Bengaluru GT Mall: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾಲ್ ಗಳಿಗೆ ಹೋಗುವ ಮುನ್ನ ಎಚ್ಚರ, ಎಚ್ಚರ! ಅದರಲ್ಲೂ ಭಾರತೀಯ ಸಂಸ್ಕೃತಿಯ ಉಡುಗೆಯಾದ ಪಂಚೆ ತೊಟ್ಟು ಬರೋರು ಈ ಬಗ್ಗೆ ಗಮನಹರಿಸಲೇಬೇಕು. ಮಾಲ್​ಗಳಿಗೆ ಎಂಟ್ರಿ ಕೊಡಬೇಕು ಅಂದ್ರೆ ಸ್ಟೈಲ್ ಆಗಿ ಪ್ಯಾಂಟ್, ಶರ್ಟ್, ಸ್ಕರ್ಟ್ ಹಾಕ್ಕೊಂಡು ಬಂದವರಿಗೆ ಮಾತ್ರ ಎಂಟ್ರಿ ಅಂತಿದ್ದಾರೆ ಮಾಲ್​ನವರು, ಅಯ್ಯೋ, ಇದೇನಪ್ಪ ಹೀಗೆ ಹೇಳ್ತಿದ್ದಾರೆ ಅನ್ಕೊಬೇಡಿ, ಅಸಲಿ ವಿಷಯ ತಿಳಿಯಲು ಮುಂದೆ ಓದಿ... 


COMMERCIAL BREAK
SCROLL TO CONTINUE READING

ಇತ್ತೀಚೆಗೆ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಅಂಬಾನಿ (Ambani) ಮಗನ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದ ಸೌಥ್ ಸೂಪರ್ ಸ್ಟಾರ್ ರಜನೀಕಾಂತ್ ಪಂಚೆಯಲ್ಲಿ ಮಿಂಚಿದ್ದರು. ಆದರೆ ನಮ್ಮ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ನಲ್ಲಿ (GT Mall) ಪಂಚೆ ಧರಿಸಿ ಬಂದಿದ್ದ ವ್ಯಕ್ತಿಗೆ ಪ್ರವೇಶ ನಿರಾಕರಿಸಿ ಸೆಕ್ಯೂರಿಟಿ ಸಿಬ್ಬಂದಿ ಅವಮಾನ ಮಾಡಿದ್ದರು. 


ವಾಸ್ತವವಾಗಿ, ಹಾವೇರಿ ಮೂಲದ ಕುಟುಂಬವೊಂದು ಕಲ್ಕಿ ಸಿನಿಮಾ (Kalki Movie) ವೀಕ್ಷಣೆಗೆ ನಿನ್ನೆ(ಜುಲೈ 16) ಬೆಂಗಳೂರಿನ  ಜಿ.ಟಿ ಮಾಲ್​ಗೆ ಬಂದಿತ್ತು. ಅವರಲ್ಲಿ ಫಕೀರಪ್ಪ ಎಂಬ ವೃದ್ಧರೊಬ್ಬರು ಪಂಚೆ ಧರಿಸಿ ಬಂದಿದ್ರು. ಪಂಚೆ ಧರಿಸಿದ್ದಾರೆ ಎಂಬ ಏಕೈಕ ಕಾರಣಕ್ಕೆ ಜಿ.ಟಿ.ಮಾಲ್​ನ ಸೆಕ್ಯೂರಿಟಿ ಅವರ ಪ್ರವೇಶಕ್ಕೆ ನಿರಾಕರಣೆ ಮಾಡಿದ್ದರು.


ಇದನ್ನೂ ಓದಿ- ಏಯ್… ಅಶ್ವತ್ಥ್‌ ಲೂಟಿಕೋರರ ಪಿತಾಮಹ ನೀನು: ಅಶ್ವತ್ಥ್ ನಾರಾಯಣ ವಿರುದ್ಧ ಗುಡುಗಿದ ಡಿಕೆಶಿ!


ಹೌದು, ಪಂಚೆ ಧರಿಸಿದ್ದಾರೆಂಬ (Wearing Panche) ಕಾರಣಕ್ಕೆ ಮಾಲ್ ವೃದ್ಧ ಫಕೀರಪ್ಪ ಅವರನ್ನು ಮಾಲ್ ಒಳಗೆ ಬಿಡದ ಸೆಕ್ಯೂರಿಟಿ ಅವರನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಮಾಲ್ ಮುಂದೆ ಕೂರಿಸಿದ್ದರು. ಇದರಿಂದ ತೀವ್ರ ಅವಮಾನಗೊಂಡ ಫಕೀರಪ್ಪನವರ ಪುತ್ರ ನಾಗರಾಜ್ ಮಾಲ್​ನವರಿಗೆ ಒಳಗೆ ಬಿಡುವಂತೆ ಮನವಿ ಮಾಡಿದ್ದಾರೆ. 


ಮನವಿ ಮಾಡಿದರೂ ಕ್ಯಾರೆ ಎನ್ನದ ಮಾಲ್​ನ ಭದ್ರತಾ ಸಿಬ್ಬಂದಿಯ (Mall security guard) ಧೋರಣೆಯಿಂದ ಬೇಸರಗೊಂಡ ನಾಗರಾಜ್ ವಿಡಿಯೋ ಮಾಡಿ ತಮ್ಮ ನೋವು ತೋಡಿಕೊಂಡಿದ್ದರು. ಇದೀಗ ಅವಮಾನ ಆದ ಜಾಗದಲ್ಲೇ ಫಕೀರಪ್ಪ ಅವರನ್ನು ಸನ್ಮಾನ ಮಾಡಿ ಗೌರವಿಸಲಾಗಿದೆ. ಇನ್ನು ಇದೆ ಸಂದರ್ಭದಲ್ಲಿ ಮಾತನಾಡಿದ  ಫಕೀರಪ್ಪ ನಮ್ಮಂತ ರೈತರಿಗೆ ಮುಂದೆ ಅವಮಾನ ಆಗದಂತೆ ಜಾಗೃತಿ ವಹಿಸಿ ಎಂದು ತಿಳಿಸಿದರು.


ಇದನ್ನೂ ಓದಿ- ಗುಡ್ಡ ಕುಸಿತ: ಆಸರೆಯಾಗಿದ್ದ ಹೊಟೇಲ್ ಜೊತೆಯಲ್ಲೇ ಜೀವನದ ಅಂತ್ಯ ಕಂಡ ಕುಟುಂಬ


ಇನ್ನೂ ರೈತ ಫಕೀರಪ್ಪ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ ಜಿ.ಟಿ. ಮಾಲ್ ಮ್ಯಾನೇಜರ್ ನವೀನ್  ಫಕೀರಪ್ಪ ಬಳಿ ಕ್ಷಮೆಯಾಚಿಸಿದ್ದಾರೆ. ಒಟ್ಟಾರೆ ಅನ್ನಕೊಡೋ ರೈತನಿಗೆ ಅವಮಾನ ಮಾಡಿದ ಮಾಲ್ ಸಿಬ್ಬಂದಿ ಘಟನೆ ನಡೆದಾಕ್ಷಣ ಕ್ಷಮೆ ಕೇಳಲು ನಿರಾಕರಿಸಿದ್ದರು. ಮಾಲ್​ನ ಈ ಧೋರಣೆಗೆ ಎಲ್ಲೆಡೆ ವ್ಯಾಪಕವಾಗಿ ವಿರೋಧ ವ್ಯಕ್ತವಾದ ಬೆನ್ನಲ್ಲೇ, ನಿನ್ನೆ ನಿರಾಕರಿಸಿದ್ದವರು ಇಂದು ಮಂಡಿಯೂರಿ ಅನಿವಾರ್ಯವಾಗಿ ಕ್ಷಮೆ ಕೇಳಿದ್ದಾರೆ. ಅಲ್ಲದೆ ರೈತನಿಗೆ ಸನ್ಮಾನ ಮಾಡಿ ನಾಡಿನ ಜನತೆಗೂ ಕೂಡ ಕ್ಷಮೆಯಾಚಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.