Farmers: ಕಳೆದ ವರ್ಷ ಅತಿವೃಷ್ಟಿ ಬರೆ ಆಯ್ತು, ಈ ವರ್ಷ ಅನಾವೃಷ್ಟಿ ಬಿಟ್ಟು ಬಿಡದೆ ಕಾಡುತ್ತಿರುವ ಬೆನ್ನಲ್ಲೇ ರೈತನಿಗೆ ಮತ್ತೊಂದು ಪ್ರಾಣಿ ಕಂಟಕ ಎದುರಾಗಿ ಮುಂಗಾರು ಬೆಳೆ ಉಳಿಸಿಕೊಳ್ಳುವುದೇ ಅನ್ನದಾತನಿಗೆ ಸವಾಲಾಗಿದೆ‌. ರೈತರು ಬೆಳೆ ಉಳಿಸಿಕೊಳ್ಳಲು ಯಾವ ಪ್ಲ್ಯಾನ್  ಮಾಡಿದ್ದಾರೆ ಗೊತ್ತಾ. ನೀವು ಈ ಸ್ಟೋರಿ ಒಮ್ಮೆ ಓದಲೇಬೇಕು... 


COMMERCIAL BREAK
SCROLL TO CONTINUE READING

ಹೌದು! ಹೀಗೆ ರಸ್ತೆ ಬದಿ ಬಳಸಿ ಬಿಸಾಡಿದ ಬಿಯರ್ ಬಾಟಲಿ ಆಯ್ದು ತಂದು ಕಟ್ಟಿಗೆಗೆ ನೇತು ಹಾಕಿ ಅವುಗಳ ಶಬ್ಧದಿಂದ ಶೇಂಗಾ, ಹೆಸರು, ಉದ್ದು, ಸೋಯಾಬಿನ್ ಬೆಳೆಯನ್ನು ನಿತ್ಯ ಚಿಗುರಿಗಳ ಕಾಟದಿಂದ ಕಾಯುತ್ತಾ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.


ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ, ಮುಳ್ಳೊಳ್ಳಿ, ಯರಗುಪ್ಪಿ, ಚಿಕ್ಕನೇರ್ತಿ, ಯರಿನಾರಯಣಪುರ ಸೇರಿದಂತೆ ಬಹುತೇಕ ಹಳ್ಳಿಗರ ಜಮೀನಿಗೆ ಚಿಗರಿ ಹಾಡುಹಗಲೇ ಹಸಿವನ್ನು ತಣಿಸಿಕೊಳ್ಳಲು ಅನ್ನದಾತನ ಬೆಳೆ ತಿನ್ನುತ್ತಿವೆ. 


ಇದನ್ನೂ ಓದಿ- ರಾಜ್ಯದಲ್ಲಿ ನೈರುತ್ಯ ಮುಂಗಾರು ಸಾಮಾನ್ಯ, ಕರಾವಳಿ ಹಾಗೂ ಒಳನಾಡಿನ ಹಲವೆಡೆ ಮಳೆ


ಒಂದೆಡೆ ಮಳೆ ಕೊರತೆ ಜತೆಗೆ ಇನ್ನೊಂದೆಡೆ ಚಿಗರಿ ಕಾಟ ಎದುರಾಗಿರುವುದು ಬೆಳೆಗಳೆಲ್ಲ ಮಣ್ಣು ಪಾಲು ಎನ್ನುವಂತಾಗಿದೆ. ಇದಕ್ಕೆ ವಿಶಿಷ್ಟವಾದ ಉಪಾಯ ಮಾಡಿರುವ ರೈತರ ಬಗ್ಗೆ ರೈತ ಮುಖಂಡ ಬಸವರಾಜ ಯೊಗಪ್ಪನವರ ಜೀ ಕನ್ನಡ ನ್ಯೂಸ್ ಜೊತೆಗೆ ಮಾತನಾಡಿದ್ದಾರೆ. 


ಪ್ರಸಕ್ತವಾಗಿ ಬಿತ್ತನೆ ಒಂದು ತಿಂಗಳು ಕಾಲ ತಡವಾಗಿ ಬಿತ್ತನೆಯಾಗಿದ್ದರಿಂದ ಈಗಷ್ಟೇ ಬೆಳೆಗಳು ಮೇಲೆಳುತ್ತಿದೆ. ಆದರೆ ಈ ನಡುವೆ ಚಿಗರೆ ಕಾಟದಿಂದ ರೈತ ಬೇಸತ್ತು ಹೋಗಿದ್ದಾನೆ. ಈಗಷ್ಟೇ ಸಾಲ ಮಾಡಿ ಬೀಜ, ಗೊಬ್ಬರ ಹಾಕಿ ಬಿತ್ತನೆ ಮಾಡಿದ್ದ ರೈತನಿಗೆ ಬೆಳೆ ಇನ್ನೇನು ಮೇಲೆ ಬರುತ್ತಿದ್ದಂತೆ ಬೆಳೆಗಳನ್ನು ಹಾಳಾಗುತ್ತಿರುವುದನ್ನು ಕಂಡು ಮರಗುತ್ತಿದ್ದು, ಏನಪ್ಪಾ ಮಾಡೋದು ಎಂದು ಕೈ ಕಟ್ಟಿ ಕುಳಿತ್ತಿದ್ದಾನೆ. ಬೇಗನೆ ಬಿತ್ತನೆಯಾಗಿದ್ದರೆ ಈ ಹೊತ್ತಿಗೆ ಇವುಗಳ ಕಾಟ ಎದುರಾಗಿದ್ದರೆ ಬೆಳೆಗಳು ಮೊಣಕಾಲು ಎತ್ತರವಾಗಿರುವುದರಿಂದ ಹೆಚ್ಚಿನ ಹಾನಿ ಆಗುತ್ತಿರಲಿಲ್ಲ. ಮೊದಲೇ ಎರಡೆಲೆ ಮೇಲೆ ಬಂದಿರುವುದರಿಂದ ಚಿಗರಿ ಆ ಎರಡು ಎಲೆ ತಿನ್ನುತ್ತಿರುವುದರಿಂದ ಬೆಳೆಯೇ ಸಂಪೂರ್ಣ ನಾಶ ಎನ್ನುವಂತಾಗಿದೆ ಎನ್ನುವ ಆತಂಕ ನೊಂದ ರೈತ  ಬೀರಪ್ಪ ಹೇಳಿದ್ದು.


ಇದನ್ನೂ ಓದಿ- Viral Video: ATMನಲ್ಲಿ ಪೆಪ್ಪರ್ ಸ್ಪ್ರೇ ಬಳಸಿ ವ್ಯಕ್ತಿ ಮೇಲೆ ಹಲ್ಲೆ, 7 ಲಕ್ಷ ದೋಚಿದ ಗ್ಯಾಂಗ್!


ಸದ್ಯ ಮುಂಗಾರು ಬೆಳೆಗೆ ಚಿಗರಿಗಳ ಕಾಟ ಅತಿಯಾಗಿರುವ ಕಾರಣ ರೈತರು ಸ್ಥಳೀಯ ಅರಣ್ಯ ಇಲಾಖೆಗೆಗೆ ವಿಷಯ ತಿಳಿಸಿದ್ದು, ನಮ್ಮ ಬೆಳೆ ಉಳಿಸಿಕೊಡಿ ಇಲ್ಲವೆ ಬೆಳೆ ವಿಮೆ, ಬೆಳೆ ಪರಿಹಾರವನ್ನಾದರೂ ಸರ್ಕಾರ  ಕೊಡಲಿ ಎನ್ನುತ್ತಿದ್ದಾರೆ. ಚಿಗರಿಗಳು ಹಿಂಡು ಹೊಲಗಳಿಗೆ ದಾಳಿ ಮಾಡಿ ಬೆಳೆಗಳನ್ನೆಲ್ಲ ನಾಶ ಮಾಡುತ್ತಿವೆ. ಕಣ್ಣೆದುರೇ ಬೆಳೆಗಳು ನಾಶವಾಗುತ್ತಿರುವುದನ್ನು ಕಂಡು ಕೆಲವು ರೈತರು ಮಧ್ಯರಾತ್ರಿ ಹೊಲಕ್ಕೆ ಹೋಗಿ ಚಿಗರಿ ಬೆದರಿಸುವ ಕಾರ್ಯ ಮಾಡುತ್ತಿರುವುದನ್ನು ನೋಡಿದರೆ ಇವುಗಳ ಕಾಟ ಎಷ್ಟರ ಮಟ್ಟಿಗೆ ಎಂಬುದನ್ನು ನಿರೂಪಿಸುತ್ತದೆ. ಚಿಗರಿ ಕಾಟದಿಂದ ಬಚಾವ್‌ ಆಗಲು ಹೊಲಗಳಲ್ಲಿ ಬೀಯರ್ ಬಾಟಲಿಗಳನ್ನು ಕಟ್ಟಲಾಗಿದೆ. ಗಾಳಿ ಬೀಸಿದಾಗ ಅವುಗಳ ಸದ್ದಿಗೆ ಆದರೂ ಚಿಗರಿ ಬರದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಇಲ್ಲಿನ ರೈತರು ತಿಳಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.