ಬೆಂಗಳೂರು : ಕಡೆಗೂ ಬಿಬಿಎಂಪಿ ಕಟ್ಟಡ ಅಡಮಾನದ ಸಾಲದಿಂದ ಮುಕ್ತಗೊಂಡಿದೆ. ಕೆ.ಆರ್ ಮಾರುಕಟ್ಟೆ ಅಡಮಾನದ ಕಡೇಯ ಕಂತು 18 ಕೋಟಿ ರೂಪಾಯಿ ಸಾಲವನ್ನು ಎಸ್ ಬಿಐಗೆ ಪಾವತಿಸಿ ಕಳೆದ ವಾರ ಬಿಬಿಎಂಪಿ ಕಟ್ಟಡ ಅಡಮಾನದಿಂದ ಬಿಡಿಸಿಕೊಂಡಿದೆ. 


COMMERCIAL BREAK
SCROLL TO CONTINUE READING

2021-22 ನೇ ಸಾಲಿನ ಬಜೆಟ್ ನಲ್ಲೇ ಕೆ.ಆರ್ ಮಾರುಕಟ್ಟೆಯನ್ನು ಮುಕ್ತಗೊಳಿಸುವ ಬಗ್ಗೆ ಘೋಷಣೆಯಾಗಿತ್ತಾರೂ, ಒಂದು ವರ್ಷ ವಿಳಂಬವಾಗಿ ಕಟ್ಟಡ ಬಿಡಿಸಿಕೊಳ್ಳಲಾಗಿದೆ. 


ಇದನ್ನೂ ಓದಿ : ಕೂಲಿ ಕಾರ್ಮಿಕರು ತಂಗಿದ್ದ ಶೆಡ್ ಕುಸಿದು ನಾಲ್ವರ ದುರ್ಮರಣ


ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಟಾಪಟಿಗೆ ಅಸ್ತ್ರವಾಗಿದ್ದ ಬಿಬಿಎಂಪಿ ಕಟ್ಟಡ ಅಡಮಾನ ಸಮಸ್ಯೆ ಈಗ ಬಗೆಹರಿದಿದೆ. 2015-16 ರಲ್ಲಿ ಬಿಬಿಎಂಪಿ ಎದುರಿಸುತ್ತಿದ್ದ ಆರ್ಥಿಕ ಹಿನ್ನೆಡೆಯಿಂದಾಗಿ, ಪಾಲಿಕೆ ಒಡೆತನದ 11 ಕಟ್ಟಡಗಳನ್ನು 1796 ಕೋಟಿ ರೂಪಾಯಿಗೆ ಹುಡ್ಕೋ ಸಂಸ್ಥೆಯಲ್ಲಿ ಅಡಮಾನಕ್ಕೆ ಇಡಲಾಗಿತ್ತು. 


ಮೊದಲು ಹುಡ್ಕೋ, ನಂತರ ಕಡಿಮೆ ಬಡ್ಡಿ ದರ ಹಿನ್ನಲೆ, SBI ಗೆ ವರ್ಗಾಯಿಸಲಾಗಿತ್ತು. 2015-16 ರಲ್ಲಿ ಪಾಲಿಕೆಯ ಕೆಂಪೇಗೌಡ ಮ್ಯೂಸಿಯಂ, ಮೆಯೋಹಾಲ್, ಜಾನ್ಸನ್ ಮಾರುಕಟ್ಟೆ, ಸ್ಲಾಟರ್ ಹೌಸ್, ರಾಜಾಜಿನಗರ ಕಾಂಪ್ಲೆಕ್ಸ್, ಮಲ್ಲೇಶ್ವರ ಮಾರುಕಟ್ಟೆ, ಕೃಷ್ಣರಾಜೇಂದ್ರ ಮಾರುಕಟ್ಟೆ, ದಾಸಪ್ಪ ಕಟ್ಟಡ, ಪಬ್ಲಿಕ್ ಯುಟಿಲಿಟಿ ಕಟ್ಟಡ, ಬಿಬಿಎಂಪಿ ಪೂರ್ವ ಕಚೇರಿ, ಕಲಾಸಿಪಾಳ್ಯ ಮಾರುಕಟ್ಟೆ ಅಡ ಇಡಲಾಗಿತ್ತು. 


ಇದನ್ನೂ ಓದಿ : ಏರ್ಪೋರ್ಟ್ ರಸ್ತೆಯಲ್ಲಿ ಭೀಕರ‌ ಅಪಘಾತ- ಕಾರು ಚಾಲಕ ಸಾವು


2016-17 ರಲ್ಲಿ ಕೆಂಪೇಗೌಡ ಮ್ಯೂಸಿಯಂ, ಮೆಯೋಹಾಲ್ , ಜಾನ್ಸನ್ ಮಾರುಕಟ್ಟೆಯನ್ನು 362.03 ಕೋಟಿ, ಬಡ್ಡಿ- ,163.61 ಕೋಟಿ ರೂ ಪಾವತಿಸಿ ಹುಡ್ಕೊದಿಂದ ಪಾಲಿಕೆ ಮರಳಿ ಪಡೆದಿತ್ತು. 2017-18 ರಲ್ಲಿ ಮಲ್ಲೇಶ್ವರಂ ಮಾರುಕಟ್ಟೆ ಮರಳಿ ಪಡೆದಿತ್ತು. 2018-19 ರಲ್ಲಿ ಸ್ಲಾಟರ್ ಹೌಸ್, ರಾಜಾಜಿನಗರ ಕಾಂಪ್ಲೆಕ್ಸ್ ಮರಳಿ ಪಡೆದಿತ್ತು. 2017-18 ರಲ್ಲಿ ಕಡಿಮೆ ಬಡ್ಡಿ ದರಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಡಮಾನ ವರ್ಗಾವಣೆ ಮಾಡಲಾಗಿತ್ತು.  4 ಕಟ್ಟಡಗಳನ್ನು 871 ಕೋಟಿ ಗೆ ಅಡಮಾನ ಇಡಲಾಗಿತ್ತು. ಈ ಪೈಕಿ ಪಿಯುಬಿ ಕಟ್ಟಡ, ಬಿಬಿಎಂಪಿ ಪಶ್ಚಿಮ ವಲಯ ಕಚೇರಿ, ದಾಸಪ್ಪ ಆಸ್ಪತ್ರೆ, ಕಲಾಸಿಪಾಳ್ಯ ಮಾರುಕಟ್ಟೆ 2019 ರಲ್ಲೇ ಅಡಮಾನ ಮುಕ್ತಗೊಂಡಿದ್ದವು. 


871 ಕೋಟಿ ಪೈಕಿ 463.65 ಕೋಟಿ ರೂ ಮಾತ್ರ ಉಳಿದಿತ್ತು. ಕೆ.ಆರ್ ಮಾರುಕಟ್ಟೆ ಮಾತ್ರ ಬಾಕಿ ಉಳಿದಿದ್ದು, ಕಳೆದ ವಾರ ಬಿಬಿಎಂಪಿ ಇದನ್ನೂ ಋಣಮುಕ್ತಗೊಳಿಸಲಾಗಿದೆ. 


ಇದನ್ನೂ ಓದಿ : ಪ್ರಯಾಣಿಕರೇ ಗಮನಿಸಿ ..! ಇಂದು ಆಟೋ ಮತ್ತು ಟ್ಯಾಕ್ಸಿ ಇರಲ್ಲ .!


 ಪಾಲಿಕೆಗೆ ತಪ್ಪದ ಆರ್ಥಿಕ ಸಂಕಷ್ಟ :
 ಕಟ್ಟಡ ಅಡಮಾನದಿಂದ ಬಿಡಿಸಿಕೊಂಡಿದ್ದರೂ, ಪಾಲಿಕೆಯ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ. ಅವೈಜ್ಞಾನಿಕ ಬಜೆಟ್ ಮಂಡನೆಯಿಂದಾಗಿ, ಗುತ್ತಿಗೆದಾರರ ಬಾಕಿ ಬಿಲ್ 3500 ಕೋಟಿ ರೂ, ವಿವಿಧ ಕಾಮಗಾರಿಗಳು, ಸರ್ಕಾರದಿಂದ ಬರಬೇಕಾದ ಬಾಕಿ ಮೊತ್ತ ಸೇರಿ 20 ಸಾವಿರ ಕೋಟಿಯಷ್ಟು ಬಿಬಿಎಂಪಿಗೆ ಆರ್ಥಿಕ ಹೊರೆ ಇನ್ನೂ ಇದೆ ಎಂದು ಮಾಜಿ ಕಾರ್ಪೊರೇಟರ್ ಎಂ ಶಿವರಾಜು ಅಭಿಪ್ರಾಯಪಟ್ಟಿದ್ದಾರೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.