Bengaluru Clean City: ಸಿಲಿಕಾನ್ ಸಿಟಿ ಬೆಂಗಳೂರನ್ನು ಕ್ಲೀನ್ ಸಿಟಿ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ- ಬಿಬಿಎಂಪಿ ಮಾಸ್ಟರ್ ಫ್ಲಾನ್ (BBMP Master Plan) ಮಾಡಿದ್ದು, ಇನ್ಮುಂದೆ ಡೆಬ್ರಿಸ್ ಕ್ಲೀನ್ ಮಾಡುವ ಹೊಣೆ ಗುತ್ತಿಗೆದಾರರ ಹೆಗಲಿಗೆ ಹೊರೆಸಲು  ಮಾಸ್ಟರ್ ಪ್ಲಾನ್ ಮಾಡಿದೆ. 


COMMERCIAL BREAK
SCROLL TO CONTINUE READING

ಬೆಂಗಳೂರನ್ನು​ ಕ್ಲೀನ್ ಸಿಟಿ ಮಾಡಲು ಬಿಬಿಎಂಪಿ ಮಾಸ್ಟರ್ ಫ್ಲಾನ್!
ಬೆಂಗಳೂರಿನ್ನು ಕ್ಲೀನ್ ಸಿಟಿ (Bengaluru Clean City) ಮಾಡಲು ಯೋಜನೆ ರೂಪಿಸಿರುವ ಬಿಬಿಎಂಪಿ, ಡೆಬ್ರಿಸ್ ಕ್ಲೀನ್ ಮಾಡದ ಗುತ್ತಿಗೆದಾರರ ವಿರುದ್ದ ಕ್ರಮಕ್ಕೆ ಮುಂದಾಗಿದ್ದು, ಡೆಬ್ರಿಸ್ ಕ್ಲೀನ್ ಮಾಡಲು ತಗಲುವ ವೆಚ್ಚವನ್ನ ಗುತ್ತಿಗೆದಾರರ ಬಿಲ್ಲುಗಳಲ್ಲಿ ಕಡಿತಗೊಳಿಸಲು ಮುಂದಾಗಿದೆ. 


ಇದನ್ನೂ ಓದಿ- ಮಾನಿ ಜಲಾಶಯದ ಒಳಹರಿವು ಏರಿಕೆ: ವರಾಹಿ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ


ಡೆಬ್ರಿಸ್ ಕ್ಲೀನ್ ಮಾಡದೇ ಇದ್ರೆ ದುಪ್ಪಟ್ಟು ದಂಡ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ- ಬಿಬಿಎಂಪಿ (Bruhat Bangalore Mahanagara Palike- BBMP) ಇನ್ಮುಂದೆ ಡೆಬ್ರಿಸ್ ಕ್ಲೀನ್ ಮಾಡದೇ ಇದ್ರೆ ದುಪ್ಪಟ್ಟು ದಂಡ ಹಾಕಲು ಮುಂದಾಗಿದೆ. ಡೆಬ್ರಿಸ್ ಕ್ಲೀನ್‌ ಮಾಡಲು ತಗುಲಿದ ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚು ಹಣವನ್ನ ಬಿಲ್ಲುಗಳಲ್ಲಿ ಕಡಿತಗೊಳಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ. 


ಈ‌ ಕುರಿತು ಆದೇಶ ಹೊರಡಿಸಿದ ಬಿಬಿಎಂಪಿ  ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (BBMP Chief Commissioner Tushar Girinath), 
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 714 ಕಿ.ಮೀವರೆಗೆ ವ್ಯಾಪಿಸಿದೆ. ಈ ವ್ಯಾಪ್ತಿಯಲ್ಲಿ ರಸ್ತೆ ಮೂಲಭೂತ ಸೌಕರ್ಯ, ಯೋಜನೆ, ಬೃಹತ್ ನೀರುಗಾಲುವೆ ಹಾಗೂ ಕೆರೆಗಳು ಸೇರಿದಂತೆ ಸಿವಿಲ್ ಕಾಮಗಾರಿ ಮಾಡಲಾಗುತ್ತದೆ. ಕಾಮಗಾರಿಗಳು ಮುಕ್ತಾಯಗೊಂಡ ನಂತರ ಕೆಲ ಗುತ್ತಿಗೆದಾರರು  ಡೆಬ್ರಿಸ್ ಗಳನ್ನ ಬಿಟ್ಟು ಹೋಗುತ್ತಿದ್ದು, ಇದರಿಂದ ಬಿಬಿಎಂಪಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ.  ಡೆಬ್ರಿಸ್ ಗಳ ನಿವಾರಣೆ ಮತ್ತು ನಿರ್ಮೂಲನೆಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಪಾಲಿಕೆ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ. 


ಇದನ್ನೂ ಓದಿ- ಕಟ್ಟಡ ಕಾರ್ಮಿಕರ ಕೆಲಸ ನಿರ್ವಹಣೆಗಾಗಿ ʼಅಂಬೇಡ್ಕರ್‌ ಸೇವಾ ಕೇಂದ್ರʼ ತೆರೆಯಲು ಸರ್ಕಾರ ನಿರ್ಧಾರ 


ಆದೇಶದಲ್ಲಿ ಏನಿದೆ?
>> ಪಾಲಿಕೆ ಕಾಮಗಾರಿಗಳಿಂದ ಸೃಜನವಾಗುವ ಡೆಬ್ರಿಗಳನ್ನ ಆಯಾ ಗುತ್ತಿಗೆದಾರರಿಂದ ತೆರವುಗೊಳಿಸಬೇಕು. ಇದರ ಉಸ್ತುವಾರಿಯನ್ನ ಸಂಬಂಧಿಸಿದ ಅಧಿಕಾರಿಯು ನಿರಂತರವಾಗಿ ವಹಿಸಬೇಕು.
>> ಕಾಮಗಾರಿ ಮುಗಿದ ನಂತರ ಯಾವುದೇ ತರಹದ ಡೆಬ್ರಿಗಳನ್ನ ಸೃಜಿಸದಂತೆ ಗುತ್ತಿಗೆದಾರರಿಗೆ ಸೂಚಿಸುವುದು.
>> ಕಾಮಗಾರಿ ಮುಗಿದ ನಂತ್ರ ಡೆಬ್ರಿಸ್ ಸೃಜಿಸಿ ತೆರವುಗೊಳಿಸದೇ ಇದ್ದರೆ  ಪಾಲಿಕೆ ತೆರವುಗೊಳಿಸಬೇಕು.
>> ನಂತರ ಅಂತಿಮ ಬಿಲ್ಲುಗಳಲ್ಲಿ ಡೆಬ್ರಿಸ್ ಕ್ಲೀನ್ ಗೆ ತಗುಲಿದ ವೆಚ್ಚಗಳ 1.5 ಪಟ್ಟು(ಶೇ.150 ರಷ್ಟು)ಕಡಿತಗೊಳಿಸುವುದು.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.