ಸೆಲೆಬ್ರಿಟಿ ರೇವ್ ಪಾರ್ಟಿ : ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಿದ್ರತೆ ʼಕಾಲ್ ಬಾಯ್ಸ್ʼ..!?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗೇನ ಅಗ್ರಹಾರದ ಜಿ.ಎಂ.ಫಾರ್ಮ್‌ಹೌಸ್ ನಲ್ಲಿ ರೇವ್ ಪಾರ್ಟಿ ನಡೆಯುವಾಗ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ಸೋಮವಾರ ನಸುಕಿನ ಜಾವ 2 ಗಂಟೆ ವೇಳೆ ದಾಳಿ ನಡೆಸಿದ್ದರು. ಈ ಐವರನ್ನ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಪೋಟಕ ಸಂಗತಿಗಳು ಬೆಳಕಿಗೆ ಬಂದಿವೆ.
Bangalore Rave party : ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ಈ ನಡುವೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿ ಡಿಜಿ ಐಜಿಪಿ ಆದೇಶಿಸಿದ್ದಾರೆ. ಬಂಧಿತರ ವಿಚಾರಣೆ ವೇಳೆ ಸ್ಪೋಟಕ ಮಾಹಿತಿಗಳು ಹೊರಬಂದಿದ್ದು ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಯೆಸ್... ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣವನ್ನ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸಿಸಿಬಿ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಸಿಸಿಬಿ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗೇನ ಅಗ್ರಹಾರದ ಜಿ.ಎಂ.ಫಾರ್ಮ್‌ಹೌಸ್ ನಲ್ಲಿ ರೇವ್ ಪಾರ್ಟಿ ನಡೆಯುವಾಗ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ಸೋಮವಾರ ನಸುಕಿನ ಜಾವ 2 ಗಂಟೆ ವೇಳೆ ದಾಳಿ ನಡೆಸಿದ್ದರು. ಈ ವೇಳೆ ನೂರಾರು ಮಂದಿಯನ್ನ ವಶಕ್ಕೆ ಪಡೆದುಕೊಂಡು ವಾಸು, ಅರುಣ್, ಸಿದ್ದಿಕ್, ರಣದೀರ್ ಹಾಗೂ ರಾಜ್ ಭಾವ ಅವರನ್ನ ಬಂಧಿಸಿದ್ದರು. ಈ ಐವರನ್ನ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಪೋಟಕ ಸಂಗತಿಗಳು ಬೆಳಕಿಗೆ ಬಂದಿವೆ.
ಇದನ್ನೂ ಓದಿ: 40 ಲಕ್ಷ ರೂ ಕೊಟ್ರೆ ಚೀನಾದಲ್ಲಿ ಟ್ಯಾಪಿಂಗ್ ಮಷೀನ್ ಸಿಗುತ್ತೆ
ಅಂದಹಾಗೇ ರೇವ್ ಪಾರ್ಟಿ ಭಾನುವಾರ ನಡೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಶನಿವಾರದಿಂದಲೇ ಪಾರ್ಟಿ ನಡೆದಿದ್ದು, ಭಾನುವಾರ ರಾತ್ರಿ ಸಹ ಮುಂದುವರೆದಿತ್ತು ಎನ್ನಲಾಗಿದೆ. ಪಾರ್ಟಿಯಲ್ಲಿ 250ಕ್ಕೂ ಹೆಚ್ಚು ಜನ ಶನಿವಾರವೇ ಕೆಲವರು ಪಾರ್ಟಿಯಲ್ಲಿ ಭಾಗಿಯಾಗಿ ತೆರಳಿದ್ದರು. ಇನ್ನೂ ಕೆಲವರು ಭಾನುವಾರ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ. ಪೊಲೀಸರು ದಾಳಿ ನಡೆಸಿದಾಗ ಕೆಲವರು ಎಸ್ಕೇಪ್ ಆಗಿದ್ದಾರೆ. ಸದ್ಯ ಎಸ್ಕೇಪ್ ಆಗಿದ್ದವರನ್ನು ವಿಚಾರಣೆಗೆ ಒಳಪಡಿಸಲು ಸಿಸಿಬಿ ನಿರ್ಧರಿಸಿದೆ. ಬರ್ತಡೇ ಪಾರ್ಟಿ ಹೆಸರಲ್ಲಿ ರೇವ್ ಪಾರ್ಟಿ ನಡೆದಿರುವುದು ಕನ್ಫರ್ಮ್ ಆಗಿದ್ದು, ಸೆಕ್ಸ್ ಜಾಲ ಸಹ ಇತ್ತು ಎಂಬುದು ಗೊತ್ತಾಗಿದೆ. ಹೈದರಬಾದ್ ನಿಂದ ಕಾಲ್ ಬಾಯ್ಸ್ ಗಳನ್ನು ಕರೆಸಲಾಗಿತ್ತಂತೆ. ಬಂಧಿತರ ಪೈಕಿ ವಾಸು ಎಂಬಾತ ಬರ್ತಡೆ ಪಾರ್ಟಿ ಕೇವಲ ನೆಪವಾಗಿರುವುದು ಗೊತ್ತಾಗಿದೆ.
ಇನ್ನು ಪಾರ್ಟಿಯಲ್ಲಿ ಭಾಗಿಯಾಗುವ ಪ್ರತಿಯೊಬ್ಬನ ಎಂಟ್ರಿಗೆ ಎರಡು ಲಕ್ಷ ಪಡೆದಿದ್ದಾರೆ. ಯಾರಿಗಾದರೂ ಅನುಮಾನ ಬಂದು ಕೇಳಿದರೆ ಬರ್ತ್ ಡೇ ಬಂದಿದ್ದೇವೆ, ನಾವೆಲ್ಲರೂ ವಾಸು ಗೆಳೆಯರು ಎಂದು ಹೇಳಬೇಕು ಎಂದು ತಿಳಿಸಲಾಗಿತ್ತು. ಅದರಂತೆ ಪೊಲೀಸರು ಪ್ರಶ್ನೆ ಮಾಡಿದಾಗ ವಾಸು ಬರ್ತಡೆಗೆ ಬಂದಿದ್ದೇವೆ ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿದೆ. ರೇವ್ ಪಾರ್ಟಿಗೆ ಮೊದಲನೇ ದಿನ ಬಂದು ಹೋದವರನ್ನ ಕರೆಸಿ ವಿಚಾರಣೆ ಮಾಡುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ರೇವ್ ಪಾರ್ಟಿ ಮತ್ತೆ ಸದ್ದು ಮಾಡುತ್ತಿದ್ದು, ತನಿಖೆ ಎಷ್ಟರ ಮಟ್ಟಿಗೆ ನಡೆಯುತ್ತೆ ಎಂಬುದನ್ನ ಕಾದು ನೋಡಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.