Flying Taxi: ಬೆಂಗಳೂರು ವಿಮಾನ ನಿಲ್ದಾಣದಿಂದ ಫ್ಲೈಯಿಂಗ್ ಟ್ಯಾಕ್ಸಿ.. ಟ್ರಾಫಿಕ್ ಜಾಮ್ನಿಂದ ಮುಕ್ತಿ! ದರ ಸೇರಿದಂತೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಬೆಂಗಳೂರು ವಿಮಾನ ನಿಲ್ದಾಣವು ಸರಳಾ ಏವಿಯೇಷನ್ ಸಹಯೋಗದಲ್ಲಿ ಈ ಫ್ಲೈಯಿಂಗ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಬೆಂಗಳೂರು: ನಗರದಲ್ಲಿ ತೀವ್ರ ಟ್ರಾಫಿಕ್ ಜಾಮ್ ಸಮಸ್ಯೆಯಾಗಿ ಪರಿಣಮಿಸಿದೆ. ಈ ದಟ್ಟಣೆಯನ್ನು ಕಡಿಮೆ ಮಾಡಲು ಮಹತ್ವದ ಹೆಜ್ಜೆಯಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಪ್ರಯಾಣಿಕರಿಗೆ ಫ್ಲೈಯಿಂಗ್ ಟ್ಯಾಕ್ಸಿಗಳನ್ನು ಪರಿಚಯಿಸಲು ನಿರ್ಧರಿಸಿದೆ.
ಬೆಂಗಳೂರು ವಿಮಾನ ನಿಲ್ದಾಣವು ಸರಳಾ ಏವಿಯೇಷನ್ ಸಹಯೋಗದಲ್ಲಿ ಈ ಫ್ಲೈಯಿಂಗ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಉಪಕ್ರಮದಿಂದ ಪ್ರಯಾಣದ ಸಮಯ ಕಡಿಮೆಯಾಗುತ್ತದೆ ಮತ್ತು ಸಂಚಾರ ದಟ್ಟಣೆ ಕೊಂಚ ಕಡಿಮೆಯಾಗಬಹುದು. ಬೆಂಗಳೂರಿನಲ್ಲಿ ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡುವುದು ಈ ಸೇವೆಯನ್ನು ಪ್ರಾರಂಭಿಸುವ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: ಮೂಡಾ ಕಚೇರಿ ಮೇಲೆ ಇಡಿ ದಿಢೀರ್ ದಾಳಿ : ಎರಡು ದಿನಗಳ ಕಾಲ ನಡೆಯಲಿದೆ ಪರಿಶೀಲನೆ
2025 ರಲ್ಲಿ ಪ್ರಾರಂಭವಾಗಲಿರುವ ಈ ಸೇವೆಯು ಟ್ರಾಫಿಕ್ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಸಂಪರ್ಕವನ್ನು ಹೆಚ್ಚಿಸಲು ಹೊಸ ಯುಗಕ್ಕೆ ನಾಂದಿ ಹಾಡಲಿದೆ. ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಗಳ ಸೇವೆ ಆರಂಭವಾದ ನಂತರ ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಸಾಕಷ್ಟು ಪರಿಹಾರ ಸಿಗಲಿದೆ.
ಸರಳಾ ಏವಿಯೇಷನ್ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಜೊತೆಗೆ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (eVTOL) ವಿಮಾನಗಳನ್ನು ಹೊರತರಲು ಕೈಜೋಡಿಸಿದೆ. ಸರಳಾ ಏವಿಯೇಷನ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಆಡ್ರಿಯನ್ ಸ್ಮಿತ್ ಮಾತನಾಡಿ, ಬೆಂಗಳೂರಿನ ಜನನಿಬಿಡ ಇಂದಿರಾನಗರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಮಾರು ಒಂದೂವರೆ ಗಂಟೆ ತೆಗೆದುಕೊಳ್ಳುತ್ತದೆ. ಫ್ಲೈಯಿಂಗ್ ಟ್ಯಾಕ್ಸಿಯಲ್ಲಿ ಇದು ಕೇವಲ ಐದು ನಿಮಿಷಗಳ ಪ್ರಯಾಣವಾಗಲಿದೆ.
ಪ್ರಯಾಣ ದರ ಎಷ್ಟು ಗೊತ್ತಾ?
ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಗಳ ಬಿಡುಗಡೆಯು ಒಂದು ಹೊಸ ಮೈಲಿಗಲ್ಲು ಆಗಲಿದೆ. ಸರಳಾ ಏವಿಯೇಷನ್ ಪ್ರಕಾರ, ಈ ಹಾರುವ ಟ್ಯಾಕ್ಸಿ 52 ಕಿಲೋಮೀಟರ್ ದೂರವನ್ನು 19 ನಿಮಿಷಗಳಲ್ಲಿ ಕ್ರಮಿಸುತ್ತದೆ. ಎಲೆಕ್ಟ್ರಾನಿಕ್ ಫ್ಲೈಯಿಂಗ್ ಟ್ಯಾಕ್ಸಿಗಳ ಪ್ರಸ್ತಾವಿತ ದರ 1,700 ರೂ. ಆಗಿರಲಿದೆ.
ಇದನ್ನೂ ಓದಿ: ಈ ಪುಡಿಯನ್ನು ಸಕ್ಕರೆಯೊಂದಿಗೆ ಬೆರೆಸಿ ಹಾಕಿ..ಜಿರೆಳಗಳು ಸುಳಿವು ಕೂಡ ಇರದಂತೆ ಮಾಯವಾಗುತ್ತವೆ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.