ಬೆಂಗಳೂರು : ಕೊರೊನಾ ರೂಪಾಂತರಿ ಬಿಬಿಎಂಪಿಗೆ ದೊಡ್ಡ ತಲೆನೋವಾಗಿದ್ದು ಇದನ್ನ ಪತ್ತೇ ಹಚ್ಚೋದೆ ದೊಡ್ಡ ಸವಾಲಾಗ್ತಿದೆ.  ಹೀಗಾಗಿ ರೂಪಾಂತರಿ ಪತ್ತೆಗೆ ಪಾಲಿಕೆ ದಕ್ಷಿಣ ಆಫ್ರಿಕಾ ಮಾದರಿಯನ್ನ ಬಳಕೆ ಮಾಡಲು ಮುಂದಾಗಿದ್ದು ಕೊಳಚೆ ನೀರಿನಿಂದ ವೈರಸ್ ಪತ್ತೆಹಚ್ಚಲು BWSSB ಜೊತೆ ಪಾಲಿಕೆ ಕೈಜೋಡಿಸಿದೆ. ಈ ವಿಧಾನದಿಂದ ನಿರೀಕ್ಷೆಗೂ ಮೊದಲೇ ಮಹಾಮಾರಿಯನ್ನ ಪತ್ತೆಹಚ್ಚಬಹುದಾಗಿದೆ.


COMMERCIAL BREAK
SCROLL TO CONTINUE READING

ಕೊರೋನಾ ರೂಪಾಂತರಿ ಓಮಿಕ್ರೋನ್ ಉಪತಳಿ ಕಣ್ಣಿಗೆ ಕಾಣದಂತೆ ಜನರನ್ನ ಆವರಿಸುತ್ತಿದೆ. XE, ಡೆಲ್ಟಾ, B2,10, B2 12 ಆಯ್ತು ಇದೀಗ BA.4 ಹಾಗೂ BA.5 ಉಪತಳಿ ಪತ್ತೆಯಾಗಿದೆ. ಮುಂದೆ ಯಾವ ತಳಿ ಬರುತ್ತೋ ಅಂತ ಜನ ಆತಂಕದಿಂದಲೇ ಕಾಲ ಕಳೆಯುವಂತಾಗಿದೆ. ದಿನಕ್ಕೊಂದು ಉಪ ತಳಿ ಪತ್ತೆಯಾಗ್ತಿರೋದು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸ್ತಿದೆ. ಕಣ್ಣಿಗೆ ಕಾಣದಂತೆ ಹರಡ್ತಿರೋ ಮಾರಿಯನ್ನ ಪತ್ತೆಹಚ್ಚೋದೇ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪಾಲಿಕೆ ಹೊಸ ಪ್ಲಾನ್ ಒಂದನ್ನ ಮಾಡಿದ್ದು ದಕ್ಷಿಣ ಆಫ್ರಿಕಾ ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಬಿಬಿಎಂಪಿ ಹಾಗೂ BWSSB ಜಂಟಿಯಾಗಿ ರೂಪಾಂತರಿ ಪತ್ತೆಗೆ ಮುಂದಾಗಿದ್ದು ಕೊಳಚೆ ನೀರನ್ನು ಬಳಸಿ ರೂಪಾಂತರಿ ಪತ್ತೆ ಮಾಡಲಾಗ್ತಿದೆ. 


ಇದನ್ನೂ ಓದಿ : ಒಟ್ಟು 6 ಲಕ್ಷ ಮನೆಗಳನ್ನು ಡಿಸೆಂಬರ್ ಮಾಹೆಯೊಳಗೆ ಪೂರ್ಣಗೊಳಿಸಿ: ಸಿಎಂ ಬೊಮ್ಮಾಯಿ


ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ 3ನೇ ಅಲೆಯ ಸಂದರ್ಭದಲ್ಲಿ ಕೊಳಚೆ ನೀರಿನ ಪರೀಕ್ಷೆಯಿಂದ 15 ದಿನಗಳ ಮೊದಲೇ ವೈರಸ್ ಪತ್ತೆ ಮಾಡಲಾಗಿತ್ತು. ಹೀಗಾಗಿ ಇದೇ ಮಾದರಿ ಅನುಸರಿಸಿ ನಗರದಲ್ಲಿ ಜನರು ಬಳಸಿದ ನೀರನ್ನು ಪರೀಕ್ಷೆಗೆ ಒಳಪಡಿಸಿ, ಈ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟ ನೀರಿನ ಮಾದರಿಗಳಲ್ಲಿ ಹೊಸ ರೂಪಾಂತರಿ ಪ್ರಭೇದದ ಪತ್ತೆಗಾಗಿ ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಮಾಡುವ ಮೂಲಕ ರೂಪಾಂತರಿ ವೈರಸ್ ಅನ್ನ ಸುಲಭವಾಗಿ ಪತ್ತೆಹಚ್ಚಲು ಪಾಲಿಕೆ ಮುಂದಾಗಿದೆ. ಈ ಮೂಲಕ ನಗರದಲ್ಲಿರುವ 34 STP ಗಳಿಂದ ನೀರು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗುತ್ತದೆ. ಬೊಮ್ಮನಹಳ್ಳಿ, ಮಹದೇವಪುರ & ಪೂರ್ವ ವಲಯಗಳಲ್ಲಿ ಕೇಸ್ ಗಳು ಹೆಚ್ಚು ಬರ್ತಿರೋದ್ರಿಂದ ಅಲ್ಲಿ ಹೆಚ್ಚು ಪರೀಕ್ಷೆ ನಡೆಸಲಾಗ್ತಿದೆ.


ಶೇ.70 ರಷ್ಟು ಒಮಿಕ್ರಾನ್, ಶೇ.30 ರಷ್ಟು ಹಳೆ ಡೆಲ್ಟಾ ಮಾದರಿ ಪತ್ತೆ


ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿ ಸ್ವಯಂ ಸೇವಾ ಸಂಘಟನೆಯಡಿ ಮಾನಿಕ್ಯೂಲರ್ ಸಲ್ಯೂಷನ್ಸ್, ಟಾಟಾ ಇನ್ಸ್ಟಿಟ್ಯೂಟ್ ಹಾಗೂ ಶ್ರ್ಯಾಂಡ್ ಲ್ಯಾಬರೋಟರೀಸ್ ಎಂಬ ಖಾಸಗಿ ಪ್ರಯೋಗಾಲಯಗಳು ಕೊಳಚೆ ನೀರನ್ನು ಜೀನೋಮಿಕ್ ಪರೀಕ್ಷೆ ಮಾಡುತ್ತಿವೆ. ಈ ಸಂಸ್ಥೆಗಳು ಪಾಲಿಕೆಯಿಂದ ಹಣ ಪಡೆಯದೇ ಉಚಿತವಾಗಿ ಪರೀಕ್ಷೆ ಮಾಡುತ್ತಿವೆ. ಈಗಾಗಲೇ ಬೊಮ್ಮನಹಳ್ಳಿ, ಮಹದೇವಪುರ ಹಾಗೂ ಪೂರ್ವ ವಲಯಗಳಲ್ಲಿ ಕೊಳಚೆ ನೀರಿನ ಜೀನೋಮಿಕ್ ಪರೀಕ್ಷೆ ಮಾಡಲಾಗಿದ್ದು, ಅವುಗಳಲ್ಲಿ ಶೇ.70ರಷ್ಟು ಒಮಿಕ್ರಾನ್ ಹಾಗೂ ಉಳಿದಂತೆ ಹಳೆಯ ಪ್ರಭೇದವಾದ ಡೆಲ್ಟಾ ವೈರಸ್ ಪತ್ತೆಯಾಗುತ್ತಿದೆ. 4ನೇ ಅಲೆ ಬರುವ ಮೊದಲೇ ಬಿಎ2.10 ಅಥವಾ ಬಿಎ2.12 ಮಾದರಿ ಸೋಂಕು ಪತ್ತೆ ಬಗ್ಗೆ ನಿಗಾವಹಿಸಲಾಗುತ್ತಿದೆ ಎಂದು ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ತಿಳಿಸಿದರು.


ಇದನ್ನೂ ಓದಿ : 'ಅಕ್ರಮ ಹಣದಿಂದಲೇ ಬಿಜೆಪಿ ಇಂದು ದೇಶದಲ್ಲಿ ಶ್ರೀಮಂತ ಪಕ್ಷವಾಗಿದೆ'


ಇಷ್ಟು ದಿನ ರೂಪಾಂತರಿಯನ್ನ ಪತ್ತೆಹಚ್ಚೋದೇ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿತ್ತು. ಇದೀಗ STP ನೀರಿನಿಂದ ವೈರಸ್ ಅನ್ನ 15 ದಿನ ಮೊದಲೇ ಪತ್ತೆಹಚ್ತಿರೋದು ಮುಂದೆ ಬರಲಿರೋ ಅಪಾಯವನ್ನ ತಡೆಯಲು ಸಹಕಾರಿಯಾಗಲಿದೆ ಈ ಪ್ಲಾನ್ ಎಷ್ಟರಮಟ್ಟಿಗೆ ಸಕ್ಸಸ್ ಆಗಲಿದೆ ಎಂಬುದೇ ಮುಂದಿರುವ ಪ್ರಶ್ನೆಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.