ಸೋಷಿಯಲ್ ಮೀಡಿಯಾದಲ್ಲಿ ಹುಚ್ಚುಚ್ಚು ಪೋಸ್ಟ್ ಮಾಡೋರೆ ಎಚ್ಚರ : ಇನ್ಮೇಲೆ ಕೇಸ್ ಬಿಳುತ್ತೆ
ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟು ಅಭಿಯಾನಗಳು, ಪೋಸ್ಟ್ ಗಳು, ವಿವಾದಗಳ ಚರ್ಚೆಗಳು ಅಬ್ಬಬ್ಹಾ ಸೋಷಿಯಲ್ ಮೀಡಿಯಾ ನೋಡ್ತಿದ್ರೇನೆ ಆಗಾಗ ಒಂದೊಂದು ವಾರ್ ನಡೀತಿದ್ಯೇನೋ ಅನ್ನಿಸಿಬಿಡುತ್ತೆ.. ಹೋರಾಟ ಅನ್ನೋ ಹೆಸ್ರಲ್ಲಿ ಟ್ವೀಟ್ ಅಥವಾ ಪೋಸ್ಟ್ ಮಾಡೋರು ಫಿಲ್ಡಿಗಿಳಿತಾರೋ ಇಲ್ವೋ ಆದ್ರೆ ಕೂತಲ್ಲೇ ಮೊಬೈಲ್ ನಲ್ಲಿ ಆ್ಯಶ್ ಟ್ಯಾಗ್ ಹಾಕಿ ದೊಡ್ಡ ವಿವಾದ ಅಂತೂ ಸೃಷ್ಟಿ ಮಾಡ್ತಾರೆ.
ಬೆಂಗಳೂರು : ಈ ಡಿಜಿಟಲ್ ಯುಗದಲ್ಲಿ ಬೆಂಕಿ ಹಚ್ಚೋಕೆ ಹೆಚ್ಚು ಹೊತ್ತು ಬೇಕೇ ಇಲ್ಲ.. ಕೂತಲ್ಲೇ ಕೂತು ಟ್ಯಾಪ್ ಮಾಡುತ್ಲೇ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ವಿವಾದ ಸೃಷ್ಟಿ ಮಾಡ್ತಿದ್ದಾರೆ.. ಈ ಬಗ್ಗೆ ಪೊಲೀಸ್ರು ಆಗಾಗ ವಾರ್ನ್ ಮಾಡ್ತಾನೆ ಇರ್ತಾರೆ. ಸೋಷಿಯಲ್ ಮೀಡಿಯಾ ಮೂಲಕ ವಿವಾದಗಳು ಹೇಗೆಲ್ಲಾ ಸದ್ದು ಮಾಡುತ್ವೆ ಅನ್ನೋದು ಎಲ್ರಿಗೂ ಗೊತ್ತೇ ಇದೆ..
ಕಳೆದ ಎರಡ್ಮೂರು ವರ್ಷಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟು ಅಭಿಯಾನಗಳು, ಪೋಸ್ಟ್ ಗಳು, ವಿವಾದಗಳ ಚರ್ಚೆಗಳು ಅಬ್ಬಬ್ಹಾ ಸೋಷಿಯಲ್ ಮೀಡಿಯಾ ನೋಡ್ತಿದ್ರೇನೆ ಆಗಾಗ ಒಂದೊಂದು ವಾರ್ ನಡೀತಿದ್ಯೇನೋ ಅನ್ನಿಸಿಬಿಡುತ್ತೆ.. ಹೋರಾಟ ಅನ್ನೋ ಹೆಸ್ರಲ್ಲಿ ಟ್ವೀಟ್ ಅಥವಾ ಪೋಸ್ಟ್ ಮಾಡೋರು ಫಿಲ್ಡಿಗಿಳಿತಾರೋ ಇಲ್ವೋ ಆದ್ರೆ ಕೂತಲ್ಲೇ ಮೊಬೈಲ್ ನಲ್ಲಿ ಆ್ಯಶ್ ಟ್ಯಾಗ್ ಹಾಕಿ ದೊಡ್ಡ ವಿವಾದ ಅಂತೂ ಸೃಷ್ಟಿ ಮಾಡ್ತಾರೆ.
ಇದನ್ನೂ ಓದಿ: ಆಪರೇಷನ್ ಹಸ್ತ: ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಬಿಜೆಪಿ ನಾಯಕರು!
ಕೆಲವರ ಪೋಸ್ಟ್ ಗಳಂತೂ ಯಾವ ಮಟ್ಟಿಗೆ ವಿವಾದಗಳು ಹಬ್ಬಿಸುತ್ವೆ, ಸ್ಟೇಷನ್, ಕೋರ್ಟ್ ಗೂ ಕರೆದೊಯ್ಯುತ್ವೆ.. ವ್ಯಕ್ತಿಗಳನ್ನ ನಿಂದನೆ ಮಾಡುತ್ವೆ, ಒಟ್ನಲ್ಲಿ ರಾಜ್ಯ, ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡುತ್ವೆ.. ಈ ರೀತಿ ಪ್ರಚೋದನೆ ನೀಡೋವಂತಹ ಪೋಸ್ಟ್ ಮಾಡೋರ ಮೇಲೆ ಪೊಲೀಸರು ಇನ್ಮುಂದೆ ಕಠಿಣ ಕ್ರಮ ಕೈಗೊಳ್ತಿದ್ದಾರೆ.. ಅದ್ಕೆ ಅಂತ್ಲೇ ಪೊಲೀಸ್ ಕಮಿಷನರ್ ಎಲ್ಲಾ ಸ್ಟೇಷನ್ ನಲ್ಲೂ ಟೀಂ ರೆಡಿ ಮಾಡ್ತಿದ್ದಾರೆ.
ಹೌದು.. ಸೋಷಿಯಲ್ ಮೀಡಿಯಾದ ಮೇಲೆ ಈಗಾಗಲೇ ಹದ್ದಿನ ಕಣ್ಣಿಟ್ಟಿರೋ ಬೆಂಗಳೂರು ಸಿಟಿ ಪೊಲೀಸರು ಇನ್ಮುಂದೆ ಬೇಕಾ ಬಿಟ್ಟಿ ಪೋಸ್ಟ್ ಮಾಡಿ ವಿವಾದ ಸೃಷ್ಟಿ ಮಾಡೋರ ಮೇಲೆ ಹೆಚ್ಚು ಗಮನವಹಿಸ್ತಿದೆ.. ಧರ್ಮ, ಜಾತಿ, ದೇಶದ ಬಗ್ಗೆ ಟ್ವೀಟ್ ಮಾಡಿ ಪ್ರಚೋದನೆ ನೀಡೋವಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳೋಕೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಅಶೋಕ್ ಅವರನ್ನು ಪ್ರಧಾನಿ ಕಚೇರಿ ಲೆಕ್ಕಕ್ಕೇ ಇಟ್ಟುಕೊಂಡಿಲ್ಲ: ಡಿ.ಕೆ ಶಿವಕುಮಾರ್ ತಿರುಗೇಟು
ಅಷ್ಟೇ ಅಲ್ಲ ಅದಕ್ಕೆ ಅಂತ್ಲೇ ನಗರದ ಎಲ್ಲಾ ಸ್ಟೇಷನ್ಗಳಲ್ಲೂ ಇಬ್ಬರು ಸಿಬ್ಬಂದಿಯನ್ನ ಸೋಷಿಯಲ್ ಮೀಡಿಯಾ ಅಬ್ಸರ್ವ್ ಮಾಡೋಕೆ ಅಂತ್ಲೇ ಜವಬ್ದಾರಿ ವಹಿಸಿದ್ದಾರೆ.. ಡಿಸಿಪಿ, ಎಸಿಪಿ ಲೆವಲ್ ಆಫೀಸ್ ನಲ್ಲೂ ಇಬ್ಬರು ಸಿಬ್ಬಂದಿ ಸೋಷಿಯಲ್ ಮೀಡಿಯಾ ಅಬ್ಸರ್ವ್ ಮಾಡ್ತಿದ್ದಾರೆ.. ಕಮಿಷನರ್ ಆಫೀಸ್ ನಲ್ಲೂ ಕೂಡ ಸೊಷಿಯಲ್ ಮೀಡಿಯಾ ವಿಂಗ್ ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಯಾರ್ಯಾರು ಏನೇನು ಟ್ವೀಟ್ ಮಾಡ್ತಾರೆ, ಯಾರು ಫೇಕ್ ಅಕೌಂಟ್ ನಿಂದ ವಿವಾದ ಸೃಷ್ಟಿ ಮಾಡ್ತಾರೆ, ದೇಶ, ಧರ್ಮ, ಭಾವೈಕ್ಯತೆ, ವ್ಯಕ್ತಿಯ ಬಗ್ಗೆ ನಿಂದನೆ ಮಾಡೋದು, ಪ್ರಚೋದನಾಕಾರಿ ಪೋಸ್ಟ್ ಮಾಡೋದು ಮಾಡ್ತಾರೆ ಅಂತೋರನ್ನ ಮಾನಿಟರ್ ಮಾಡಿ ಕೇಸ್ ದಾಖಲಿಸಲಿದ್ದಾರೆ.
ಒಟ್ಟಾರೆಯಾಗಿ ಸೋಷಿಯಲ್ ಮೀಡಿಯಾದ ಮೇಲೆ ಹದ್ದಿನ ಕಣ್ಣಿಟ್ಟಿರೋ ಪೊಲೀಸರು ಬೇಕಾ ಬಿಟ್ಟಿ ವಿವಾದ ಸೃಷ್ಟಿ ಮಾಡೋರ ಹಿಂದೆ ಬಿದ್ದಿದ್ದು, ಯೋಚನೆ ಬಂತು ಅಂತಾ ತೋಚಿದ್ದು ಬರೆದಾಕಿದ್ರೆ ಸೀದಾ ಕೇಸ್ ಹಾಕಿ ಒಳ ಹಾಕ್ತಾರೆ.. ಇನ್ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಏನೇ ಪೋಸ್ಟ್ ಮಾಡ್ಬೇಕಂದ್ರೂ, ಯಾವ ವಿಡಿಯೋ ಪೋಸ್ಟ್ ಮಾಡ್ಬೇಕಂದ್ರೆ ನಿಮ್ ಬುದ್ದಿ ನಿಮ್ ಕೈಲಿರ್ಲಿ.. ಇಲ್ಲ ಅಂದ್ರೆ ಸೀದಾ ಸ್ಟೇಷನ್ ಗೆ ಹೋಗ್ತೀರಾ ಹುಷಾರ್.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.