ಬೆಂಗಳೂರು:  ಮೆಜೆಸ್ಟಿಕ್ ನಿಂದ ದೀಪಾಂಜಲಿನಗರಕ್ಕೆ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ನೋಡು ನೋಡುತ್ತಿದ್ದಂತೆ ಬಸ್ ಹೊತ್ತಿ ಉರಿದಿರುವ ಘಟನೆ ನಗರದ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಮೆಜೆಸ್ಟಿಕ್ ನಿಂದ ಚಾಮರಾಜಪೇಟೆ ವಿವಿಪುರಂ ಮಾರ್ಗವಾಗಿ  ಮಕ್ಕಳಕೂಟ ಬಸ್ ನಿಲ್ದಾಣಕ್ಕೆ ಬರ್ತಿದ್ದ ಬಸ್ನಲ್ಲಿ (BMTC Bus) ಮೊದಲು ಹೊಗೆ ಕಾಣಿಸಿಕೊಂಡಿದೆ.  ಬಳಿಕ ಡ್ರೈವರ್ ಕೂಡಲೇ ಹೊಗೆ ಬೆಂಕಿ ಎಂದು ಕಿರುಚುತ್ತಾ ಬಸ್ ನಿಲ್ಲಿಸಿದ್ದಾರೆ. ಈ ವೇಳೆ ಬಸ್ ನಿಂದ ಕೆಳಗೆ ಇಳಿದ ಡ್ರೈವರ್ ಹಾಗೂ ಕಂಡಕ್ಟರ್ ಕೂಡಲೇ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದು, ಆಗಬೇಕಿದ್ದ ಬಾರೀ ಅನಾಹುತ ತಪ್ಪಿದಂತಾಗಿದೆ.


ಇದನ್ನೂ ಓದಿ- Covid-19 Case : ಕೊರೋನಾ ಮಹಾ ಸ್ಪೋಟ : ಸೆಲ್ ಫ್ಯಾಕ್ಟರಿಯಲ್ಲಿ 40 ಜನಕ್ಕೆ ಪಾಸಿಟಿವ್


ಸುಮಾರು 40 ಮಂದಿ ಪ್ರಯಾಣಿಕರೊಂದಿಗೆ (Passengers) ಪ್ರಯಾಣಿಸುತ್ತಿದ್ದ  KA57F 1592 ಬಸ್ ನಲ್ಲಿ ಚಾಮರಾಜಪೇಟೆಯ ಮಕ್ಕಳಕೂಟ ಸರ್ಕಲ್ ಬಳಿ ಈ ಅವಘಡ ಸಂಭವಿಸಿದ್ದು, ಡ್ರೈವರ್ ಸಮಯ ಪ್ರಜ್ಞೆಯಿಂದಾಗಿ ಯಾವುದೇ ಜೀವಹಾನಿ ಆಗಿಲ್ಲ. 


ಇದನ್ನೂ ಓದಿ- Coronavirus in Karnataka : ಬೆಂಗಳೂರಿನಲ್ಲಿ ಮೂರನೇ ಅಲೆಯ ಆತಂಕ , 30 ಸಾವಿರ ದಾಟಿದೆ ನಿತ್ಯದ ಸೋಂಕಿತರ‌ ಸಂಖ್ಯೆ


ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ:
ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದು, ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - 
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.