ಬೇಲೂರು : ಸಿಡಿಲು ಬಡಿದು ವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇಗುಲದ ಕಳಸ ಗೋಪುರಕ್ಕೆ ಹಾನಿಯಾಗಿದೆ. ಗುರುವಾರ ಮಧ್ಯಾಹ್ನ 3.30ರ ಸಮಯದಲ್ಲಿ ಸುರಿದ ಭಾರೀ ಮಳೆಯೊಂದಿಗೆ ಸಿಡಿಲು ಬಡಿದು ಶ್ರೀ ಚನ್ನಕೇಶವ ದೇವಾಲಯದ ಮೇಲ್ಭ್ಬಾಗದ ಕಳಸದ ಪಕ್ಕ ಎರಡು ಕೊಂಬುಗಳಲ್ಲಿ ಒಂದು ಭಾಗ ಬಿರುಕು ಬಿಟ್ಟಿದೆ. 


COMMERCIAL BREAK
SCROLL TO CONTINUE READING

ಸ್ಥಳಕ್ಕೆ ತಹಶೀಲ್ದಾರ್ ಎಂ.ಮಮತಾ ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿದ ಅವರು, ವಿಶ್ವ ಪ್ರಸಿದ್ಧ ಚನ್ನಕೇಶವ ಗೋಪುರಕ್ಕೆ ಸಿಡಿಲಿನಿಂದ ಕಳಶದ ಗೋಪುರಕ್ಕೆ ಸ್ವಲ್ಪ ಹಾನಿಯಾಗಿದ್ದು, ಈ ಕುರಿತು ಪ್ರಾಚ್ಯ ವಸ್ತು ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.


ಇದನ್ನೂ ಓದಿ-ʼಲಿಂಗಾಯತ ಸಿಎಂʼ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ : ಸಿಎಂ ಸ್ಪಷ್ಟನೆ


ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್ ಹಾಗು ನರಸಿಂಹಪ್ರಿಯಭಟ್ ಮಾತನಾಡಿ, ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ದೇವಾಲಯಕ್ಕೆ, ಗೋಪುರಗಳಿಗೆ ಸಿಡಿಲು ಮತ್ತು ಪ್ರಕೃತಿ ವಿಕೋಪಕ್ಕೆ ಹಾನಿಯಾಗದಂತೆ ನಿರ್ಮಾಣ ಮಾಡಿದ್ದಾರೆ. ಕಳಸದ ಪಕ್ಕ ಕಿವಿಯಂತಿರುವ ಎರಡು ಓರು ಕಂಬಗಳಿಗೆ ಸಿಡಿಲಿನಿಂದ ಹಾನಿಯಾಗಿದೆ. ಆದರಿಂದ ಭಕ್ತರು ಗಾಬರಿಪಡುವ ಅವಶ್ಯಕತೆ ಇಲ್ಲ. ಈಗಾಗಲೇ ಮೇಲಧಿಕಾರಿಗಳು, ಆಗಮಿಕರ ಬಳಿ ಚರ್ಚಿಸಿ ಅವರ ಸಲಹೆ ಪಡೆದು ಶಾಸ್ತ್ರೋಕ್ತವಾಗಿ ಶುದ್ಧಿ ಹಾಗು ಅಂಗೋದಕ ಶುದ್ಧಿ ಮಾಡಲಾಗುವುದು ಎಂದರು.


ಇದನ್ನೂ ಓದಿ: ವರುಣ ಬಳಿಕ ಚಾಮರಾಜನಗರದಲ್ಲಿ 2ನೇ ಸುತ್ತಿನ ಮತಬೇಟೆ


ಮುಜರಾಯಿ ಇಲಾಖೆಯ ಸಿ.ಒ.ಗೌತಮ್ ಮಾತನಾಡಿ, ಈ ಹಿಂದೆ ಹಲವಾರು ಬಾರಿ ಗಾಳಿ ಮಳೆ, ಈ ರೀತಿ ಸಿಡಿಲು ಬಡಿದ ಸಂದರ್ಭದಲ್ಲಿ ಹಾನಿಯಾಗದಂತೆ ಸಿಡಿಲು ನಿರೋಧಕ ಪಟ್ಟಿಯನ್ನು ಹಾಕಲಾಗಿದ್ದು, ಕೆಲ ದಿನಗಳ ಹಿಂದೆ ದೇಗುಲದ ಗೋಪುರಕ್ಕೆ ಬಣ್ಣ ಬಳಿಯಲಾಗಿತ್ತು.ಈ ಸಂದರ್ಭದಲ್ಲಿ ಅಲ್ಲಿ ಯಾವುದಾದರೂ ವೈರ್ ತುಂಡಾಗಿದ್ದಲ್ಲಿ ತಕ್ಷಣವೇ ಅದರ ಬಗ್ಗೆ ಗಮನ ಹರಿಸಿ ಸರಿಪಡಿಸಲಾಗುವುದು ಎಂದು ತಿಳಿಸಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.