Cyber Crime Cases: ಸೈಬರ್ ಖದೀಮರ ಪತ್ತೆ ಹಚ್ಚುವಲ್ಲಿ ಖಾಕಿ ವಿಫಲ: ಶೇ.10 ರಷ್ಟು ಮಾತ್ರ ಕೇಸ್ ಭೇದಿಸಿದ ಪೊಲೀಸರು
ಕಳೆದ 11 ತಿಂಗಳಲ್ಲಿ ನಗರದ 9 ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಒಟ್ಟು 8951 ಪ್ರಕರಣಗಳು ದಾಖಲಾಗಿವೆ. 2021ರಲ್ಲಿ 6423 ಹಾಗೂ 2020ರಲ್ಲಿ 8892 ಕೇಸ್ ದಾಖಲಾಗಿತ್ತು. ದಾಖಲಾದ ಕೇಸ್ ಗಳಿಗೆ ಪತ್ತೆ ಮಾಡಲಾದ ಪ್ರಕರಣಗಳಿಗೂ ಅಜಾಗಜಾಂತರ ವ್ಯತ್ಯಾಸವಿದೆ. ಸೈಬರ್ ಖದೀಮರನ್ನು ಪತ್ತೆ ಹಚ್ಚುವಲ್ಲಿ ನಗರ ಪೊಲೀಸರು ಹಿಂದೆ ಬಿದ್ದಿದ್ದಾರೆ.
Cyber Crime Cases: ಬೆಂಗಳೂರು: ರಾಜಧಾನಿಯಲ್ಲಿ ಶರವೇಗದಲ್ಲಿ ದಾಖಲಾಗುತ್ತಿರುವ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಪೊಲೀಸರಿಂದ ಸಾಧ್ಯವಾಗುತ್ತಿಲ್ಲ. ದಿನೇ ದಿನೇ ಆರ್ಥಿಕ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಅಧಿಕವಾಗಿವೆ.
ಇದನ್ನೂ ಓದಿ: "ಯಾರು ಏನಾದರೂ ಪ್ರತಿಭಟನೆ ಮಾಡಲಿ, ನನ್ನ ಹೆಸರು ಪ್ರಚಾರ ಮಾಡಲಿ"
ಕಳೆದ 11 ತಿಂಗಳಲ್ಲಿ ನಗರದ 9 ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಒಟ್ಟು 8951 ಪ್ರಕರಣಗಳು ದಾಖಲಾಗಿವೆ. 2021ರಲ್ಲಿ 6423 ಹಾಗೂ 2020ರಲ್ಲಿ 8892 ಕೇಸ್ ದಾಖಲಾಗಿತ್ತು. ದಾಖಲಾದ ಕೇಸ್ ಗಳಿಗೆ ಪತ್ತೆ ಮಾಡಲಾದ ಪ್ರಕರಣಗಳಿಗೂ ಅಜಾಗಜಾಂತರ ವ್ಯತ್ಯಾಸವಿದೆ. ಸೈಬರ್ ಖದೀಮರನ್ನು ಪತ್ತೆ ಹಚ್ಚುವಲ್ಲಿ ನಗರ ಪೊಲೀಸರು ಹಿಂದೆ ಬಿದ್ದಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ನಗರದಲ್ಲಿ ಒಂದು ಸೈಬರ್ ಕ್ರೈಂ ಪೊಲೀಸ್ ಠಾಣೆ ಇದ್ದಾಗ ಸಾವಿರಾರು ಕೇಸ್ ಗಳು ದಾಖಲಾಗುತಿತ್ತು. ತನಿಖೆ ನಡೆಸುವುದಾಗಲಿ ದೂರು ಸ್ವೀಕರಿಸುವುದಕ್ಕೂ ಪೊಲೀಸ್ ಸಿಬ್ಬಂದಿಗೆ ಸಾಧ್ಯವಾಗುತ್ತಿರಲಿಲ್ಲ. ಎಲ್ಲೋ ಕುಳಿತು ಕ್ರೈಂ ಎಸಗುವ ಸೈಬರ್ ಖದೀಮರ ಪತ್ತೆ ಮಾಡಲು ಸೂಕ್ತವಾದ ತಾಂತ್ರಿಕ ಉಪಕರಣವಿರಲಿಲ್ಲ. ಇದನ್ನ ಮನಗಂಡ ರಾಜ್ಯ ಸರ್ಕಾರ ವಿಭಾಗಕ್ಕೊಂದು ಎಂಬಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಗಳನ್ನ ನಿರ್ಮಿಸಿ ಅಗತ್ಯ ಸಿಬ್ಬಂದಿ ಒದಗಿಸಿದರೂ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್ ಖದೀಮರನ್ನ ಹಿಡಿಯುವಲ್ಲಿ ಸಾಧ್ಯವಾಗುತ್ತಿಲ್ಲ ಎಂಬುದನ್ನು ಪೊಲೀಸ್ ಇಲಾಖೆಯ ಅಂಕಿ-ಅಂಶಗಳೇ ಸಾರಿ ಹೇಳುತ್ತಿವೆ.
ಈ ವರ್ಷ ದಾಖಲಾದ 8892 ಕೇಸ್ ಗಳಲ್ಲಿ 929 ಪ್ರಕರಣಗಳು ಮಾತ್ರ ಬೇಧಿಸಲಾಗಿದೆ. ಶೇ.10ರಷ್ಟು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಸರಾಸರಿ ದಿನಕ್ಕೆ 27 ಕೇಸ್ ಗಳಲ್ಲಿ ದಾಖಲಾಗುತ್ತಿದ್ದು ಅಂದರೆ ಮೂರು ಪ್ರಕರಣಗಳಿಗೆ ಮುಕ್ತಿ ಕೊಡಿಸಲಾಗುತ್ತಿದೆ. ಇದೆ ರೀತಿ 2021ರಲ್ಲಿ ದಾಖಲಾದ 6423 ಕೇಸ್ ಗಳಲ್ಲಿ 2062 ಪ್ರಕರಣಗಳ ಪತ್ತೆ ಮಾಡಲಾಗಿದೆ.
ತರಹೇವಾರಿ ರೀತಿಯಲ್ಲಿ ವಂಚಿಸುವುದನ್ನು ಸಿದ್ದಿಸಿಕೊಂಡಿರುವ ಹೈಟೆಕ್ ಸೈಬರ್ ಖದೀಮರು ವಿವಿಧ ಸ್ವರೂಪಗಳಲ್ಲಿ ಜನರನ್ನು ಮರಳು ಮಾಡುತ್ತಾರೆ. ಡೆಬಿಟ್ -ಕಾರ್ಡ್ ಅಪ್ ಡೇಟ್ ಮಾಡಬೇಕು, ಆನ್ ಲೈನ್ ಮನಿ ಟ್ರಾನ್ಸ್ ಫರ್ ಹೆಸರಿನಲ್ಲಿ ಈ ವರ್ಷ 3838 ಪ್ರಕರಣ ದಾಖಲಾಗಿವೆ. ಕಳೆದ ವರ್ಷ 2886 ಕೇಸ್ ಆಗಿತ್ತು. ನಗದು ಬಹುಮಾನ, ಲಾಟರಿ ಹಾಗೂ ಲೋನ್ ಒಎಲ್ ಎಕ್ಸ್ ಮೋಸ ಸೇರಿದಂತೆ 1753 ಪ್ರಕರಣ ದಾಖಲಾಗಿವೆ. ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ (748) ಸಾಮಾಜಿಕ ಜಾಲತಾಣ ದುರ್ಬಳಕೆ (557) ಕಾರ್ಡ್ ಸ್ಕಿಮಿಂಗ್, ಕ್ರಿಪ್ಕೋ ಕರೆನ್ಸಿ,ಮಾಟ್ರಿಮೋನಿ ವಂಚನೆ ಸೇರಿದಂತೆ ಒಟ್ಟು 8892 ಕೇಸ್ ದಾಖಲಾಗಿವೆ.
ಯಾವ ವಿಭಾಗದಲ್ಲಿ ಸೈಬರ್ ಕ್ರೈಂ ಹೆಚ್ಚು ಗೊತ್ತಾ ?
ನಗರದಲ್ಲಿ ವಿವಿಧ ಭಾಗಗಳಿಗೆ ಹೋಲಿಸಿದರೆ ಪಶ್ಚಿಮ ವಿಭಾಗದ ಪೊಲೀಸ್ ಠಾಣೆಯಲ್ಲೇ ಅತಿ ಹೆಚ್ಚು ಅಂದರೆ 1297 ಕೇಸ್ ದಾಖಲಾಗಿವೆ. ದಕ್ಷಿಣ ವಿಭಾಗ 1237, ಉತ್ತರ ವಿಭಾಗದಲ್ಲಿ 1160 ಪ್ರಕರಣ ದಾಖಲಾಗಿವೆ. ಕೇಂದ್ರ ವಿಭಾಗದಲ್ಲಿ ಅತಿ ಕಡಿಮೆ(888)ಕೇಸ್ ದಾಖಲಾಗಿವೆ.
ಇದನ್ನೂ ಓದಿ: ಕಾಂಗ್ರೆಸ್ & ಪಾಕಿಸ್ತಾನ ಎರಡರದ್ದೂ ಚಿಂತನೆಗಳು ಬಹುತೇಕ ಒಂದೇ ಆಗಿದೆ: ಬಿಜೆಪಿ ಆರೋಪ
ಸದ್ಯ ರಾಜ್ಯ ರಾಜಧಾನಿಯಲ್ಲಿ ಸೈಬರ್ ಖದೀಮರು ದಿನದಿಂದ ದಿನಕ್ಕೆ ತಮ್ಮ ಕೈಚಳಕ ತೋರುತ್ತಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಇದನ್ನು ತಡೆಗಟ್ಟಲು ಸೂಕ್ತ ವ್ಯವಸ್ಥೆಯನ್ನು ಮಾಡಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.