Bengaluru Bandh: ಶಕ್ತಿಯೋಜನೆ ಬಳಿಕ ಸರ್ಕಾರದ ಜೊತೆ ಮುಸುಕಿನ ಗುದ್ದಾಟ ನಡೆಸ್ತಿದ್ದ ಖಾಸಗಿ ಸಾರಿಗೆ ಒಕ್ಕೂಟ, ಇದೀಗ ತಮ್ಮ ಬೇಡಿಕೆಗಳ ಈಡೇರಿಕೆಗೆ ಬಂದ್‌ ಅಸ್ತ್ರ ಪ್ರಯೋಗಕ್ಕೆ ಸಜ್ಜಾಗಿವೆ. ಬೈಕ್‌ ಟ್ಯಾಕ್ಸಿ ನಿರ್ಬಂಧ, ಚಾಲಕರಿಗೆ ಸಹಾಯಧನ ಸೇರಿದಂತೆ ಸರ್ಕಾರದ ಮುಂದೆ ಹತ್ತು ಹಲವು ಬೇಡಿಕೆ ಇಟ್ಟಿದ್ದ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಇಂದು ಬೆಂಗಳೂರು ಬಂದ್‌ಗೆ ಕರೆಕೊಟ್ಟಿವೆ. ಮಧ್ಯರಾತ್ರಿಯಿಂದಲೇ ಖಾಸಗಿ ವಾಹನಗಳ ಸೇವೆ ಸ್ಥಗಿತ ಮಾಡಿ ಬಂದ್‌ ನಡೆಸಲು ಸಜ್ಜಾಗಿರೋ ಒಕ್ಕೂಟ, ಸರ್ಕಾರದ ಜೊತೆಗೆ ಸಿಲಿಕಾನ್‌ ಸಿಟಿ ಜನರಿಗೂ ಶಾಕ್‌ ಕೊಡೋಕೆ ಸಜ್ಜಾಗಿವೆ.
 
ಹೌದು, ಶಕ್ತಿಯೋಜನೆ ಬಳಿಕ ನಷ್ಟವಾಗ್ತಿದೆ ಅಂತಾ ಅಳಲು ತೋಡಿಕೊಂಡಿದ್ದ ಖಾಸಗಿ ಸಾರಿಗೆ ಒಕ್ಕೂಟ, ವಿವಿಧ ಬೇಡಿಕೆಗಳನ್ನ ಇಟ್ಟುಕೊಂಡು ಸರ್ಕಾರದ ಗಮನಸೆಳೆಯಲು ಸಜ್ಜಾಗಿತ್ತು. ಆದರೆ, ಒಕ್ಕೂಟ ನೀಡಿದ್ದ ಡೆಡ್‌ಲೈನ್‌ ಒಳಗೆ ಸರ್ಕಾರ ಬೇಡಿಕೆಗಳನ್ನು ಈಡೇರಿಸದ ಕಾರಣ ಇದೀಗ ಇಂದು ರಾಜ್ಯ ರಾಜಧಾನಿಯಲ್ಲಿ ಒಂದು ದಿನದ ಬಂದ್‌ಗೆ ಕರೆ ನೀಡುವ ಮೂಲಕ ಸರ್ಕಾರದ ವಿರುದ್ಧ ಸಮರ ಸಾರಿವೆ. ಇನ್ನು ಈ ಬಂದ್‌ಗೆ ಸುಮಾರು 30ಕ್ಕೂ ಹೆಚ್ಚು ಖಾಸಗಿ ಸಂಘಟನೆಗಳು ಸಾಥ್‌ ನೀಡಿದ್ದು ಸಿಲಿಕಾನ್ ಸಿಟಿ ಮಂದಿಗೆ ಇಂದು ಆಟೋ, ಟ್ಯಾಕ್ಸಿ, ಒಲಾ, ಊಬರ್‌ ಸಿಗೋದು ಡೌಟ್! ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಇನ್ನು ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್‌ ಹಿನ್ನೆಲೆ ನಗರದಲ್ಲಿ 3 ಲಕ್ಷ ಆಟೋ, 1.5ಲಕ್ಷ ಟ್ಯಾಕ್ಸಿ, 20ಸಾವಿರ ಗೂಡ್ಸ್ ವಾಹನಗಳು, 5ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 80ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೋರೆಟ್ ಕಂಪನಿ ಬಸ್ ಗಳು ಬಂದ್ ಆಗಲಿದ್ದು ಸಿಲಿಕಾನ್‌ ಸಿಟಿ ಜನರಿಗೆ ಬಂದ್‌ ಬಿಸಿ ತಟ್ಟುವ ಸಾಧ್ಯತೆಗಳು ಹೆಚ್ಚಾಗಿವೆ. ಇಂದು ಯಾವೆಲ್ಲಾ ಸೇವಗಳಲ್ಲಿ ವ್ಯತ್ಯಯವಾಗಲಿವೆ. ಖಾಸಗಿ ಒಕ್ಕೂಟಗಳ ಬೇಡಿಕೆಗಳೇನು ಎಂದು ನೋಡುವುದಾದರೆ... 


 ಯಾರಿಗೆಲ್ಲ ಜಾಸ್ತಿ ಎಫೆಕ್ಟ್ ಸಾಧ್ಯತೆ...?  
- ಸರ್ಕಾರಿ ಸಾರಿಗೆ ಬಿಟ್ಟು ಖಾಸಗಿ ಸಾರಿಗೆ ಬಳಕೆ ಮಾಡುವವರಿಗೆ 
- ಏರ್‌ಪೋರ್ಟ್‌ ಟ್ಯಾಕ್ಸಿ ಸಂಪೂರ್ಣ ಸ್ಥಗಿತವಾಗುವುದರಿಂದ ಪ್ರಯಾಣಿಕರಿಗೆ ತೊಂದರೆ
- ಓಲಾ, ಊಬರ್ ಬಳಕೆದಾರರಿಗೆ ಸಮಯಕ್ಕೆ‌ ಸರಿಯಾಗಿ ಆಟೋ ಸಿಗದೇ ಇರಬಹುದು
- ಕಾರ್ಪೋರೇಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್‌ಗಳಿಂದಲೂ ಬಂದ್‌ಗೆ ಬೆಂಬಲ
- ಕೆಲಸಕ್ಕೆ ಹೋಗುವವರಿಗೆ ತೊಂದರೆ ಸಾಧ್ಯತೆ
- ಖಾಸಗಿ ವಾಹನಗಳ ಮೂಲಕ ಮಕ್ಕಳನ್ನ ಶಾಲೆಗೆ ಕಳುಹಿಸುವವರಿಗೂ ತಟ್ಟಲಿದೆ ಬೆಂಗಳೂರು ಬಂದ್ ಬಿಸಿ 
- ಸಾರಿಗೆ ಬಸ್ ಬಿಟ್ಟು ಖಾಸಗಿ ಬಸ್‌ಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ತೊಂದರೆ 
- ಗೂಡ್ಸ್ ವಾಹನಗಳನ್ನ ಬಳಕೆ ಮಾಡುವವರಿಗೆ ವಾಹನಗಳು ಸಿಗೋದು ಡೌಟ್


ಇದನ್ನೂ ಓದಿ- ಅವರು ಏನು ಹೇಳಿಕೆ ನೀಡಿದ್ದಾರೋ ನನಗೆ ಗೊತ್ತಿಲ್ಲ


ಖಾಸಗಿ ಸಾರಿಗೆ ಬಂದ್ ರೂಪುರೇಷೆ ಹೇಗೆ..? 
>> ಇಂದು ಮಧ್ಯ ರಾತ್ರಿಯಿಂದಲೇ‌ ಸ್ತಬ್ಧಗಲಿದೆ ಖಾಸಗಿ ಸಾರಿಗೆ 
>> ಸೋಮವಾರ ಮಧ್ಯರಾತ್ರಿವರೆಗೆ ಅದೇ ರೀತಿ ಪರಿಸ್ಥಿತಿ ಕಾಪಾಡುವಂತೆ ಒಕ್ಕೂಟ ಮನವಿ
>> ಏರ್‌ಪೋರ್ಟ್‌ ಟ್ಯಾಕ್ಸಿ ಸೇವೆ ಸಂಪೂರ್ಣ ಸ್ಥಗಿತಗೊಳಿಸಲು ಸೂಚನೆ
>> ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ‌ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ರ್‍ಯಾಲಿ
>> ಮೆರವಣಿಗೆ ಬಳಿಕ ಫ್ರೀಡಂ ಪಾರ್ಕ್‌ನಲ್ಲಿ ಶಕ್ತಿ ಪ್ರದರ್ಶನ
>> ಪ್ರತಿಭಟನೆ, ಮೆರವಣಿಗೆಯಲ್ಲಿ  ಪಾಲ್ಗೊಳ್ಳಲು ರಾಜ್ಯದ ಬೇರೆ ಜಿಲ್ಲೆಗಳ ಚಾಲಕರಿಗೂ ಮನವಿ


ಬಂದ್‌ಗೆ ಯಾರ್ಯಾರ ಬೆಂಬಲ..?  
* ಕರ್ನಾಟಕ ಚಾಲಕರ ಒಕ್ಕೂಟ
* ಇಂಡಿಯನ್ ವೆಹಿಕಲ್ಸ್ ಡ್ರೈವರ್ ಟ್ರೇಡ್ ಯೂನಿಯನ್
* ಪೀಸ್ ಆಟೋ ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್
* ಭಾರತ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್
* ಕರ್ನಾಟಕ ರಾಜೀವ್ ಗಾಂಧಿ ಚಾಲಕರ ವೇದಿಕೆ
* KSTOA
* KSBOA
* ಕರ್ನಾಟಕ ರಕ್ಷಣಾ ವೇದಿಕೆ ಆಟೋ ಘಟಕ
* ನಮ್ಮ ಚಾಲಕರ ಟ್ರೇಡ್ ಯೂನಿಯನ್
* ವಿಜಯಸೇನೆ ಆಟೋ ಘಟಕ
* ಜಯಕರ್ನಾಟಕ ಆಟೋ ಘಟಕ
* ಜೈ ಭಾರತ್ ಆಟೋ ಚಾಲಕರ ಸಂಘ
* ಬೆಂಗಳೂರು ಆಟೋ ಸೇನೆ
* ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್
* ಕರ್ನಾಟಕ ರಾಜ್ಯಾ ಶಾಲಾ ಮಕ್ಕಳ ವಾಹನ ಟ್ರೇಡ್ ಯೂನಿಯನ್
* ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್
* ಬೆಂಗಳೂರು ಸಾರಥಿ ಸೇನೆ
* ಕರ್ನಾಟಕ ಸಿಟಿ ಟ್ಯಾಕ್ಸ್ ಆಪರೇಟರ್ ಕಂಟ್ರೋಲರ್ ಅಸೋಸಿಯೇಷನ್
* ಕರುನಾಡು ಸಾರಥಿ ಸೇನೆ ಟ್ರೇಡ್ ಯೂನಿಯನ್
* ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘ
* ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಡ್ರೈವರ್ ಯೂನಿಯನ್
* ಕೆ.ಆರ್. ಪುರ ಆಟೋ ಚಾಲಕರ ಸಂಘ
* ಕರುನಾಡು ವಿಜಯ ಸೇನೆ ಚಾಲಕರ ಸಂಘ
* ಮೈಸೂರು ಬಸ್ ಮಾಲೀಕರ ಸಂಘ
* ಪ್ರೀ ಪೇಡ್ ಟ್ಯಾಕ್ಸಿ ಡ್ರೈವರ್ ವೆಲ್‌ಫೇರ್ ಅಸೋಸಿಯೇಷನ್
* KTDO
* ನೊಂದ ಚಾಲಕರ ವೇದಿಕೆ
* ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ
* ಶಂಕರ್ ನಾಗ್ ಆಟೋ ಸೇನೆ
* ಡಾ. ರಾಜ್‌ಕುಮಾರ್ ಆಟೋ ಸೇನೆ
* ಕರ್ನಾಟಕ ಸ್ವಾಭಿಮಾನಿ‌ ಆಟೋ ಡ್ರೈವರ್ಸ್ ಯೂನಿಯನ್
* ಓಲಾ ಉಬರ್ ಡ್ರೈವರ್ಸ್ ಅಂಡ್ ಓನರ್ಸ್ ಅಸೋಸಿಯೇಷನ್
* ಆದರ್ಶ ಆಟೋ ಯೂನಿಯನ್


ಸಾರಿಗೆ ಸಂಘಟನೆಗಳ ಪ್ರಮುಖ ಬೇಡಿಕೆಗಳೇನು..?  
* ಆಟೋಗಳಿಗೆ ಸಂಬಂಧಿಸಿದ ಬೇಡಿಕೆಗಳು:- 

- ಸರ್ಕಾರದಿಂದ ಆಟೋ ಚಾಲಕರಿಗೆ 10 ಸಾವಿರ ರೂಪಾಯಿ ಮಾಸಿಕ ಪರಿಹಾರ ಹಣ ನೀಡಬೇಕು
- ಅಸಂಘಟಿತ ಚಾಲಕರಿಗೆ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು
- ಸರ್ಕಾರದಿಂದಲೇ ಅಗ್ರಿಗೇಟರ್ ಆ್ಯಪ್ ಸಿದ್ಧಪಡಿಸಬೇಕು
- ಏರ್‌ಪೋರ್ಟ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿಕೊಡಬೇಕು
- ಎಲೆಕ್ಟ್ರಿಕ್ ಆಟೋಗಳಿಗೆ ರಹದಾರಿ ನೀಡಬೇಕು


ಇದನ್ನೂ ಓದಿ- ಜೆಡಿಎಸ್‌ ಜೊತೆ ಬಿಜೆಪಿ ಮೈತ್ರಿ ಪ್ರಾಥಮಿಕ ಹಂತದಲ್ಲಿದೆ: ಬಸವರಾಜ ಬೊಮ್ಮಾಯಿ


* ಟ್ಯಾಕ್ಸಿಗಳಿಗೆ ಸಂಬಂಧಿಸಿದ ಬೇಡಿಕೆಗಳು :- 
- ಜೀವಿತಾವಧಿ ತೆರಿಗೆಯನ್ನು ಕಂತುಗಳಲ್ಲಿ ಪಾವತಿಸುವಂತೆ ಮಾಡಬೇಕು
- ಚಾಲಕರಿಗೆ ವಸತಿ ಯೋಜನೆಯನ್ನು ಕಲ್ಪಿಸಬೇಕು
- ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಬೇಕು


* ಬಸ್‌ಗಳಿಗೆ ಸಂಬಂಧಿಸಿದ ಬೇಡಿಕೆಗಳು:- 
- ಖಾಸಗಿ ಬಸ್‌ಗಳಿಗೂ ಸ್ತ್ರೀ ಶಕ್ತಿ ಯೋಜನೆ ವಿಸ್ತರಿಸಬೇಕು
- ರಸ್ತೆ ತೆರಿಗೆ ಸಂಪೂರ್ಣ ರದ್ದು ಮಾಡಬೇಕು
- ಖಾಸಗಿ ಬಸ್‌ಗಳನ್ನ ಕಿಲೋ ಮೀಟರ್ ಆಧಾರದಲ್ಲಿ ಸರ್ಕಾರವೇ ಬಾಡಿಗೆಗೆ ಪಡೆಯಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.