ಬೆಂಗಳೂರು: ಕೊರೊನಾ ರೂಪಾಂತರಿ ವೈರಸ್ ಆತಂಕದಲ್ಲೇ ಸಿಲಿಕಾನ್ ಸಿಟಿ ಬೆಂಗಳೂರು ನಿವಾಸಿಗಳು ಬದುಕುವಂತಾಗಿದೆ. ‘ಒಮಿಕ್ರಾನ್’ ಅಬ್ಬರದ ಎದುರು ಎಲ್ಲವೂ ಮಂಕಾಗಿ ಹೋಗಿದ್ದು, ಮತ್ತೊಮ್ಮೆ ಲಾಕ್​ಡೌನ್ ಆಗುತ್ತಾ ಅನ್ನೋ ಭೀತಿ ಜನರಲ್ಲಿ ಆವರಿಸಿದೆ. ಆದರೆ ಈ ಹೊತ್ತಲ್ಲೇ ಅಲರ್ಟ್ ಆಗಿರುವ ಬೆಂಗಳೂರು ಮಹಾನಗರ ಪಾಲಿಕೆ(BBMP), ಕೊರೊನಾ ಮತ್ತಷ್ಟು ಹಬ್ಬದಂತೆ ತಡೆಯಲು ಟೆಸ್ಟಿಂಗ್ ಹೆಚ್ಚಳ ಮಾಡಿದೆ.


COMMERCIAL BREAK
SCROLL TO CONTINUE READING

ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ 30 ಸಾವಿರ ಕೊರೊನಾ ಟೆಸ್ಟಿಂಗ್(COVID-19 Testing) ನಡೆಯುತ್ತಿತ್ತು. ಆದರೆ ಇದೀಗ ಟೆಸ್ಟಿಂಗ್ ಸಂಖ್ಯೆ ಹೆಚ್ಚಿಸಲಾಗಿದ್ದು, ಪ್ರತಿನಿತ್ಯ 50 ಸಾವಿರ ಜನರಿಗೆ ಕೊರೊನಾ ಪರೀಕ್ಷೆ ನಡೆಯಲಿದೆ. ರೋಗಲಕ್ಷಣ ಇದ್ದವರ ಮೇಲೆ ಬಿಬಿಎಂಪಿ ಅಧಿಕಾರಿಗಳು ತೀವ್ರ ನಿಗಾ ಇಟ್ಟಿದ್ದಾರೆ.


ಇದನ್ನೂ ಓದಿ: IIT-Bombay Placement: ಮೊದಲ ದಿನದಂದೇ 2.05 ಕೋಟಿ ರೂ ಪ್ಯಾಕೇಜ್ ನೀಡಿದ Uber


ಕಠಿಣ ಕ್ರಮ ಜಾರಿ


ಈಗಾಗಲೇ ಜಗತ್ತಿನಾದ್ಯಂತ ಕೊರೊನಾ ರೂಪಾಂತರಿ ವೈರಸ್ ‘ಒಮಿಕ್ರಾನ್’(Omicron Variant) ಭಾರಿ ಆತಂಕ ಸೃಷ್ಟಿ ಮಾಡಿದೆ. ಹೀಗಾಗಿ ಬೆಂಗಳೂರು ಮಹಾನಗರದಲ್ಲಿ ‘ಒಮಿಕ್ರಾನ್’ ಹಾವಳಿ ಹೆಚ್ಚಾಗದಂತೆ ತಡೆಯಲು ಬಿಬಿಎಂಪಿ ಟಫ್ ರೂಲ್ಸ್ ಜಾರಿಗೆ ತಂದಿದೆ. ಅದರಲ್ಲೂ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ವಿದೇಶಿ ಪ್ರಯಾಣಿಕರ ಪರೀಕ್ಷೆಗೆ ಹಾಗೂ ಕ್ವಾರಂಟೈನ್​ಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ.


6 ಖಾಸಗಿ ಆಸ್ಪತ್ರೆ ನಿಗದಿ


‘ಒಮಿಕ್ರಾನ್’ ಬಗ್ಗೆ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿದೇಶಿ ಪ್ರಯಾಣಿಕರ ಐಸೋಲೇಷನ್​ಗೆ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು 6 ಖಾಸಗಿ ಆಸ್ಪತ್ರೆ ನಿಗದಿ ಮಾಡಿದ್ದಾರೆ. ಸದ್ಯಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಕಠಿಣ ತಪಾಸಣೆ ನಡೆಸಿ ಪ್ರಯಾಣಿಕರನ್ನು ಹೊರಗೆ ಬಿಡಲಾಗುತ್ತಿದೆ. ಈ ಮಧ್ಯೆ ‘ಒಮಿಕ್ರಾನ್’ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಮಹತ್ವದ ನಿರ್ಧಾರಗಳನ್ನ ಬಿಬಿಎಂಪಿ ಕೈಗೊಳ್ಳುತ್ತಿದೆ.


ಇದನ್ನೂ ಓದಿ: OMG: ಈ ಸ್ವೆಟರ್ ಬೆಲೆ 30 ಲಕ್ಷ ರೂಪಾಯಿಯಂತೆ, ಅಂಥದ್ದೇನಿದೆ ಇದರಲ್ಲಿ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.