ಮಾದಾವರ ನಿಲ್ದಾಣದಿಂದ ಪ್ರಾರಂಭವಾಗುವ ಮೆಟ್ರೋ ಮಾರ್ಗವು ತುಮಕೂರು ಬಸ್ ನಿಲ್ದಾಣದವರೆಗೆ ವಿಸ್ತರಿಸುವ ಗುರಿ ಹೊಂದಿದೆ. 19 ಎಲಿವೇಟೆಡ್ ನಿಲ್ದಾಣಗಳು ಪ್ರಮುಖ ಪ್ರದೇಶಗಳಿಗೆ ಸೇವೆ ಸಲ್ಲಿಸಲು ಮತ್ತು ತುಮಕೂರಿನೊಳಗೆ ತಡೆರಹಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ಯೋಜಿಸಲಾಗಿದೆ. ಬಹು ನಿರೀಕ್ಷಿತ ಈ ಯೋಜನೆಯು ತುಮಕೂರು ಬೆಂಗಳೂರು ನಡುವಿನ ಸಾರಿಗೆ ಸೌಲಭ್ಯವನ್ನು ಮತ್ತಷ್ಟು ಸುಲಭವಾಗಿಸಲಿದೆ.


COMMERCIAL BREAK
SCROLL TO CONTINUE READING

 ಇದನ್ನು ಓದಿ :Govt Scheme For Women:ವಿವಾಹಿತ ಮಹಿಳೆಯರ ಖಾತೆಗೆ 6,000 ರೂ.!ಕೇಂದ್ರ ಸರ್ಕಾರದ ಅದ್ಭುತ ಯೋಜನೆ ಇದು 


ರಸ್ತೆ ಸಾರಿಗೆ ಮೇಲೆ ಒತ್ತಡ ಕಡಿಮೆ ತುಮಕೂರು ಮೆಟ್ರೋ ಯೋಜನೆಯು ಆರ್ಥಿಕ ಅಭಿವೃದ್ಧಿ ಮತ್ತು ನಿವಾಸಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಭರವಸೆಯನ್ನು ಹೊಂದಿದೆ. ನಮ್ಮ ಮೆಟ್ರೋ ಮಾರ್ಗದ ಅಂದಾಜು ಉದ್ದ 52.41 ಕಿಮೀ ಪ್ರಯಾಣದ ಸಮಯ ಮತ್ತು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. 


ತುಮಕೂರು ಮೆಟ್ರೊ ಯೋಜನೆಗೆ ಯೋಜನೆಗಳನ್ನು ಅಂತಿಮಗೊಳಿಸಲು ಮತ್ತು ಅಗತ್ಯ ಅನುಮೋದನೆಗಳನ್ನು ಪಡೆಯಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.   ಈ ಮುಂಚೆ ನಗರದ ಮೇಲಿನ ಒತ್ತಡವನ್ನು ನಿವಾರಿಸಲು ಬೆಂಗಳೂರಿನ ಸಂವಹನ ವ್ಯವಸ್ಥೆಯನ್ನು ಹೆಚ್ಚಿಸುವ ಮಹತ್ವವನ್ನು ಒತ್ತಿ ಹೇಳಿದರು. ತುಮಕೂರಿಗೆ ಮೆಟ್ರೋ ವಿಸ್ತರಣೆಯು ಈ ಯೋಜನೆಯ ಭಾಗವಾಗಿದ್ದು, ಪ್ರಸ್ತುತ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದರು.


ಸಮರ್ಥ ಮೆಟ್ರೋ ವ್ಯವಸ್ಥೆಯು ತುಮಕೂರು-ಬೆಂಗಳೂರು ನಡುವೆ ಹೂಡಿಕೆಯನ್ನು ಆಕರ್ಷಿಸಲು, ನಗರದ ವಿವಿಧ ಭಾಗಗಳಿಗೆ ಸಾರಿಗೆ ವ್ಯವಸ್ಥೆ ಸುಧಾರಿಸಲು ಮತ್ತು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.


 ಇದನ್ನು ಓದಿ :Parineeti Chopra: ರಾಘವ್ ಚಡ್ಡಾ ಅವರ ಪತ್ನಿ ಪರಿಣಿತಿ ಚೋಪ್ರಾ ಗರ್ಭಿಣಿಯೇ? ಪ್ರೆಗ್ನೆನ್ಸಿ ವದಂತಿಗೆ ಪ್ರತಿಕ್ರಿಯಿಸಿದ ನಟಿ!!   


19 ನಿಲ್ದಾಣಗಳು ಯಾವುವು?


  1. ಮಾದಾವರ

  2. ಮಾಕಳಿ 

  3. ದಾಸನಪುರ 

  4. ನೆಲಮಂಗಲ

  5. ನೆಲಮಂಗಲ ಬಸ್‌ ನಿಲ್ದಾಣ 

  6. ನೆಲಮಂಗಲ ರಾ.ಹೆ. ಕೊನೆ 

  7. ಬೂದಿಹಾಳ 

  8. ಟಿ.ಬೇಗೂರು 

  9. ಕುಲುವನಹಳ್ಳಿ

  10. ಸೋಂಪುರ ಕೈಗಾರಿಕಾ ಪ್ರದೇಶ 

  11. ಡಾಬಸ್‌ಪೇಟೆ 

  12. ನಲ್ಲಯ್ಯನಪಾಳ್ಯ 

  13. ಚಿಕ್ಕಹಳ್ಳಿ 

  14. ಹಿರೇಹಳ್ಳಿ 

  15. ಪಂಡಿತನಹಳ್ಳಿ 

  16. ಕ್ಯಾತ್ಸಂದ್ರ 

  17. ಬಟವಾಡಿ 

  18. ತುಮಕೂರು ವಿಶ್ವ ವಿದ್ಯಾನಿಲಯ 

  19. ತುಮಕೂರು ಬಸ್ ನಿಲ್ದಾಣhttps://bit.ly/3AClgDd
    Apple Link - https://apple.co/3wPoNgr
    ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
    Twitter Link - https://bit.ly/3n6d2R8
    Facebook Link - https://bit.ly/3Hhqmcj 
    Youtube Link - https://www.youtube.com/watch?v=I87DcFM35WY
    Instagram Link -  https://bit.ly/3LyfY2l 
    Sharechat Link - https://bit.ly/3LCjokI 
    Threads Link-  https://www.threads.net/@zeekannadanews 
    WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.