ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್: ಇಂದಿನಿಂದ ಮೂರು ದಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
Namma Metro: ನಮ್ಮ ಮೆಟ್ರೋದ ಹಸಿರು ಮಾರ್ಗದ ರೈಲು ಸಂಚಾರದಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಭಾರೀ ವ್ಯತ್ಯಯವಾಗಲಿದೆ.
Namma Metro: ಬೆಂಗಳೂರಿನ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಶಾಕ್ ನೀಡಿದ್ದು ಇಂದಿನಿಂದ ಮೂರು ದಿನಗಳವರೆಗೆ (ಆಗಸ್ಟ್ 13, 14,15) ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಿದೆ.
ಈ ಕುರಿತಂತೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್), ನಮ್ಮ ಮೆಟ್ರೋ ಹಸಿರು ಮಾರ್ಗದ (Namma Metro Green Line) ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವಿನ ಮೆಟ್ರೋ ರೈಲು ಸೇವೆಯಲ್ಲಿ ಆಗಸ್ಟ್ 13ರಿಂದ ಆಗಸ್ಟ್ 15ರವರೆಗೆ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಿದೆ.
ನಾಗಸಂದ್ರದಿಂದ ಮಾದಾವರ (BIEC)ವರೆಗಿನ ರೀಚ್-3ರ ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆಗಳನ್ನು ನಡೆಸಬೇಕಾಗಿರುವುದರಿಂದ, ಪೀಣ್ಯ ಇಂಡಸ್ಟ್ರಿ (Peenya Industries) ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಮಯದ್ಲಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ- 2024ನೇ ಸಾಲಿನ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪಟ್ಟಿ ಬಿಡುಗಡೆ: ಅಭಿಮನ್ಯು ಸೇರಿ 14 ಆನೆಗಳು ಭಾಗಿ
ಪೀಣ್ಯ ಇಂಡಸ್ಟ್ರಿ ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಸಮಯದಲ್ಲಿ ವ್ಯತ್ಯಯ (Metro Time difference between Peenya Industry and Nagasandra metro stations):
ಬಿಎಂಆರ್‌ಸಿಎಲ್ (BMRCL) ನೀಡಿರುವ ಮಾಹಿತಿಯ ಪ್ರಕಾರ, ಮೆಟ್ರೋ ಸಮಯದಲ್ಲಿನ ವ್ಯತ್ಯಯ ಈ ಕೆಳಕಂಡಂತಿದೆ...
* ಇಂದು (ಆಗಸ್ಟ್ 13) ರಾತ್ರಿ 11 ರ ಬದಲಿಗೆ ರಾತ್ರಿ 10 ಗಂಟೆಯವರೆಗೆ ಮಾತ್ರ ಕೊನೆಯ ರೈಲು ಸೇವೆ ಲಭ್ಯವಿರಲಿದೆ.
* ಆಗಸ್ಟ್ 14 ರಂದು ಬೆಳಗ್ಗೆ 5ರ ಬದಲಾಗಿ 6ಕ್ಕೆ ಸಂಚಾರ ಪ್ರಾರಂಭವಾಗಲಿದೆ. ಅಂತೆಯೇ ರಾತ್ರಿ 11ರ ಬದಲಾಗಿ 10 ಗಂಟೆಯವರೆಗಷ್ಟೇ ರೈಲು ಸಂಚರಿಸಲಿದೆ.
* ಆಗಸ್ಟ್ 15 ರಂದು ಬೆಳಗ್ಗೆ 5ರ ಬದಲಾಗಿ 6 ಗಂಟೆಯಿಂದ ಮೆಟ್ರೋ ಸಂಚಾರ ಆರಂಭವಾಗಲಿದೆ.
ಮೆಟ್ರೋ ರೈಲು ಸೇವೆ (Metro Rail Service):
>> ನಾಗಸಂದ್ರ ನಿಲ್ದಾಣದಿಂದ (Nagasandra Station) ಆಗಸ್ಟ್ 13 ಮತ್ತು 14ರಂದು ಕೊನೆಯ ರೈಲು ಸೇವೆ
ರಾತ್ರಿ 11 ಗಂಟೆಯ ಬದಲಾಗಿ 10 ಗಂಟೆಗೆ ಕೊನೆಗೊಳ್ಳುತ್ತದೆ
>> ಆಗಸ್ಟ್ 14 ಮತ್ತು 15 ರಂದು ನಾಗಸಂದ್ರದಿಂದ ಮೊದಲ ರೈಲು ಸೇವೆ ಬೆಳಗ್ಗೆ 5ರ ಬದಲಾಗಿ 6ಕ್ಕೆ ಪ್ರಾರಂಭವಾಗುತ್ತದೆ.
>> ಆದಾಗ್ಯೂ, ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಆಗಸ್ಟ್ 13 ಮತ್ತು 14 ರಂದು ರಾತ್ರಿ 11.12 ಗಂಟೆಯವರೆಗೆ ಕೊನೆಯ ರೈಲು ಸೇವೆ ಲಭ್ಯವಿರುತ್ತದೆ.
>> ಪೀಣ್ಯ ಇಂಡಸ್ಟ್ರಿಯಿಂದ, ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೊದಲ ರೈಲು ಸೇವೆಯು ಆಗಸ್ಟ್ 14 ಮತ್ತು 15 ರಂದು ಬೆಳಿಗ್ಗೆ 5 ಗಂಟೆಗೆ ಸಂಚಾರ ಪ್ರಾರಂಭವಾಗುತ್ತದೆ.
ಇದನ್ನೂ ಓದಿ- CP Yogeshwar: ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಎಂದ ಸಿಪಿ ಯೋಗೇಶ್ವರ್
ಇನ್ನುಳಿದಂತೆ ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.