Bengaluru Water Crisis: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನ ಸಮಸ್ಯೆ ಇರುವುದರಿಂದ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸದ್ಯ  ಮಾರ್ಚ್ 25 ರಂದು ಹೋಳಿ ಆಚರಣೆಗೆ ಕೆಲವು ನಿಯಮಗಳನ್ನು ವಿಧಿಸಿದೆ. ಹೋಳಿ ಹಬ್ಬವನ್ನು ಆಚರಿಸಲು ಪೂಲ್ ಪಾರ್ಟಿಗಳು ಅಥವಾ ಮಳೆ ನೃತ್ಯಗಳಿಗೆ (ರೇನ್‌ ಡ್ಯಾನ್ಸ್‌) ಕಾವೇರಿ ಅಥವಾ ಬೋರ್‌ವೆಲ್ ನೀರನ್ನು ಬಳಸದಂತೆ ವಾಣಿಜ್ಯ ಮತ್ತು ಮನರಂಜನಾ ಕೇಂದ್ರಗಳನ್ನು ಮನವಿ ಮಾಡಿದೆ.


COMMERCIAL BREAK
SCROLL TO CONTINUE READING

BWSSB ಬಿಡುಗಡೆ ಮಾಡಿದ ಆದೇಶದಲ್ಲಿ, "ಈ ಸಮಯದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಮಳೆ ನೃತ್ಯಗಳು ಮತ್ತು ಪೂಲ್ ಪಾರ್ಟಿಗಳಂತಹ ಮನರಂಜನೆಯನ್ನು ಆಯೋಜಿಸುವುದು ಸೂಕ್ತವಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದ ಕಾವೇರಿ ನೀರು ಮತ್ತು ಬೋರ್‌ವೆಲ್ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಹಿಂದೂ ಸಂಸ್ಕೃತಿ ಹೋಳಿ  ಹಬ್ಬವನ್ನು ಮನೆಯಲ್ಲಿ ಆಚರಿಸಲು ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ" ಎಂದು ತಿಳಿಸಿದೆ.


ಇದನ್ನೂ ಓದಿ: ಚುನಾವಣಾ ಚೆಕ್ ಪೋಸ್ಟ್: ಬಿಸಿಲಿಗೆ ಬೆಂಡಾದ ಚುನಾವಣಾ ಸಿಬ್ಬಂದಿ


ಈಗಾಗಲೇ ಬೆಂಗಳೂರಿನ ಅನೇಕ ಹೋಟೆಲ್‌ಗಳು ಹೋಳಿ ಆಚರಣೆಗಾಗಿ ಆಯೋಜಿಸಲಾದ ಪೂಲ್ ಪಾರ್ಟಿಯ ಟಿಕೆಟ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿವೆ. ಆದರಿಂದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೀರಿನ ಕೊರತೆಯನ್ನು ನಿಭಾಯಿಸಿ ಎಂದು ಕೇಳಿಕೊಂಡಿದ್ದಾರೆ. ಹಾಗೆಯೇ ಸಿಎಂ "ಸಿಲಿಕಾನ್‌ ಸಿಟಿಯು ದಿನಕ್ಕೆ ಸುಮಾರು 500 ಮಿಲಿಯನ್ ಲೀಟರ್ ನೀರಿನ (ಎಂಎಲ್‌ಡಿ) ಕೊರತೆಯನ್ನು ಎದುರಿಸುತ್ತಿದೆ ಮತ್ತು 2,600 ಎಂಎಲ್‌ಡಿಗಳ ಅಗತ್ಯತೆ ಮತ್ತು ಪ್ರತಿದಿನ ಸಭೆ ನಡೆಸಿ ಕ್ರಿಯಾ ಯೋಜನೆಯನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ " ಎಂದು ಹೇಳಿದರು. 


ಸಿಎಂ ಹೇಳಿಕೆಯ ಪ್ರಕಾರ, "ಕಾವೇರಿ ನದಿಯಿಂದ 1,470 ಎಂಎಲ್‌ಡಿ ನೀರು ಬರುತ್ತಿದ್ದು, 650 ಎಂಎಲ್‌ಡಿ ಬೋರ್‌ವೆಲ್‌ನಿಂದ ಪಡೆಯಲಾಗುತ್ತದೆ. ಬೆಂಗಳೂರಿನಲ್ಲಿ 14,000 ಬೋರ್‌ವೆಲ್‌ಗಳಿದ್ದು, 6,900 ಬತ್ತಿ ಹೋಗಿವೆ. ಜಲಮೂಲಗಳು ಅತಿಕ್ರಮಿಸಲ್ಪಟ್ಟಿವೆ. ಬೆಂಗಳೂರಿಗೆ 2,600 ಎಂಎಲ್‌ಡಿ ನೀರು ಬೇಕು. ಇದರಲ್ಲಿ 1,470 ಎಂಎಲ್‌ಡಿ ಕಾವೇರಿ ನದಿಯಿಂದ ಮತ್ತು 650 ಎಂಎಲ್‌ಡಿ ಬೋರ್‌ವೆಲ್‌ನಿಂದ ಬರುತ್ತದೆ. ನಮ್ಮಲ್ಲಿ ಸುಮಾರು 500 ಎಂಎಲ್‌ಡಿ ಕೊರತೆಯಿದೆ," ಎಂದು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.