ಬೆಂಗಳೂರು: ನಿನ್ನೆ ರಾಜ್ಯ ರಾಜಧಾನಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ CRPC ಸೆಕ್ಷನ್ 144 ಅನ್ನು ರಾಜ್ಯ ಸರ್ಕಾರ ವಿಧಿಸಿತ್ತು. ಅದು ಇಂದು ಕೂಡ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ನಗರದಲ್ಲಿರುವ ಸ್ವಿಮಿಂಗ್ ಫೂಲ್, ಜಿಮ್, ಅಪಾರ್ಟ್ಮೆಂಟ್ / ವಸತಿ ಸಮುಚ್ಚಯಗಳಲ್ಲಿ ಪಾರ್ಟಿ ಹಾಲ್‌ಗಳು ಮುಂತಾದವುಗಳನ್ನ ಬಂದ್ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ.


COMMERCIAL BREAK
SCROLL TO CONTINUE READING

"ಕೋವಿಡ್ ಮಾರ್ಗಸೂಚಿಗಳನ್ನು(Covid-19 Guidelines) ಕಡ್ಡಾಯವಾಗಿ ಅನುಸರಿಸಲು ಏಪ್ರಿಲ್ 20 ರವರೆಗೆ ನಗರದಲ್ಲಿ  ಯಾವುದೇ ಗುಂಪು ರ್ಯಾಲಿಗಳು ಮತ್ತು ಪ್ರದರ್ಶನಗಳನ್ನು ನಿಷೇಧಿಸಲಾಗಿದೆ" ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶದಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ : Bus strike: ಸಾರಿಗೆ ನೌಕರರ ಮುಷ್ಕರ; ನಾಳೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಕರೆದ ಸಿಎಂ!


"ಸಾರ್ವಜನಿಕ ಕಾರ್ಯಗಳು ಮತ್ತು ಗುಂಪು ಪ್ರಾರ್ಥನೆಗಳು ಅಥವಾ ಪೂಜಾ ಸ್ಥಳಗಳಲ್ಲಿ ಯಾವುದೇ ರೀತಿಯ ಆಚರಣೆಗಳು ಏಪ್ರಿಲ್ 20(April 20) ರವರೆಗೆ ನಿಷೇಧಿಸಲಾಗಿದೆ" ಎಂದು ಪಂತ್ ಹೇಳಿದ್ದಾರೆ.


ಇದನ್ನೂ ಓದಿ : Bus Strike: 'ಮುಷ್ಕರ ನಿರತ ಸಾರಿಗೆ ನೌಕರರನ್ನ ಮಾತುಕತೆಗೆ ಕರೆಯುವುದಿಲ್ಲ'


ಭಾನುವಾರ ರಾಜ್ಯ ಮುಖ್ಯ ಕಾರ್ಯದರ್ಶಿ(State Chief Secretary) ನೀಡಿದ ಅಧಿಸೂಚನೆಯ ಪ್ರಕಾರ, ಜಿಮ್‌ಗಳು ಮತ್ತು ಈಜುಕೊಳಗಳು ಸಾಮಾಜಿಕ ಅಂತರ ಕಡ್ಡಾಯಗೊಳಿಸಬೇಕು ಮತ್ತು ಜನಸಂದಣಿಯನ್ನು ತಡೆಗಟ್ಟಲು ಒಂದು ಬಾರಿಗೆ  ಶೇಕಡಾ 50 ರಷ್ಟು ಜನರಿಗೆ ಮಾತ್ರ ಅವಕಾಶ ಅಂದು ಹೇಳಿದ್ದಾರೆ.


ಇದನ್ನೂ ಓದಿ : KSRTC Strike: ಇಂದಿನಿಂದ ಸಾರಿಗೆ ನೌಕರರ ಮುಷ್ಕರ, ಬಸ್ ಸಂಚಾರದಲ್ಲಿ ವ್ಯತ್ಯಯ


"ಪಬ್‌, ಕ್ಲಬ್‌, ಬಾರ್‌ ಮತ್ತು ರೆಸ್ಟೋರೆಂಟ್(Restaurants)‌ ಗಳಲ್ಲಿ  ಕೋವಿಡ್‌ ಸಲುವಾಗಿ ಮಾಸ್ಕ ಧರಿಸುವುದು ಕಡ್ಡಾಯ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಹ್ಯಾಂಡ್ ಸ್ಯಾನಿಟೈಸರ್‌ ಬಳಕೆ ಮತ್ತು ಥರ್ಮಲ್ ಸ್ಕ್ರೀನಿಂಗ್‌ನಂತಹ ಸೂಕ್ತ ಕ್ರಮ ಕೈಗೊಳ್ಳುವುದು ಖಚಿತಪಡಿಸಿಕೊಳ್ಳುವುದು ಮತ್ತು ಶೇಕಡಾ 50 ರಷ್ಟು ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಲಿವೆ" ಎಂದು ಪಂತ್ ಹೇಳಿದರು.


ಇದನ್ನೂ ಓದಿ : Karnataka Congress: 'ಬಿಜೆಪಿ ಸರ್ಕಾರ ಸಾರಿಗೆ ನೌಕರರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ' 


ಶಾಪಿಂಗ್ ಮಾಲ್(Shoping Mall)‌, ಮಾರುಕಟ್ಟೆ, ಡಿಪಾರ್ಟ್‌ಮೆಂಟ್ ಸ್ಟೋರ್‌, ಸಿನೆಮಾ ಥಿಯೇಟರ್‌ಗಳಲ್ಲಿ ಮಾಸ್ಕ ಧರಿಸುವುದು ಕಡ್ಡಾಯ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಹ್ಯಾಂಡ್ ಸ್ಯಾನಿಟೈಸರ್‌ ಬಳಕೆ ಮತ್ತು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಎಂದು ಮಾಡಲಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : Sarkari Naukri 2021: 10ನೇ ತರಗತಿ ಪಾಸದವರಿಗೆ KSCCF ಯ ಈ ಹುದ್ದೆಗಳಿಗೆ ಅರ್ಜಿ ಆಹ್ವಾನ


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.