ಬೆಂಗಳೂರು: ಕೊರೊನಾ ಕಂಟಕ ಮುಗಿದ ಬಳಿಕ ಅದರಲ್ಲೂ ಎರಡು ವರ್ಷಗಳ ಬಳಿಕ ಹೊಸ ವರ್ಷಾಚರಣೆಗೆ ಸಿಲಿಕಾನ್ ಸಿಟಿ ಸಿದ್ಧವಾಗಿದೆ. ಸಂಭ್ರಮದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಂ.ಜಿ.ರೋಡ್, ಬಿಗ್ರೇಡ್, ಕೋರಮಂಗಲ, ಇಂದಿರಾನಗರ ಸೇರಿದಂತೆ ನಗರದಲ್ಲಿ 8500ಕ್ಕೂ ಹೆಚ್ಚಿನ ಪೊಲೀಸರು ಭದ್ರತೆಯಲ್ಲಿರಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ‌ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಹೊಸ ವರ್ಷಾಚರಣೆಗೆ ಕೈಗೊಂಡಿರುವ ಪೊಲೀಸ್ ಭದ್ರತೆ ಕ್ರಮಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಆಯುಕ್ತರು ಎರಡು ವರ್ಷಗಳ ಬಳಿಕ ನಗರದಲ್ಲಿ ಹೊಸ ವರ್ಷಾಚರಣೆ ಸಂಭ್ರಮ ಜೋರಾಗಿರಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.


ಇದನ್ನೂ ಓದಿ: ಕುವೆಂಪು ಅವರ ಕನ್ನಡ ಹೋರಾಟ: ಜಾತಿ ಸಂಘರ್ಷಗಳಿಗೆ ಉತ್ತರವಾಗಿ ಪುರಾಣಗಳ ಮರು ಸೃಷ್ಟಿ


5200 ಪೊಲೀಸ್ ಕಾನ್ ಸ್ಟೇಬಲ್, ಹೆಡ್ ಕಾನ್ ಸ್ಟೇಬಲ್ 1800, ಎಎಸ್ಐ 800, ಪಿಎಸ್ಐ, 600, ಇನ್ ಸ್ಪೆಕ್ಟರ್160 ಸೇರಿದಂತೆ‌ ಹಿರಿಯ ಅಧಿಕಾರಿಗಳು ಒಳಗೊಂಡಂತೆ‌ 8 ಸಾವಿರಕ್ಕಿಂತ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮುಖ್ಯವಾಗಿ ಎಂ.ಜಿ.ರೋಡ್, ಬಿಗ್ರೇಡ್ ರೋಡ್, ರೆಸಿಡೆನ್ಸಿ‌ ರೋಡ್ ನಲ್ಲಿ 4 ಮಂದಿ ಡಿಸಿಪಿ, 10 ಎಸಿಪಿ, 30 ಇನ್ ಸ್ಪೆಕ್ಟರ್ ಒಳಗೊಂಡಂತೆ 3 ಸಾವಿರ ಪೊಲೀಸರನ್ನು ಭದ್ರತೆಗೆ ಕಾಯ್ದಿರಿಸಲಾಗಿದೆ. ಹೊಸ ವರ್ಷಾಚರಣೆ ಸಂಭ್ರಮಿಸಲು ಬರುವ ಜನರನ್ನು ನಿಯಂತ್ರಿಸಲು ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಆಯಕಟ್ಟಿನ ಜಾಗಗಳಲ್ಲಿ ಪಿಕೆಟಿಂಗ್ ಪಾಯಿಂಟ್, ವುಮೆನ್ ಸೇಫ್ಟಿ ಐಸ್ ಲ್ಯಾಂಡ್  ತೆರೆಯಲಾಗುವುದು. ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಸೂಕ್ತ ಕಣ್ಗಾವಲಿಗಾಗಿ ವಾಚ್ ಟವರ್ ನಿರ್ಮಿಸಲಾಗುವುದು ಎಂದರು.


ಡಿಸೆಂಬರ್ 31 ರಂದು ಬ್ರಿಗೇಡ್  ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಎಂಜಿ ರೋಡ್ ಪ್ರವೇಶದ್ವಾರದಲ್ಲಿ ಮೆಟೆಲ್ ಡಿಟೆಕ್ಟರ್ ಉಪಕರಣ ಅಳವಡಿಸಲಾಗುವುದು. ಸಾರ್ವಜನಿಕರು ಮಾಸ್ಕ್ ಧರಿಸಿ ಬಂದರೂ ಸಹ ಪ್ರವೇಶಿಸುವಾಗ ಮುಖ ಚಹರೆ ಪತ್ತೆಗಾಗಿ ಮಾಸ್ಕ್ ತೆಗೆಯಬೇಕು. ಅದೇ‌ ರೀತಿ ಕೋರಮಂಗಲ, ಇಂದಿರಾನಗರ, ವೈಟ್ ಪೀಲ್ಡ್ ಏರಿಯಾಗಳಲ್ಲಿ 2500 ಪೊಲೀಸರನ್ನು ನಿಯೋಜಿಸಲಾಗುವುದು. ಹೆಚ್ಚುವರಿಯಾಗಿ 20 ಡ್ರೋಣ್ ಕ್ಯಾಮರಾ ಕಣ್ಗಾವಲು ಇರಲಿದೆ ಎಂದರು.


ಇದನ್ನೂ ಓದಿ:  PGCET Results : ಇಂದು ಪಿಜಿಸಿಇಟಿ ಫಲಿತಾಂಶ ಬಿಡುಗಡೆ..!


ಹೊಸ ವರ್ಷದ ಹಿನ್ನೆಲೆ‌  ಡ್ರಗ್ಸ್ ಸಾಗಾಟ ತಡೆಯುವ ದೃಷ್ಠಿಯಿಂದ  ಡಿಸೆಂಬರ್ ನಲ್ಲಿ 6 ವಿದೇಶಿಯರು ಸೇರಿ 637  ಜನ ಆರೋಪಿಗಳನ್ನು ಬಂಧಿಸಿ 344 ಕೆ.ಜಿ.ಡ್ರಗ್ಸ್ ಜಪ್ತಿ ಮಾಡಿ 547 ಕೇಸ್ ದಾಖಲಿಸಲಾಗಿದೆ‌. ಮಧ್ಯರಾತ್ರಿ 1 ಗಂಟೆವರೆಗೆ ಹೊಸ ವರ್ಷಾಚರಣೆ ಕಾರ್ಯಕ್ರಮ ನಡೆಸಲು ಅನುಮತಿ ಇದ್ದು ಗಡುವು ಮೀರಿ ಕಾನೂನು ಬಾಹಿರವಾಗಿ ಕಾರ್ಯಕ್ರಮ ನಡೆಯುವುದು ಕಂಡುಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಾಪ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.