National Institute Of Mental Health & Neuro Sciences: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಒಟ್ಟು 1 ಸೀನಿಯರ್ ರಿಸರ್ಚ್​ ಫೆಲೋ (Neuro Imaging​) ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾರ್ಚ್ 13 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಕೂಡಲೇ ತಮ್ಮ Bio-dataವನ್ನು ಕೆಳಗೆ ನೀಡಲಾಗಿರುವ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇದು ಸುವರ್ಣ ಅವಕಾಶವಾಗಿದೆ.


ಇದನ್ನೂ ಓದಿ- ಜಾತಿ ಗಣತಿ ವರದಿ ನೋಡಿ ಅಂತಿಮ ನಿರ್ಧಾರ: ಸಚಿವ ಎಂ ಬಿ ಪಾಟೀಲ್


ಶೈಕ್ಷಣಿಕ ಅರ್ಹತೆ: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್, ಎಂ.ಟೆಕ್, ಬಯೋಟೆಕ್ನಾಲಜಿ/ಲೈಫ್​ ಸೈನ್ಸಸ್​​ನಲ್ಲಿ ಎಂ.ಎಸ್ಸಿ, ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.


ವಯೋಮಿತಿ: ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ: ಮಾಸಿಕ ₹43,500


ಉದ್ಯೋಗದ ಸ್ಥಳ: ಬೆಂಗಳೂರು


ಅನುಭವ: ಅಭ್ಯರ್ಥಿಗಳು ವಿವಿಧ ಇಮೇಜ್ ಅನಾಲಿಸಿಸ್ ಸಾಫ್ಟ್‌ವೇರ್ (ಉದಾ: SPM/FSL/ಫ್ರೀ ಸರ್ಫರ್) ಬಳಸಿಕೊಂಡು ನ್ಯೂರೋಸೈಕಿಯಾಟ್ರಿಕ್ ಡಿಸಾರ್ಡರ್‌ಗಳಲ್ಲಿ ಮಾನವ ವಿಷಯಗಳಲ್ಲಿ MRI ಡೇಟಾದ ವಿಶ್ಲೇಷಣೆಯನ್ನು ಒಳಗೊಂಡ ಸಂಶೋಧನಾ ಅನುಭವವನ್ನು ಹೊಂದಿರಬೇಕು.


ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 


ಅರ್ಜಿ ಸಲ್ಲಿಸುವುದು ಹೇಗೆ?: ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ jpj@nimhans.ac.in ಅಥವಾ jpjmbial@gmail.comಗೆ ಕಳುಹಿಸಬೇಕು.


ಇದನ್ನೂ ಓದಿ- ಉದ್ಯೋಗಾಕಾಂಕ್ಷಿಗಳಿಗೆ Good News: KPSCಯಿಂದ 264 ಭೂಮಾಪಕರ ನೇಮಕಾತಿಗೆ ಅಧಿಸೂಚನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.