Bengaluru News: ಆಮೆ.. ಚಿಕ್ಕ ಪುಟ್ಟ ಪ್ರಾಣಿ ಕ್ಯೂಟ್ ಕ್ಯೂಟ್ ಹಕ್ಕಿ.. ಅದ್ರ ಜೊತೆಗೆ  ಅಬ್ಬಬ್ಬಾ  ಎನಿಸೋ ದೊಡ್ಡ ಪೈಥಾನ್.. ಏನಪ್ಪಾ ಇದು ಚಿಕ್ಕ ಪ್ರಾಣಿ ಲೋಕ ಅಂದು ಕೊಂಡ್ರಾ ಈ ಲೋಕದಲ್ಲಿ ಹೀರೋನೆ ಇಲ್ಲಿ ತಲೆ ಆಡಿಸುತ್ತಾ ಇದ್ದಾನಲ್ಲ ಈ ಪೈಥಾನ್.. ಈ ಬಿಗ್ ಪೈಥಾನ್ ನೋಡಿದ್ರೆ ಎಂತಹವರಿಗೂ ಎದೆ ಝಲ್ ಅನ್ನಿಸುತ್ತೆ.. ಆದ್ರೀಗ ಆ ತರ ಭಯ ಪಟ್ಟು ಕೊಳ್ಳೋ ಕಾಲ ಹೋಯ್ತು ಸ್ವಾಮಿ. ಯಾಕಂದ್ರೆ ಸಿಟಿ ಮಂದಿ ಈಗ ನಾಯಿ ಬೆಕ್ಕು ಸಾಕೋ ತರ ಹೆಬ್ಬಾವು ಸಾಕಲು ಶುರು ಮಾಡಿದ್ದಾರೆ... ಹೆಬ್ಬಾವು ಈಗ ಜನರ ಪ್ರೀತಿಯ ಸಾಕು ಪ್ರಾಣಿ ಆಗಿದೆ..


COMMERCIAL BREAK
SCROLL TO CONTINUE READING

ಅಂದೊಂದಿತ್ತು ಕಾಲ ಜನ ನಾಯಿ ಬೆಕ್ಕು ಸಾಕಿ ಫೋಟೋ ಹೊಡೆದು ಸ್ಟೇಟಸ್ ಹಾಕ್ತಾ ಇದ್ರು. ಈಗ ಹೆಬ್ಬಾವಿನ ಜೊತೆ ಮುದ್ದು ಮಾಡ್ತಾ ಪ್ರೀತಿಯಿಂದ ಅದನ್ನ ಸಾಕಲು ಶುರು ಮಾಡಿದ್ದಾರಂತೆ, ಜಾಸ್ತಿ ಈಗ ಈ ಪೈಥಾನ್ ಗೆ ಬೇಡಿಕೆಯಂತೆ.. ಅಷ್ಟಕ್ಕೂ ಇದು ನಾವು ಹೇಳ್ತಾ ಇಲ್ಲ, ಈ ಬಗ್ಗೆ ಅನಿಮಲ್ ಶಾಪ್ ಓನರ್ ಸೈಯ್ಯದ್ ಏನ್ ಹೇಳಿದ್ದಾರೆ ಗೊತ್ತಾ... 


ಇದನ್ನೂ ಓದಿ- ತನ್ನ ಪ್ರಚಾರಕ್ಕೆ ಜನರ ಬೆವರಿನ ಹಣ ಬಳಸುವ ಮೋದಿಗೆ ಪ್ರಧಾನಿ ಎನ್ನಬೇಕೋ, ಪ್ರಚಾರಮಂತ್ರಿ ಎನ್ನಬೇಕೋ?: ಕಾಂಗ್ರೆಸ್


ಸಿಟಿ ಜನರ ಈ ಹೊಸ ಕ್ರೇಜ್ ಬಗ್ಗೆ ಮಾಹಿತಿ ನೀಡಿರುವ ಅಂಗಡಿ ಮಾಲೀಕ  ಸೈಯ್ಯದ್,  ಮೈಂಟೆನೆನ್ಸ್ ಕಡಿಮೆ ಅಂತ  ಸಿಟಿ ಜನ ಈ ಹೆಬ್ಬಾವು ಸಾಕಲು ಶುರು ಮಾಡಿದ್ದಾರಂತೆ.. ಮಾಮೂಲಿ ಸಾಕು ಪ್ರಾಣಿಗಳು ತುಂಬಾ ಕ್ವಾಸ್ಟ್ಲಿ.. ಆದ್ರೆ ಹೆಬ್ಬಾವಿನ ತಿಂಗಳಿಗೆ 400 ರೂಪಾಯಿ ಅಷ್ಟೇ ಖರ್ಚಾಗುವುದು.. ಒಮ್ಮೆ ಆಹಾರ ಸೇರಿಸಿದರೆ ಒಂದು ವಾರ ಮತ್ತೆ ಸೇವಿಸಲ್ಲ ಅಂತೆ. ಆದ್ರೆ ಇದನ್ನ ನೀವು ಸುಮ್ಮ ಸುಮ್ಮನೆ ಪರ್ಚೆಸ್ ಮಾಡುವ ಹಾಗಿಲ್ಲ. ಈ ಹಾವನ್ನು ತೆಗೆದು ಕೊಳ್ಳೋದಕ್ಕೆ ಕೂಡ ನಿಮಗೆ ಅರ್ಹತೆ ಇದ್ಯಾ ಅಂತ ಅಂಗಡಿಯವರು  ಪರಿಶೀಲನೆ ಮಾಡ್ತಾರೆ. ಜೊತೆಗೆ ನಿಮ್ಮ ಬಳಿ ಆಧಾರ್, ಪ್ಯಾನ್ ಕಾರ್ಡ್ ಮತ್ತು ಅಡ್ರೆಸ್ ಪ್ರೂಫ್ ಕಡ್ಡಾಯವಾಗಿ ಇರಬೇಕು... ಇಷ್ಟೆಲ್ಲಾ ದಾಖಲೆ ಇದ್ರೆ ಮಾತ್ರ ಹೆಬ್ಬಾವು ಕೊಳ್ಳಬಹುದು.  


ಇದನ್ನೂ ಓದಿ- Karnataka Dam Water Level: ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ


ಇಲ್ಲಿ 35 ಸಾವಿರದಿಂದ 12 ಲಕ್ಷದವರೆಗೆ ಪೈಥಾನ್ ಗೆ ಸಿಕ್ಕಪಟ್ಟೆ ಬೇಡಿಕೆ ಇದೆ.. ಇದ್ರ ಜೊತೆಗೆ ಆಮೆಗಳನ್ನು ಕೂಡ ಸಾಕಿದ್ರೆ ಮನೆಗೆ ಒಳ್ಳೆಯದಾಗುತ್ತೆ ಅಂತ ಜನ ಸಾಕಲು ಶುರು ಮಾಡಿದ್ದಾರಂತೆ.. ಒಟ್ಟಿನಲ್ಲಿ ಪೆಟ್ಸ್ ಅಂದ್ರೆ ನಾಯಿ, ಬೆಕ್ಕು ನೆನಪಾಗೋ ಕಾಲ ಹೋಗಿ ಇನ್ಮುಂದೆ ಹೆಬ್ಬಾವು, ಆಮೆ ನೆನಪಾಗುತ್ತೆ ಅನ್ನೋ ಅನುಮಾನ ಶುರುವಾಗಿರೋದು ಸತ್ಯ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.