Bangalore Rain Effect: ನೀವೂ ಬೆಂಗಳೂರಿನ ನಾಗರೀಕರಾಗಿದ್ದರೆಈ ಬಾರಿಯ ಮಳೆಗಾಲದಲ್ಲಿ ನಿಮ್ಮ ಏರಿಯಾ ಕೂಡ ಮುಳುಗಡೆ ಆಗಬಹುದು ಹುಷಾರ್!! ಇನ್ನೆನೂ ಮುಂಗಾರು ಮಳೆ ಆರಂಭವಾಗಲಿದೆ. ಅದಕ್ಕೂ ಮೊದಲು ಬೆಂಗಳೂರಿಗರನ್ನು ಬೆಚ್ಚಿಬೀಳಿಸುವ ವರದಿಯೊಂದು ಬಹಿರಂಗಗೊಂಡಿದೆ. ಈ ಕುರಿತು ವರದಿಯೊಂದು ಬಿಡುಗಡೆಯಾಗಿದ್ದು, ಇದನ್ನು ಕಂಡು ಬಿಬಿಎಂಪಿ ಫುಲ್ ಶಾಕ್ ಆಗಿದೆ. 


COMMERCIAL BREAK
SCROLL TO CONTINUE READING

ರಾಜಧಾನಿ ಬೆಂಗಳೂರು ಕಳೆದ ವರ್ಷ ಹಿಂದೆಂದೂ ಕಂಡು ಕೇಳರಿಯದ ಪ್ರವಾಹಕ್ಕೆ ತುತ್ತಾಗಿತ್ತು. ಇದರ ಬೆನ್ನಲ್ಲೇ ರಾಜಕಾಲುವೆ, ಕೆರೆ ಒತ್ತುವರಿ ತೆರವಿಗೆ ಪಾಲಿಕೆಯೂ ಮುಂದಾಗಿತ್ತು. ಇದೆಲ್ಲದರ ನಡುವೆ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಚ್ಚಿ ಬೀಳಿಸೋ ರಿಪೋರ್ಟ್ ಅನ್ನು ಬಿಡುಗಡೆ ಮಾಡಿದೆ. ವರದಿಯ ಪ್ರಕಾರ ಅತಿ ಸಣ್ಣ ಮಳೆಗೂ ಬೆಂಗಳೂರಿನ 226 ಪ್ರದೇಶ ಮುಳುಗಲಿದೆ ಎನ್ನುವ ಭಯಾನಕ ಸತ್ಯ ಅಧ್ಯಯನ ತಂಡದಿಂದ ಬೆಳಕಿಗೆ ಬಂದಿದೆ. 


ಈ ಪೈಕಿ ರಾಜಕಾಲುವೆಗೆ ನೀರು ನುಗ್ಗಿ 109 ತಗ್ಗು ಸ್ಥಳಗಳಲ್ಲಿ ಸಮಸ್ಯೆ ಎದುರಾದರೆ, ಉಳಿದಂತೆ ರಸ್ತೆ, ಅಂಡರ್‌ ಪಾಸ್‌ ಹಾಗೂ ಜಂಕ್ಷನ್‌ ಸೇರಿದಂತೆ 117 ಸ್ಥಳಗಳಲ್ಲಿ ಮಳೆ ನೀರು ನಿಂತು ಸಮಸ್ಯೆ ಎದುರಿಸಲಿವೆ. ಈ ಬಗ್ಗೆ ಕೆ‌ಎಸ್‌ಎನ್‌ಡಿ‌ಎಂಸಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 


ಇದನ್ನೂ ಓದಿ- ʼಮೋದಿ, ಅಮಿಶ್‌ ಶಾ ಟಕ್ಕರ್‌ ನಮ್ಮತ್ರ ನಡೆಯೊಲ್ಲ.. ಏನಾಗುತ್ತೋ ನೋಡೊಣ.ʼ


ಬೆಂಗಳೂರಿನ 226 ಪ್ರದೇಶಗಳಿಗೆ ಪ್ರವಾಹದ ಭೀತಿ:
ಬೆಂಗಳೂರಿನಲ್ಲಿ ಮಳೆಯಿಂದಾಗಿ 226 ಪ್ರದೇಶಗಳಿಗೆ ಪ್ರವಾಹ ಭೀತಿ ಇದೆ ಎಂದು ವರದಿ ಮಾಡಿರುವ ಕೆ‌ಎಸ್‌ಎಮ್‌ಡಿ‌ಸಿ ಅವುಗಳಲ್ಲಿ ಬೆಂಗಳೂರಿನ ಪೂರ್ವ ವಲಯದಲ್ಲೇ ಅತಿ ಹೆಚ್ಚು ಪ್ರದೇಶಗಳನ್ನು ಉಲ್ಲೇಖಿಸಿದೆ. ವರದಿಯ ಪ್ರಕಾರ, ಕೇವಲ ಹತ್ತು ಮೀಟರ್ ಮಳೆ ಆದ್ರೆ 226 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ. 


ಪಾಲಿಕೆ ವ್ಯಾಪ್ತಿಯಲ್ಲಿ ವಲಯವಾರು ಪ್ರವಾಹ ಪೀಡಿತ ಸ್ಥಳ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಲಯವಾರು ಪ್ರವಾಹ ಪೀಡಿತ ಪ್ರದೇಶಗಳು ಈ ಕೆಳಕಂಡಂತಿವೆ: 
ಬೆಂ. ಪೂರ್ವ - 61
ಬೆಂ. ಪಶ್ಚಿಮ - 40
ಬೆಂ .ದಕ್ಷಿಣ - 40
ಮಹದೇವಪುರ - 24
ಆರ್‌.ಆರ್‌.ನಗರ - 23
ದಾಸರಹಳ್ಳಿ - 03
ಯಲಹಂಕ - 11
ಬೊಮ್ಮನಹಳ್ಳಿ - 24
ಒಟ್ಟು - 226


ಇದನ್ನೂ ಓದಿ- ಬಂಡೀಪುರದಲ್ಲಿ ಪ್ರಧಾನಿ ಮೋದಿಗೆ ಕಾಣಿಸದ ಹುಲಿ: ಸಫಾರಿ ಜೀಪ್ ಚಾಲಕನ ವಿರುದ್ಧ ಕ್ರಮ?


ಯಾವ ಯಾವ ಪ್ರದೇಶಗಳಲ್ಲಿ ಈ ಸಮಸ್ಯೆ ಆಗಲಿದೆ: 
ಮೆಜೆಸ್ಟಿಕ್‌- ಕೇವಲ 2 ಸೆಂ.ಮೀ. ಮಳೆ ಬಂದರೆ ಸಾಕು ಪ್ರವಾಹ ಪರಿಸ್ಥಿತಿ ಉಂಟಾಗಲಿದೆ. ಇದಲ್ಲದೆ, ಓಕಳಿಪುರ ಅಂಡರ್‌ಪಾಸ್‌, ಶಿವಾನಂದ ಜಂಕ್ಷನ್‌, ಮಲ್ಲೇಶ್ವರ, ಶೇಷಾದ್ರಿಪುರ ಅಂಡರ್‌ ಪಾಸ್‌, ರೇಸ್‌ ಕೋರ್ಸ್‌ ಲೇಔಟ್‌, ಶ್ರೀರಾಮಪುರ ಅಂಡರ್‌ ಪಾಸ್‌ ಸೇರಿದಂತೆ ಹಲವೆಡೆ ಪ್ರವಾಹ ಸೃಷ್ಟಿಯಾಗಿ ಮನೆಗಳಿಗೆ ರಾಜಕಾಲುವೆ ನೀರು ನುಗ್ಗುವ ಸಾಧ್ಯತೆ ಇದೆ. ಹೀಗೆ, 2 ಸೆಂ.ಮೀ. ಮಳೆ ಬಂದರೆ, ನಗರದ 22 ಸ್ಥಳಗಳಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ಎಚ್ಚರಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.