ಕುಟುಂಬ:
ಜನನ  15/09/1971 ಬಿ. ಆಂಜಿನೇಯಲು ಮತ್ತು ಬಿ ಲಕ್ಷ್ಮೀದೇವಿ ಅವರ ದ್ವಿತೀಯ ಸುಪುತ್ರನಾಗಿ 1971 ರ ಸೆ.15ರಂದು ಜನಿಸಿದ ನಾಗೇಂದ್ರ ಅವರು  ಪತ್ನಿ ಬಿ. ಮಂಜುಶ್ರೀ ಮಕ್ಕಳಾದ ವಿಷ್ಣು ತಾರಕ್, ರಾಣಕ್ ರತ್ನಾ ಸಹೋದರ. ಬಿ ವೆಂಕಟೇಶ್ ಪ್ರಸಾದ್ ಮತ್ತು ಇಬ್ಬರು ಸಹೋದರಿಯರು ಇದ್ದಾರೆ.


COMMERCIAL BREAK
SCROLL TO CONTINUE READING

ವಿದ್ಯಾಭ್ಯಾಸ:
ಬಳ್ಳಾರಿ ನಗರದಲ್ಲೇ ವಿದ್ಯಾಭ್ಯಾಸ ಮಾಡಿದ ಇವರು 1 ರಿಂದ  5 ನೇ ತರಗತಿಯನ್ನು ಬಾಲಾಜಿ ರಾವ್ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 6,7 ಮತ್ತು  8ನೇ ತರಗತಿಯನ್ನು ಸೇಂಟ್ ಜಾನ್ ನಂತರ 9 ಮತ್ತು 10 ನೇ ತರಗತಿಯನ್ನು ಮುನಿಸಿಪಲ್ ಹೈಸ್ಕೂಲ್ ನಲ್ಲಿ, ಪಿಯುಸಿಯನ್ನು ಮುನಿಸಿಪಲ್ ಕಾಲೇಜ್ ಹಾಗೂ ಬಿಕಾಂ ಪದವಿಯನ್ನು ವೀರಶೈವ ಕಾಲೇಜಿನಲ್ಲಿ ಅಭ್ಯಾಸ ಮಾಡಿದ್ದಾರೆ.


ಇದನ್ನೂ ಓದಿ-Rain Alert: ರಾಜ್ಯದಲ್ಲಿ ಇನ್ನೂ 2 ದಿನ ವರುಣಾರ್ಭಟ: ಈ ಜಿಲ್ಲೆಗಳಲ್ಲಿ ಗುಡ್ಡ ಕುಸಿತದ ಭೀತಿ-ಹೈ ಅಲರ್ಟ್ ಘೋಷಿಸಿದ ಇಲಾಖೆ!


ಬಿಸಿನೆಸ್:
ವಿದ್ಯಾಭಾಸದ ನಂತರ ನಗರದಲ್ಲಿ ವಿವಿಧ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡು ಮಾಜಿ ಸಚಿವ ಮುಂಡ್ಲೂರು ದಿವಾಕರ ಬಾಬು ಅವರ ಹಿಂಬಾಲಕರಾಗಿ ಬೆಳೆದರು.  ಕೇಬಲ್ ಗಲಾಟೆಯೊಂದರಲ್ಲಿ ನಡೆದ ಗಲಾಟೆಯಲ್ಲಿ ತಮ್ಮ ಬೆಂಬಲಕ್ಕೆ  ದಿವಾಕರ ಬಾಬು ನಿಲ್ಲಲಿಲ್ಲ ಎಂಬ ಕಾರಣಕ್ಕೆ ಆಗಷ್ಟೇ ಪ್ರವರ್ಧ ಮಾನಕ್ಕೆ ಬರುತ್ತಿದ್ದ ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು ಅವರ ಗುಂಪಿಗೆ ಬಿಜೆಪಿ ಪಕ್ಷದ ಮೂಲಕ 2004ರಲ್ಲಿ ಸೇರಿದರು.


ರೆಡ್ಡಿ ಬಳಗದಲ್ಲಿ ಗುರುತಿಸಿಕೊಂಡ ನಾಗೇಂದ್ರ:
ಅದಿರು ಸಾಗಾಣಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡು ರೆಡ್ಡಿ ಬಳಗದೊಂದಿಗೆ ವ್ಯವಹಾರ ನಡೆಸುತ್ತ ಅರ್ಥಿಕವಾಗಿ ಮತ್ತು ಸಾವಿರಾರು ಹಿಂಬಾಲಕರ ಗುಂಪಿನಿಂದ ಪ್ರವರ್ಧಮಾನಕ್ಕೆ ಬಂದರು. ಅಕ್ರಮ ಅದಿರು ಸಾಗಾಣಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರ ಜೊತೆ ಒಂದುವರೆ ವರ್ಷಗಳ ಕಾಲ ಸಿಬಿಐನಿಂದ ಬಂಧಿತರಾಗಿ ಜೈಲುವಾಸ ಅನುಭವಿಸಿ, ಜಾಮೀನು ಪಡೆದುಕೊಂಡಿದ್ದಾರೆ. ಇನ್ನೂ ಹತ್ತಾರು ಪ್ರಕರಣಗಳ‌ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದೆ.


ಇದನ್ನೂ ಓದಿ-ಸಿದ್ದರಾಮಯ್ಯ ಸಂಪುಟಕ್ಕೆ 24 ನೂತನ ಸಚಿವರ ಸೇರ್ಪಡೆ


ರಾಜಕೀಯ ಜೀವನ
ಬಳ್ಳಾರಿಯಲ್ಲಿಯೇ ಹುಟ್ಟಿ ಬೆಳೆದ ನಾಗೇಂದ್ರ ಅವರು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ 2008ರಲ್ಲಿ ಸ್ಪರ್ಧೆ ಮಾಡಲು ಬಯಸಿದ್ದರು. ಆದರೆ ಆ ಕ್ಷೇತ್ರದಲ್ಲಿ ಆಗ ಶ್ರೀರಾಮುಲು ಅವರು ಸ್ಪರ್ಧೆ ಮಾಡಲು ಬಯಸಿದ್ದರಿಂದ ಜನಾರ್ಧನರೆಡ್ಡಿ ಅವರ ಮಾರ್ಗದರ್ಶನದಂತೆ ಕೂಡ್ಲಿಗಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾದರು. ಆದರೆ ಈ ಮಧ್ಯೆ ನಡೆದ ರಾಜಕೀಯ ಬೆಳವಣಿಗೆ, ಅಕ್ರಮ ಅದಿರು ಸಾಗಾಣಿಕೆ ಆರೋಪ ಜೈಲುವಾಸದಿಂದ ಬೇಸತ್ತು ಶ್ರಿರಾಮುಲು ರೆಡ್ಡಿ ಬಳಗದಲ್ಲಿಯೇ ಇದ್ದರೂ, ಶ್ರೀರಾಮುಲು‌ ಸ್ಥಾಪಿಸಿದ ಬಿಎಸ್ ಆರ್ ಪಕ್ಷಕ್ಕೆ ಹೋಗದೆ ಬಿಜೆಪಿ ತೊರೆದು ಪಕ್ಷೇತರರಾಗಿ 2013ರಲ್ಲಿ ಕೂಡ್ಲಿಗಿಯಲ್ಲಿಯೇ ಸ್ಪರ್ಧೆ ಮಾಡಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.



ನಂತರ 2013ರಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಹೊಸಪೇಟೆಯಲ್ಲಿ‌ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷ ಸೇರಿ, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಶ್ರೀರಾಮುಲು ಅವರ ಸಹೋದರ ಸಣ್ಣ ಪಕ್ಕೀರಪ್ಪ ಅವರನ್ನು ಸೋಲುಸಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಈ ಬಾರಿ 2023ರಲ್ಲಿ ನಡೆದ ಚುನಾವಣೆಗೆ ಬಿಜೆಪಿ ಉನ್ನತ ನಾಯಕ ಬಿ.ಶ್ರೀರಾಮುಲು ಬಂದು ಸ್ಪರ್ಧೆ ಮಾಡುತ್ತಾರೆ ಎಂದಾಗಲೂ ದೃತಿಗೆಡದೆ. ಗಟ್ಟಿ ಧೈರ್ಯದಿಂದ ಆ ದೇವರು ಒಬ್ವರನ್ನು ಬಿಟ್ಟರೆ ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಲಿ ನಾನು ಗೆಲೆಯುತ್ತೇನೆ ಎಂಬ ವಿಶ್ವಾಸದ ಮಾತುಗಳನ್ನಾಡಿ. ಅದರಂತೆ ಶ್ರೀರಾಮುಲು‌ ವಿರುದ್ದ ಗೆದ್ದು ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ