ಪ್ಲಾಸ್ಟಿಕ್ ಕವರ್ ನಲ್ಲಿ ಸಿಎಂಗೆ ಗಿಫ್ಟ್ ನೀಡಿದ ಮೇಯರ್ ಗೆ 500 ರೂ ದಂಡ..!
ನೂತನವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪನವರನ್ನು ಬೆಂಗಳೂರು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸನ್ಮಾನಿಸಲು ಹೋದಾಗ ಪ್ಲಾಸ್ಟಿಕ್ ಕವರ್ ನಲ್ಲಿ ಗಿಫ್ಟ್ ನೀಡಿದ್ದಕ್ಕೆ ಅವರಿಗೆ ಪಾಲಿಕೆ ಈಗ 500 ರೂಪಾಯಿಗಳ ದಂಡ ವಿಧಿಸಿದೆ
ಬೆಂಗಳೂರು: ನೂತನವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪನವರನ್ನು ಬೆಂಗಳೂರು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸನ್ಮಾನಿಸಲು ಹೋದಾಗ ಪ್ಲಾಸ್ಟಿಕ್ ಕವರ್ ನಲ್ಲಿ ಗಿಫ್ಟ್ ನೀಡಿದ್ದಕ್ಕೆ ಅವರಿಗೆ ಪಾಲಿಕೆ ಈಗ 500 ರೂಪಾಯಿಗಳ ದಂಡ ವಿಧಿಸಿದೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) 2016 ರಲ್ಲೇ ಪ್ಲಾಸ್ಟಿಕ್ ಬಳಸುವುದಕ್ಕೆ ನಿಷೇಧ ಹೇರಿದೆ.ಈಗ ನೂತನ ಮುಖ್ಯಮಂತ್ರಿ ಸನ್ಮಾನ ಮಾಡುವ ವೇಳೆ ಸ್ವತಃ ಪಾಲಿಕೆ ಮೇಯರ್ ಅವರೇ ನಿಯಮ ಉಲ್ಲಂಘಿಸಿರುವ ಬೆನ್ನಲ್ಲಿ ಈಗ ಅವರಿಗೆ 500 ರೂಪಾಯಿಗಳ ತಂಡ ವಿಧಿಸಲಾಗಿದೆ.
ಬಿಬಿಎಂಪಿ 03-08-2019 ರಂದು ದಂಡ ವಿಧಿಸಿದ ನಂತರ ರಶೀದಿ ಪಾವತಿಯನ್ನು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರಿಗೆ ನೀಡಿದೆ.