Bengaluru New Year celebrations : ಇನ್ನೇರಡು ದಿನ ಅಷ್ಟೇ ಹೊಸ ವರ್ಷ ಬಂದೇ ಬಿಡ್ತು.. ಸೆಲೆಬ್ರೆಷನ್ ಮಾಡಬೇಕು ಅಂತಾ ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ.‌ ಆದರೆ ಸಂಭ್ರಮಾಚರಣೆ ಬೇರೆ ತರವಾದ್ರೆ ಕಷ್ಟ. ಹೀಗಾಗಿ ನಗರ ಪೊಲೀಸರು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ. ಕೆಲ ನಿಯಮಗಳನ್ನು ಜಾರಿಗೆ ತಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳೊಕೆ ಸಜ್ಜಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು 2024ಕ್ಕೆ ಬಾಯ್ ಹೇಳಿ 2025ಕ್ಕೆ ಹಾಯ್ ಹೇಳಲು ಇಡೀ ವಿಶ್ವವೇ ಸಜ್ಜಾಗಿದೆ. ಇನ್ನೂ ಬೆಂಗಳೂರು ವಿಚಾರಕ್ಕೆ ಬಂದ್ರೆ ನ್ಯೂ ಇಯರ್ ಸೆಲೆಬ್ರೆಷನ್ ಕಮ್ಮಿ ಇರಲ್ಲ. ಸಾರ್ವಜನಿಕರಿಗೆ ಹೊಸ ವರ್ಷ ಸಂಭ್ರಮದ ಚಿಂತೆಯಾದ್ರೆ ಪೊಲೀಸ್ರಿಗೆ ಜನರಿಗೆ ತೊಂದರೆ ಆಗದ ರೀತಿ ಬಂದೋಬಸ್ತ್ ಮಾಡೋ ಟೆನ್ಷನ್.. ಈ ಹಿನ್ನೆಲೆ ಹೊಸ ವರ್ಷಕ್ಕೆ ಏನೇನ್ ಪ್ಲಾನ್ ಮಾಡಲಾಗಿದೆ ಅನ್ನೋ ವಿಚಾರಗಳನ್ನ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನದ್ ರಿವಿಲ್ ಮಾಡಿದ್ದಾರೆ. 


ಇದನ್ನೂ ಓದಿ:ಮುಖ ನೋಡಿ ನಗುವಂತಿದ್ದ ಈ ಹುಡುಗಿ ಈಗ ಹಾಟ್‌ ಬ್ಯೂಟಿ..! ಸೆಲ್ಫಿ ತಗೋಳೋಕೆ ವರ್ಷಗಟ್ಟಲೇ ಕಾಯಬೇಕು..


ಈ ವರ್ಷ ಕೂಡ ಹೊಸ ವರ್ಷಾಚರಣೆ ನಡೆಸಲಾಗುತ್ತೆ. ನಗರದಲ್ಲಿ ಯಾವ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲಾ ಇಲಾಖೆ ಜೊತೆ ಸಭೆ ನಡೆಸಿ ಮಾರ್ಗಸೂಚಿ ತಯಾರಿಸಲಾಗಿದ್ದು, ಬಿಬಿಎಂಪಿ, ಬೆಸ್ಕಾಂ ಸೇರಿ ಎಲ್ಲಾ ಇಲಾಖೆ ಜೊತೆ ಸಭೆ ನಡೆಸಲಾಗಿದೆ. ಲೈಟಿಂಗ್ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆ, ಅಗ್ನಿಶಾಮಕ ಸಹಾಯ ಬಗ್ಗೆ ಚರ್ಚೆ ಮಾಡಲಾಗಿದ್ದು, ಪ್ರಮುಖವಾಗಿ ಎಂಜಿ ರೋಡ್, ಬ್ರಿಗೆಡ್ ರೋಡ್, ಕೋರಮಂಗಲ, ಇಂದಿರಾನಗರ ಸೇರಿ ಎಲ್ಲಿ ಜನಸಂಖ್ಯೆ ಸೇರುತ್ತೆ ಅಲ್ಲಿ ಒಂದಷ್ಟು ಪ್ಲಾನ್ ಮಾಡಿರೋದಾಗಿ ಹೇಳಿದ್ದಾರೆ. 


ಪ್ರಮುಖವಾಗಿ  ಬ್ರಿಗೇಡ್, ಎಮ್‌ಜಿ ರಸ್ತೆಯಲ್ಲಿ ಏಕಮುಖ ಸಂಚಾರ, ಸೇಫ್ಟಿ ಐಲ್ಯಾಂಡ್, ಸಿಸಿಟಿವಿ, ಡ್ರೋಣ್ ಕ್ಯಾಮರಾ ಬಳಕೆ ಆಗುತ್ತೆ. ಶ್ವಾನದಳ ಕೂಡ ತಪಾಸಣೆ ಮಾಡಲಾಗುತ್ತೆ. ಅಲ್ಲದೇ ಈ ವೇಳೆ ನಡೆಯುವ ಮಾದಕ ಜಾಲದ ಮೇಲೂ ಕೂಡ ಕಣ್ಣೀಡಲಾಗಿದೆ.


ಇದನ್ನೂ ಓದಿ:ಅಯ್ಯೋ ಎಷ್ಟು ಮುದ್ದು..! ಕ್ಯಾಮರಾ ನೋಡಿ ಹಾಯ್‌.. ಅಂತ ಫ್ಲೈಯಿಂಗ್‌ ಕಿಸ್‌ ಕೊಟ್ಟ ರಾಹಾ.. ವಿಡಿಯೋ ನೋಡಿ..


ಈಗಾಗಲೇ‌ 3 ವಿದೇಶಿ ಡ್ರಗ್ ಪೆಡ್ಲರ್ ಸೇರಿ‌ 70 ಜನರನ್ನ ಬಂಧಿಸಲಾಗಿದ್ದು, ಎರಡೂವರೆ ಕೋಟಿಗೂ ಅಧಿಕ ಮೌಲ್ಯದ ಡ್ರಗ್ ಸೇರಿ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಲೇಟ್ ನೈಟ್ ಓಪನ್ ಮಾಡುವ ರೆಸ್ಟೋರೆಂಟ್, ಹೋಟೆಲ್, ಪಬ್‌ನವರಿಗೆ ಕೆಲ ಸೂಚನೆ ನೀಡಲಾಗಿದೆ. ನ್ಯೂ ಇಯರ್ ದಿನ ರಾತ್ರಿ ಒಂದು ಗಂಟೆ ಒಳಗಡೆ ಎಲ್ಲಾ ಕ್ಲೋಸ್ ಮಾಡಬೇಕು ಅಂತಾ ಆಯೋಜಕರಿಗೆ ಸೂಚನೆ ನೀಡಲಾಗಿದೆ.


ಇನ್ನೂ ಪಾನಮತ್ತರಾಗಿ ವಾಹನ ಚಾಲಾಯಿಸುವವರ ಸಂಖ್ಯೆ ಅವತ್ತು ಹೆಚ್ಚಾಗಿರುತ್ತೆ. ಹೀಗಾಗಿ ರಾತ್ರಿ ಏರ್ಪೋರ್ಟ್ ಫ್ಲೈಓವರ್ ಹೊರತುಪಡಿಸಿ ಉಳಿದೆಲ್ಲಾ ಪ್ಲೈಓವರ್‌ಗಳು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕ್ಲೋಸ್ ಇರಲಿವೆ. ಅಲ್ಲದೇ ಸಿಟಿ ಹೊರ ವಲಯದಲ್ಲಿ ನಡೆಯುವ ಪಾರ್ಟಿಗಳ ಮೇಲೂ ಕಣ್ಣೀಡಲಾಗಿದ್ದು, ರೇವ್ ಪಾರ್ಟಿ ಸೇರಿ ಇತರೆ ಪಾರ್ಟಿಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. 


ಇದನ್ನೂ ಓದಿ:2024 ರಲ್ಲಿ Google ನಲ್ಲಿ ಹೆಚ್ಚು ಜನ ಸರ್ಚ್‌ ಮಾಡಿದ ಸಾಂಗ್‌ ಇದೆ..! ನಿಮ್ಮ ಫೇವರಿಟ್‌ ಸಹ ಆಗಿಬರಹುದು..


ಅಷ್ಟೇ ಅಲ್ಲದೆ ಎಂಜಿ  ರೋಡ್ ಮೆಟ್ರೋ ಸ್ಟೇಷನ್ ಈ ಬಾರಿ ಬಂದ್ ಮಾಡಲಾಗುತ್ತೆ. ಯಾಕಂದ್ರೆ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಹೆಚ್ಚು ಜನ ಸೇರುವ ಸಾಧ್ಯತೆ ಇರುತ್ತೆ. ಹೀಗಾಗಿ ಆ ದಿನ ರಾತ್ರಿ 11ರಿಂದ  2 ಗಂಟೆವರೆಗೂ ಬಂದ್ ಇರುತ್ತೆ. ಎಂಜಿ ರೋಡ್ ಮೆಟ್ರೋದಿಂದ ಇಳೀಬೋದು. ಆದ್ರೆ ಹತ್ತೋಕೆ ಅವಕಾಶ ಇರೋದಿಲ್ಲ. ಎಂಜಿ ರಸ್ತೆ ಬದಲಾಗಿ ಟ್ರಿನಿಟಿ ಅಥವಾ ಅನಿಲ್ ಕುಂಬ್ಳೆ ರಸ್ತೆ ಬಳಿಯ ಮೆಟ್ರೋ ಹತ್ತಿ ಹೋಗಬಹುದು. 


ಒಟ್ಟಾರೆ‌ ನ್ಯೂಇಯರ್ ಸೆಲೆಬ್ರೆಷನ್ ವೇಳೆ ಯಾವುದೇ ಅಹಿತಕರ ಹಾಗೂ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಪೊಲೀಸರು ಸಿದ್ಧತೆ ನಡೆಸಿದ್ದು, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.