂಟ್ ರಸ್ತೆ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಈ ಪೈಕಿ ಸ್ಥಳದಲ್ಲಿರುವ ಕಚ್ಚಾ ಮಳೆ ನೀರುಗಾಲುಗೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು ಅಗಲೀಕರಣ ಮಾಡಿರುವುದರಿಂದ ಮಳೆಯಾದರೆ ನೀರು ನಿಲ್ಲುವುದು ಕಡಿಮೆಯಾಗಿದೆ. ಆದರೆ ರಾಜಕಾಲುವೆಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಗುರುತಿಸಿ, ಕೂಡಲೆ ತೆರವು ಕಾರ್ಯ ಪ್ರಾರಂಭಿಸಲು ಸೂಚಿಸಿದರು.
ಇದನ್ನೂ ಓದಿ: Viral Video: ವಿದ್ಯುತ್ ವ್ಯತ್ಯಯ ಹಿನ್ನೆಲೆ ಮೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ!
ಹೆಳೆ ಮದ್ರಾಸ್ ರಸ್ತೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಭೇಟಿ:
ಕೆ.ಆರ್.ಪುರ ವಾರ್ಡ್ ಹೆಳೆ ಮದ್ರಾಸ್ ರಸ್ತೆ ದುರ್ಗ ಪರಮೇಶ್ವರಿ ದೇವಸ್ಥಾನದ ಬಳಿ ಜಲಾವೃತ ವಾಗುವ ಪ್ರದೇಶವನ್ನು ಪರಿಶೀಲಿಸಿ, ರಸ್ತೆ ಪಕ್ಕದಲ್ಲಿ ಚರಂಡಿ ವಿನ್ಯಾಸವನ್ನು ರಸ್ತೆ ಮಟ್ಟಕ್ಕಿಂತ ಮೇಲೆ ಎತ್ತರಿಸಿದ್ದು, ಶೋಲ್ಡರ್ ಸರಿಯಾಗಿರದೇ ಇರುವ ಕಾರಣ ರಸ್ತೆಯಲ್ಲಿ ಬೀಳುವ ಮಳೆ ನೀರು ಚರಂಡಿಗೆ ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲೇ ನಿಲ್ಲುತ್ತಿದೆ. ಈ ಹಿಂದೆ ಹೆಳೆ ಮದ್ರಾಸ್ ರಸ್ತೆಯನ್ನು ಕೆ.ಆರ್.ಡಿ.ಸಿ.ಎಲ್ ನಿರ್ವಹಣೆ ಮಾಡುತ್ತಿತ್ತು. ಇದೀಗ ಪಾಲಿಕೆಗೆ ಹಸ್ತಾಂತರಿಸಿದ್ದು, ಚರಂಡಿ ವಿನ್ಯಾಸ ಬದಲಿಸಿ, ಸರಿಯಾದ ಕಾಲುವೆಗಳನ್ನು ನಿರ್ಮಿಸಿ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕು. ಕೆಲವೆಡೆ ಕೊಳಚೆ ನೀರು ಚರಂಡಿಗೆ ಸೇರುತ್ತಿರುವುದನ್ನು ತಿಳಿದು, ಜಲಮಂಡಳಿ ಅಧಿಕಾರಿಗಳ ಜೊತೆ ಮಾತನಾಡಿ ಎಲ್ಲೆಲ್ಲಿ ಕೊಳಚೆ ನೀರು ಬರುತ್ತೆ ಅದನ್ನೆಲ್ಲಾ ಬ್ಲಾಕ್ ಮಾಡಿ ಚರಂಡಿಗೆ ಕೊಳಚೆ ನೀರು ಬರದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಎ.ನಾರಾಯಣಪುರ ಕೆರೆ ಅಭಿವೃದ್ಧಿ ಪರಿಶೀಲನೆ
5 ಎಕರೆ ಪ್ರದೇಶದ ಎ.ನಾರಾಯಣಪುರ ಕೆರೆ(ಮಹದೇವಪುರ ಕೆರೆ 2)ಯ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿ, 3 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕೆರೆಯಲ್ಲಿ ಹೂಳೆತ್ತುವುದು, ಸುತ್ತಲು ಕಲ್ಲುಗಳ ಅಳವಡಿಕೆ, ಫೆನ್ಸಿಂಗ್, ವಾಯು ವಿಹಾರ ಮಾರ್ಗ, ಕಿರು ಉದ್ಯಾನ, ಇನ್ಲೆಟ್/ಔಟ್ಲೆಟ್ ಅಭಿವೃದ್ಧಿ, ಭದ್ರತಾ ಸಿಬ್ಬಂದಿ ಕೊಠಡಿ ಸೇರಿದಂತೆ ಇನ್ನಿತರೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ,ಕೆರೆಗೆ ನೀರು ಸೇರುವ ಕಾಲುವೆಗೆ ಕಸ/ಪ್ಲಾಸ್ಟಿಕ್ ಹಾಕದಂತೆ ಚೈನ್ ಲಿಂಕ್ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಮಲೂರು ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲನೆ
ಹಳೆ ವಿಮಾನ ನಿಲ್ದಾಣ ರಸ್ತೆ ಯಮಲೂರು ಜಂಕ್ಷನ್ ನಿಂದ ಹೊರ ವರ್ತಲು ರಸ್ತೆಗೆ ಸಂಪರ್ಕ ಕಲ್ಪಿಸುವ 2.9 ಕಿ.ಮೀ ರಸ್ತೆ ಅಗಲೀಕರಣ ಕಾಮಗಾರಿಯನ್ನು 7 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ರಸ್ತೆಯನ್ನು 24 ಮೀಟರ್ ಅಗಲೀಕರಣ ಮಾಡಲಾಗುತ್ತಿದ್ದು, ಪಾದಚಾರಿ ಮಾರ್ಗ, ಸೈಕಲ್ ಟ್ರ್ಯಾಕ್, ಆರ್.ಸಿ.ಸಿ ಡ್ರೈನ್, ಡಾಂಬರೀಕರಣ, ಪಾದಚಾರಿ ಮಾರ್ಗಕ್ಕೆ ಕರ್ಬ್ ಸ್ಟೋನ್ ಹಾಗೂ ಟೈಲ್ಸ್ ಅಳವಡಿಕೆ ಸೇರಿದಂತೆ ಸಮಗ್ರ ಅಭಿವೃದ್ಧಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ.
ಇದನ್ನೂ ಓದಿ: ಅಬ್ಬಬ್ಬಾ...ಡ್ರಗ್ ದಂಧೆಕೋರರಿಂದ ವಶಕ್ಕೆ ಪಡೆದ ಹೆರಾಯಿನ್ ಮೌಲ್ಯ ಎಷ್ಟು ಗೊತ್ತಾ!
ಹೆಚ್.ಎ.ಎಲ್ ಕೆಳಸೇತುವೆ ಪರಿಶೀಲನೆ
ಮಾರತಹಳ್ಳಿ ಬಳಿ ರೈಲ್ವೆ ಮೇಲು ಸೇತುವೆಯ ಕೆಳಗೆ ಹೆಚ್.ಎ.ಎಲ್ ಕಡೆಯಿಂದ ಬರುವವರು ರಿಂಗ್ ರಸ್ತೆಗೆ ಯು-ಟರ್ನ್ ತೆಗೆದುಕೊಳ್ಳುವ ಸಲುವಾಗಿ 6 ಕೋಟಿ ರೂ. ವೆಚ್ಚದಲ್ಲಿ ಕೆಳ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು ಈಗಾಗಲೇ ಅರ್ಧಭಾಗ ಫ್ರೀ ಕಾಸ್ಟ್ ಎಲಿಮೆಂಟ್ ಬಾಕ್ಸ್ ಅಳವಡಿಕೆಯಾಗಿದೆ. ಇನ್ನುಳಿದರ್ಧ ಭಾಗದಲ್ಲಿ ಚರ್ಚ್ ಆಸ್ತಿಯನ್ನು ಪಡೆಯುವ ಸಲುವಾಗಿ ಟಿ.ಡಿ.ಆರ್ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಆಸ್ತಿಯನ್ನು ಪಾಲಿಕೆ ವಶಕ್ಕೆ ಪಡೆದ ಕೂಡಲೆ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.
ಕುಂದಲಹಳ್ಳಿ ಕೆಳಸೇತುವೆ ಪರಿಶೀಲನೆ:
ಕುಂದಲಹಳ್ಳಿ ಜಂಕ್ಷನ್ ಬಳಿ 19.50 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕೆಳಸೇತುವೆ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.