ಸಿಲಿಕಾನ್ ಸಿಟಿ ಜನರೇ ಎಚ್ಚರ ಎಲ್ಲೆಂದರಲ್ಲಿ ಪ್ರತ್ಯಕ್ಷ ಆಗಬಹುದು ಬುಸ್ ಬುಸ್ ನಾಗ: ಎಚ್ಚರದಿಂದರಲು ಸೂಚನೆ..!!
ನಿರಂತರ ಮಳೆಯಿಂದಾಗಿ ಬೆಂಗಳೂರಿನಲ್ಲಿ ಹಾವುಗಳ ಕಾಟ ಶುರುವಾಗಿದೆ. ಮನೆಗಳಲ್ಲಿ ಹಾವು ಪ್ರತ್ಯಕ್ಷವಾಗಿ ಜನರಲಿ ಆತಂಕ ಉಂಟು ಮಾಡಿದೆ. ಇದಕ್ಕೆ ಪೂರಕ ಎಂಬಂತೆ ಕಬ್ಬನ್ ಪಾರ್ಕ್ ನಲ್ಲಿ ಏಕಾಎಕಿಯಾಗಿ ವಿಷಕಾರಿ ಹಾವೊಂದು ಸೆರೆಯಾಗಿ ಆತಂಕ ಇಮ್ಮಡಿಗೊಳಿಸಿದೆ.
ಬೆಂಗಳೂರು: ನಿರಂತರ ಮಳೆಯಿಂದಾಗಿ ಬೆಂಗಳೂರಿನಲ್ಲಿ ಹಾವುಗಳ ಕಾಟ ಶುರುವಾಗಿದೆ. ಮನೆಗಳಲ್ಲಿ ಹಾವು ಪ್ರತ್ಯಕ್ಷವಾಗಿ ಜನರಲಿ ಆತಂಕ ಉಂಟು ಮಾಡಿದೆ. ಇದಕ್ಕೆ ಪೂರಕ ಎಂಬಂತೆ ಕಬ್ಬನ್ ಪಾರ್ಕ್ ನಲ್ಲಿ ಏಕಾಎಕಿಯಾಗಿ ವಿಷಕಾರಿ ಹಾವೊಂದು ಸೆರೆಯಾಗಿ ಆತಂಕ ಇಮ್ಮಡಿಗೊಳಿಸಿದೆ.
ಮಳೆ ಶುರುವಾಗ್ತಿದ್ದಂತೆ ನಗರದಲ್ಲಿ ಹಾವುಗಳ ಕಾಟ ಹೆಚ್ಚಾಗಿದೆ. ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಹಾವುಗಳ ಹ್ಯಾಚಿಂಗ್ (ಸಂತಾನೋತ್ಪತ್ತಿ) ಟೈಮ್ ಆಗಿರೋದ್ರಿಂದ ಮೊಟ್ಟೆ ಹೊಡೆದು ಹಾವಿನ ಮರಿಗಳು ಹೊರ ಬರುತ್ತವೆ. ಈ ವೇಳೆ ಮಳೆ, ಚಳಿ ಇರುವುದರಿಂದ ಬೆಚ್ಚಗಿನ ಜಾಗ ಹುಡುಕಿಕೊಂಡು ಹಾವುಗಳು ಹೋಗುತ್ತವೆ. ಹೀಗಾಗಿ ಮನೆಯಲ್ಲಿರುವ ಎಲ್ಲಾ ಜಾಗಗಳನ್ನು ಪ್ರತಿದಿನ ಕ್ಲೀನ್ ಮಾಡಿಡಲು ಪಾಲಿಕೆ ಮನವಿ ಮಾಡಿದೆ.
ರಾಜಧಾನಿಯ ಕಬ್ಬನ್ ಪಾರ್ಕ್ ನಲ್ಲಿ ರೌಂಡ್ಸ್ ಹಾಕ್ತಿದೆ ಬುಸ್ ಬುಸ್ ನಾಗಪ್ಪ;
ಕಬ್ಬನ್ ಪಾರ್ಕ್ ನಲ್ಲಿ ಕೆಲಸ ಮಾಡುವ ಕಾರ್ಮಿಕರ ಕಣ್ಣಿಗೆ ನಿತ್ಯವೂ ವಿಷಕಾರಿ ಹಾವಿನ ದರ್ಶನ ಆಗುತ್ತಿತ್ತು. ಆರು ಅಡಿಗೂ ಅದಿಕ ಉದ್ದ ಇರುವ ವಿಷಕಾರಿ ಹಾವು ಕಂಡು ಇಲ್ಲಿನ ಕೂಲಿ ಕಾರ್ಮಿಕರು ಭೀತಿಗೊಳಗಾಗಿದ್ದರು. ಒಂದು ವಾರದಿಂದ ದರ್ಶನಕೊಟ್ಟು ಎಸ್ಕೇಪ್ ಆಗ್ತಿದ್ದ ನಾಗಪ್ಪ ಈಗ ಸೆರೆಯಾಗಿದ್ದಾನೆ. ಅನಿಮಲ್ ರೆಸ್ಕ್ಯೂ ಟೀಂ ನಿಂದ ವಿಷಕಾರಿ ನಾಗರಹಾವು ಸೆರೆಯಾಗಿದೆ. ಸೆರೆ ಹಿಡಿದ ನಾಗರ ಹಾವನ್ನು ಅರಣ್ಯ ಪ್ರದೇಶಕ್ಕೆ ಕೊಂಡ್ಡೊಯ್ಯಲಾಗಿದೆ. ಜೊತೆಗೆ ಪಾರ್ಕ್ ನಲ್ಲಿ ಇನ್ನಷ್ಟು ಹಾವುಗಳ ಓಡಾಟವಿದ್ದು ವಾಕಿಂಗ್, ಜಾಗಿಂಗ್ ಅಂತ ಕಬ್ಬನ್ ಪಾರ್ಕ್ ಗೆ ಹೋಗುವ ಜನರು ಎಚ್ಚರದಿಂದಿರುವುದು ಸೂಕ್ತ.
ನಗರದಲ್ಲಿ ಪ್ರತಿನಿತ್ಯ 50ಕ್ಕೂ ಅಧಿಕ ಹಾವುಗಳ ರಕ್ಷಣೆ;
ಪ್ರತಿದಿನ ನಗರದಲ್ಲಿ 50ಕ್ಕೂ ಹೆಚ್ಚಿನ ವಿಷಕಾರಿ ಹಾವುಗಳು ಮನೆಯ ಅಡುಗೆಕೋಣೆ, ಶೂ ಮುಂತಾದ ಜಾಗದಲ್ಲಿ ಪತ್ತೆಯಾಗ್ತಿವೆ. ಹೀಗಾಗಿ ಬಿಬಿಎಂಪಿಯಿಂದ ಎಲ್ಲಾ ಕಡೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಬಿಬಿಎಂಪಿ ಅರಣ್ಯ ವಿಭಾಗದ ರೆಸ್ಕ್ಯೂ ಟೀಂ ಸಿಬ್ಬಂದಿಗಳು ಫುಲ್ ಅಲರ್ಟ್ ಆಗಿದ್ದು, ನಿದ್ದೆ ಬಿಟ್ಟು ರಾಜಧಾನಿ ತುಂಬಾ ಓಡಾಡಿ ಹಾವುಗಳ ರಕ್ಷಣೆ ನಡೆಯುತ್ತಿದೆ. ಅಲ್ಲದೇ ಜನ ಆದಷ್ಟು ಎಚ್ಚರಿಕೆಯಿಂದ ಇರಲು ಬಿಬಿಎಂಪಿ ರೆಸ್ಕ್ಯೂ ಟೀಮ್ ಮನವಿ ಮಾಡಿಕೊಂಡಿದೆ.
ಒಟ್ಟಾರೆ ಮಳೆಗಾಲದ ಆರಂಭದಲ್ಲೇ ಮೈ ಕೊರೆವ ಚಳಿ ಅನುಭವಿಸುತ್ತಿರುವ ಬೆಂಗಳೂರಿಗರು ಈಗ ವಿಷ ಸರ್ಪಗಳ ದರ್ಶನದಿಂದ ಬೆದರಿ ಬದುಕುವ ಸ್ಥಿತಿ ಎದುರಾಗಿದ್ದು, ಎಲ್ಲಾದರು ಕಂಡರೇ ಕೂಡಲೇ ಪಾಲಿಕೆ ಅರಣ್ಯ ಸಿಬ್ಬಂದಿಗೆ +91 98450 80903 ಮಾಹಿತಿ ನೀಡಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ