ಬೆಳಗಾವಿ: ಬೆಳಗಾವಿಯ ಎಂಇಎಸ್‌ ಮಾಜಿ ಶಾಸಕ ಸಾಂಬಾಜಿ ಪಾಟೀಲ್‌ ಅವರ ಪುತ್ರ ಸಾಗರ್‌ ಸಾಂಬಾಜಿ ಪಾಟೀಲ್‌ (28) ರೈಲಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.


COMMERCIAL BREAK
SCROLL TO CONTINUE READING

ಸೋಮವಾರ ರಾತ್ರಿ ಸ್ನೇಹಿತರ ಜೊತೆ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ರೈಲು ಶ್ರೀರಾಂಪುರ ಬಳಿ ಬಂದಾಗ ಸಾಗರ್‌ ಆಯತಪ್ಪಿ  ಕೆಳಗೆ ಬಿದ್ದಿದ್ದಾರೆ. ಪರಿಣಾಮವಾಗಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.


ಘಟನೆ ಕುರಿತು ಬೆಂಗಳೂರಿನ ಸಿಟಿ ರೈಲ್ವೆ ಸ್ಟೇಷನ್ನಲ್ಲಿ ಪ್ರಕರಣ ದಾಖಲಾಗಿದ್ದು, ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.