200ಕ್ಕೂ ಹೆಚ್ಚು ಹೊರ ಗುತ್ತಿಗೆ ಶಿಕ್ಷಕರಿಗೆ ಗೇಟ್ ಪಾಸ್ ನೀಡಲು ಮುಂದಾದ ಬಿಬಿಎಂಪಿ
ಬಿಬಿಎಂಪಿ ಶಾಲೆಗಳಲ್ಲಿ ಪಾಲಿಕೆ ಮೇಜರ್ ಆಪರೇಷನ್ ಶುರು ಮಾಡಿದೆ.ಗುಣಮಟ್ಟ ಶಿಕ್ಷಣ ನೆಪದಲ್ಲಿ 200ಕ್ಕೂ ಹೆಚ್ಚು ಹೊರ ಗುತ್ತಿಗೆ ಶಿಕ್ಷಕರಿಗೆ ಗೇಟ್ ಪಾಸ್ ನೀಡಲು ಮುಂದಾಗಿದೆ.ಬಿಬಿಎಂಪಿ ಈ ನಿರ್ಧಾರ ದಶಕಗಳ ಕಾಲ ಕೆಲಸ ಮಾಡಿದ ಶಿಕ್ಷಕರನ್ನ ಅತಂತ್ರ ಮಾಡಿದೆ.
ಬೆಂಗಳೂರು: ಬಿಬಿಎಂಪಿ ಶಾಲೆಗಳಲ್ಲಿ ಪಾಲಿಕೆ ಮೇಜರ್ ಆಪರೇಷನ್ ಶುರು ಮಾಡಿದೆ.ಗುಣಮಟ್ಟ ಶಿಕ್ಷಣ ನೆಪದಲ್ಲಿ 200ಕ್ಕೂ ಹೆಚ್ಚು ಹೊರ ಗುತ್ತಿಗೆ ಶಿಕ್ಷಕರಿಗೆ ಗೇಟ್ ಪಾಸ್ ನೀಡಲು ಮುಂದಾಗಿದೆ.ಬಿಬಿಎಂಪಿ ಈ ನಿರ್ಧಾರ ದಶಕಗಳ ಕಾಲ ಕೆಲಸ ಮಾಡಿದ ಶಿಕ್ಷಕರನ್ನ ಅತಂತ್ರ ಮಾಡಿದೆ.
ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಸಿದ್ದು ಹೆಸರು ಘೋಷಣೆ : ಡಿಕೆಶಿ ತವರಲ್ಲಿ ಖಾಕಿ ಹೈ ಅರ್ಲಟ್
ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಶಿಕ್ಷಕರ ದಾಖಲಾತಿ ಪರಿಶೀಲನೆಗೆ ಬಿಬಿಎಂಪಿ ಮುಂದಾಗಿದೆ. ಪರಿಶೀಲನೆ ವೇಳೆ ಟಿಇಟಿ ಅರ್ಹತಾ ಪ್ರಮಾಣ ಪತ್ರ ಸೇರಿ ಬೇರೆ ಬೇರೆ ದಾಖಲೆಯನ್ನ ಕೇಳಿದೆ. ಪಾಲಿಕೆಯ ಈ ದಿಢೀರ್ ನಿರ್ಧಾರದಿಂದ 728 ಹೊರಗುತ್ತಿಗೆ ಶಿಕ್ಷಕರು ಹಾಗೂ ಉಪನ್ಯಾಸಕರು ಕಂಗಾಲಾಗಿದ್ದಾರೆ.3 ಸದ್ಯ ಬಿಬಿಎಂಪಿ ಖಾಸಗಿ ಏಜೆನ್ಸಿ ಮೂಲಕ ಹೊರ ಗುತ್ತಿಗೆ ಶಿಕ್ಷಕರನ್ನ ನೇಮಕ ಮಾಡಿಕೊಂಡಿದೆ. ಈ ಹೊರಗುತ್ತಿಗೆ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ವರ್ಷದಲ್ಲಿ 11 ತಿಂಗಳು ಮಾತ್ರ ಗೌರವಧನ ನೀಡ್ತಿದ್ದಾರೆ. ಕಳೆದ ತಿಂಗಳ ಗೌರವಧಾನ ಇನ್ನೂ ಕೂಡ ಕೈ ಸೇರಿಲ್ಲ. ಅಲ್ಲದೆ ಖಾಯಂ ಶಿಕ್ಷಕರಿಗೆ ಹೊಲಿಕೆ ಮಾಡಿದ್ರೆ ತುಂಬಾ ಕಮ್ಮಿ ಸಂಬಳ. ಈಗ ಏಕಾಏಕಿ ಟಿಇಟಿ ಸೇರಿ ಇತರೆ ಅರ್ಹತಾ ಪ್ರಮಾಣ ಪತ್ರ ಕೇಳಲಾಗುತ್ತಿದೆ. ಇದು 200ಕ್ಕೂ ಹೆಚ್ಚು ಹೊರಗುತ್ತಿಗೆ ಶಿಕ್ಷಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ ಹುಟ್ಟಿಸಿದೆ.
ಇದನ್ನೂ ಓದಿ: ಸಂಪೂರ್ಣ ಬಹುಮತವಿದ್ದರೂ ಕಾಂಗ್ರೆಸ್ ಸರ್ಕಾರ ರಚಿಸುತ್ತಿಲ್ಲ. ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ
ಇನ್ನೂ ಯಾವ ಶಿಕ್ಷಕರಿಗೆ ಏನೇನೂ ಅರ್ಹತಾ ಪ್ರಮಾಣ ಪತ್ರ ಕೇಳಿದ್ದಾರೆ ಅಂತ ನೋಡೋದಾದ್ರೆ.
ಯಾವ ಅರ್ಹತೆ ಇರಬೇಕು?
1. ನರ್ಸರಿ ಶಾಲೆ ಬೋಧಕ ಸಿಬ್ಬಂದಿ NTT ಜೊತೆ ಪಿಯುಸಿ ಮಾಡಿರಬೇಕು
2. ಹಿಂದೆ SSCL ಮಾತ್ರ ಕೇಳಲಾಗಿತ್ತು. ಈಗ ಪಿಯುಸಿ ಕೇಳ್ತಿದ್ದಾರೆ
3. ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಟಿಇಟಿ ಅರ್ಹತೆ ಪಡೆಯಬೇಕು
4. ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಟಿಇಟಿ ಜೊತೆ ಬಿ.ಎಡ್
5. ಪ್ರೌಡಶಾಲಾ ಶಿಕ್ಷಕರು ಬಿ.ಎಡ್ ಜೊತೆಗೆ ಪದವಿ ಮುಗಿಸಿರಬೇಕು
ನರ್ಸರಿ ಶಾಲೆ ಬೋಧಕ ಸಿಬ್ಬಂದಿ NTT ಜೊತೆ ಪಿಯುಸಿ ಮಾಡಿರಬೇಕು.ಈ ಹಿಂದೆ SSCL ಮಾತ್ರ ಕೇಳಲಾಗಿತ್ತು. ಆದರೆ ಈಗ ಪಿಯುಸಿ ಕೇಳ್ತಿದ್ದಾರಂತೆ. ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಟಿಇಟಿ ಅರ್ಹತೆ ಪಡೆಯಬೇಕು. ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಟಿಇಟಿ ಜೊತೆ ಬಿ.ಎಡ್ ಮುಗಿಸಿರಬೇಕು. ಪ್ರೌಡಶಾಲಾ ಶಿಕ್ಷಕರು ಬಿ.ಎಡ್ ಜೊತೆಗೆ ಅಗತ್ಯವಿರುವ ಪದವಿ ಮುಗಿಸಿರಬೇಕು ಅಂತ ಬಿಬಿಎಂಪಿ ಸೂಚನೆ ನೀಡಿದೆ)
ಸದ್ಯ ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರ ಆದೇಶದ ಮೇರೆಗೆ ಸ್ಕ್ರೀನಿಂಗ್ ಕಮಿಟಿ ಹಂತಹಂತವಾಗಿ ದಾಖಲಾತಿ ಪರಿಶೀಲನೆ ಮಾಡ್ತಿದೆ. ಪರಿಶೀಲನೆ ವೇಳೆ ಅರ್ಹತಾ ಪ್ರಮಾಣ ಪತ್ರವನ್ನು ಕೂಡ ಕೇಳ್ತಿದ್ದಾರೆ.ಇನ್ನೂ ಈ ಬಗ್ಗೆ ಹೊರ ಗುತ್ತಿಗೆ ಶಿಕ್ಷಕರು ಹೇಳೋದು...ನಾವು ಬಹಳ ಕಮ್ಮಿ ಸಂಬಳಕ್ಕೆ ಹಲವು ವರ್ಷಗಳಿಂದ ಕೆಲಸ ಮಾಡ್ತಿದ್ದೇವೆ. ಈಗ ಅರ್ಹತಾ ಪ್ರಮಾಣ ಪತ್ರದ ನೆಪದಲ್ಲಿ ಕೆಲಸದಿಂದ ತೆಗದ್ರೆ ನಾವು ಜೀವನ ನಡೆಸುವುದು ಹೇಗೆ ಅಂತ ಪ್ರಶ್ನಿಸುತ್ತಿದ್ದಾರೆ.ಇನ್ನೂ ಈ ವಿಚಾರದ ಬಗ್ಗೆ ಬಿಬಿಎಂಪಿ ಆಯುಕ್ತರು ಹೇಳೋದು ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶ..ಈ ಹಿಂದೆಯೇ ಅರ್ಹತಾ ಪರೀಕ್ಷೆ ಪಾಸ್ ಮಾಡಲು ತಿಳಿಸಲಾಗಿತ್ತು. ಆದರೂ ಪಾಸ್ ಮಾಡಿಲ್ಲ.ಹೀಗಾಗಿ ಯಾರು ಅರ್ಹರಿಲ್ವೋ ಅವರನ್ನ ನೇಮಕ ಮಾಡಿಕೊಳ್ಳಲ್ಲ ಅಂದಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸ್ತುತ 163 ಶಾಲಾ-ಕಾಲೇಜುಗಳಿವೆ. ನರ್ಸರಿಯಿಂದ ಪದವಿ ಕಾಲೇಜುವರೆಗೆ ಸದ್ಯ 840 ಬೋಧಕರಿದ್ದು, ಈ ಪೈಕಿ 110 ಮಂದಿ ಕಾಯಂ ಬೋಧಕರಿದ್ದಾರೆ. ಉಳಿದ 730 ಮಂದಿ ಹೊರಗುತ್ತಿಗೆ ಶಿಕ್ಷಕರು... ಪಾಲಿಕೆ ಹೊರಗುತ್ತಿಗೆ ಶಿಕ್ಷಕರ ನೇಮಕವಾದ ಬಳಿಕ ಫಲಿತಾಂಶ, ಹಾಗೂ ದಾಖಲಾತಿ ಕೂಡ ಏರಿದೆ. ಹೀಗಾಗಿ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಬಾರದೆ ಎಂಬುದು ಗುತ್ತಿಗೆ ಶಿಕ್ಷಕರು ಅಳಲು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.