ಬೆಂಗಳೂರು: ಯುವತಿಯ ಮೇಲೆ ಆಸಿಡ್ ಎರಚಿ ತಲೆಮರೆಸಿಕೊಂಡಿದ್ದ ನಾಗೇಶ್ ಬಾಬು ಅಲಿಯಾಸ್ ನಾಗೇಶ್‍ನನ್ನು ಕೊನೆಗೂ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಸ್ವಾಮೀಜಿಯ ವೇಷ ಧರಿಸಿ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಕಳೆದ 16 ದಿನಗಳಿಂದ ತಲೆಮರೆಸಿಕೊಂಡಿದ್ದ ನಾಗೇಶ್‍ನನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ಏಪ್ರಿಲ್ 28ರಂದು ಬೆಂಗಳೂರಿನ ಸುಂಕದಕಟ್ಟೆ ಬಳಿ ಆರೋಪಿ ನಾಗೇಶ್ 23 ವರ್ಷದ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ.


ಇದನ್ನೂ ಓದಿ: ಜನತಾ ಜಲಧಾರೆ ಮೂಲಕ ಮಿಷನ್ 123 ಯುದ್ಧ ಆರಂಭ: ಹೆಚ್.ಡಿ.ಕುಮಾರಸ್ವಾಮಿ ಘೋಷಣೆ


ತನ್ನನ್ನು ಪ್ರೀತಿಸುವಂತೆ ಈತ ಹಲವು ವರ್ಷಗಳಿಂದ ಯುವತಿಯ ಹಿಂದೆ ಬಿದ್ದಿದ್ದ. ಯುವತಿ ಇದಕ್ಕೆ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಕ್ರೂರಿ ನಾಗೇಶ್ ಆ್ಯಸಿಡ್ ದಾಳಿ ನಡೆಸಿ ಎಸ್ಕೇಪ್ ಆಗಿದ್ದ. ನಾಗೇಶ್‍ನನ್ನು ಹುಡುಕುವ ಸಲುವಾಗಿ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು.


ಮೊಬೈಲ್, ಎಟಿಎಂ ಬಳಸದ ನಾಗೇಶ್‍ನನ್ನು ಪತ್ತೆ ಹಚ್ಚುವದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ನಾಗೇಶ್‍ ಪತ್ತೆಯಾಗದ ಹಿನ್ನೆಲೆ ಕಾಮಾಕ್ಷಿಪಾಳ್ಯ ಪೊಲೀಸರು ಈ ಬಗ್ಗೆ ಲುಕ್‍ಔಟ್ ನೋಟಿಸ್ ಸಹ ಹೊರಡಿಸಿದ್ದರು. ಆತನ ಹೋಲುವ ವ್ಯಕ್ತಿ ತಿರುವಣ್ಣಾಮಲೈನಲ್ಲಿರುವ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.


ಇದನ್ನೂ ಓದಿ: PSI Recruitment Scam: ಅಕ್ರಮದ ಮಾಸ್ಟರ್ ಮೈಂಡ್ DySP ಶಾಂತಕುಮಾರ್ ಬಂಧನ


ಈ ಹಿನ್ನೆಲೆ ತಿರುವಣ್ಣಾಮಲೈಗೆ ತೆರಳಿದ ಪೊಲೀಸರ ಬಲೆಗೆ ಸ್ವಾಮೀಜಿ ಪೋಷಕು ತೊಟ್ಟಿದ್ದ ಆ್ಯಸಿಡ್ ನಾಗ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಸದ್ಯ ಆತನನ್ನು ಬಂಧಿಸಿರುವ ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.