ಬೆಂಗಳೂರು:  ರಾಜಧಾನಿಯಲ್ಲಿ ನಕಲಿ ನೋಟಿನ ಹಾವಳಿ ಹೆಚ್ಚಾಗಿದ್ದು,‌ ಮೂವರು ಆರೋಪಿಗಳನ್ನ ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ತಮಿಳನಾಡು ಮೂಲದ ಶರವಣನ್‌, ಕೇರಳ‌ದ ನಿತಿನ್ ಹಾಗೂ ದೇವನ್ ಎಂಬುವರನ್ನ ಬಂಧಿಸಿ 500 ರೂ ಮುಖಬೆಲೆಯ 6,53,500 ಬೆಲೆಯ 1307 ಖೋಟಾನೋಟುಗಳನ್ನು ಸೀಜ್ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಆರೋಪಿಗಳುಬಿಹಾರದಿಂದ ನಕಲಿ ನೋಟು ತಂದು ಬೆಂಗಳೂರಿನಲ್ಲಿ ಚಲಾವಣೆ ಮಾಡುತ್ತಿದ್ದರು. Fake currency tamlinadu ಹಾಗೂ Motohaker.93 
ಇನ್ಸ್ಟಾಗ್ರಾಂ ಅಕೌಂಟ್  ಮೂಲಕ ಗ್ರಾಹಕರಿಗೆ ಗಾಳ ಹಾಕುತ್ತಿದ್ದ ಆರೋಪಿಗಳು 25 ಸಾವಿರ ಅಸಲಿ ನೋಟು ಕೊಟ್ಟರೆ 1 ಲಕ್ಷ ನಕಲಿ ನೋಟುಗಳನ್ನ ನೀಡಿ ಜನರನ್ನು ಯಾಮಾರಿಸುತ್ತಿದ್ದರು.‌


ಇದನ್ನೂ ಓದಿ: ನಾಯಿಯಾದ ಮಾನವ... ಈತ ಪ್ರಾಣಿಯಂತೆ ಕಾಣಲು ಮಾಡಿದ ಖರ್ಚಿಗೆ ಒಂದು ಮನೆ ಕಟ್ಟಬಹುದಿತ್ತು...!


ಜನನಿಬಿಡ ಪ್ರದೇಶಗಳಾದ ರೈಲ್ವೇ ಸ್ಟೇಷನ್ ಹಾಗೂ ಬಸ್ ಸ್ಟಾಂಡ್ ಗಳಲ್ಲಿ ಆರೋಪಿಗಳು ಖೊಟಾ ನೋಟು ಎಕ್ಸ್ ಚೇಂಜ್ ಮಾಡುತ್ತಿದ್ದರು. ಎಲ್ಲವನ್ನೂ ಇನ್ಸ್ಟಾಗ್ರಾಮ್ ಮೂಲಕವೇ ವ್ಯವಹರಿಸುತಿದ್ದ ಆರೋಪಿ ಶರವಣನ್ ಬಿಹಾರಕ್ಕೆ ತೆರಳಿ 10 ಲಕ್ಷ ನೋಟಿಗೆ 3 ಲಕ್ಷ ಅಸಲಿ ನೋಟು ನೀಡಿ ಬೆಂಗಳೂರಿಗೆ ತಂದಿದ್ದ. ಬಳಿಕ ಬೆಂಗಳೂರಿನಲ್ಲಿ 4 ಸಾವಿರ ಅಸಲಿ ನೋಟಿಗೆ 10 ಸಾವಿರ  ಖೋಟಾ ನೋಡು ನೀಡುತಿದ್ದ.


ಸದ್ಯ ಈತನಿಂದ ನಕಲಿ ನೋಟು ಪಡೆದ ಮತ್ತಿಬ್ಬರು ಕೇರಳ ಮೂಲದ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಖೋಟಾ ನೋಟುಗಳನ್ನ ಸೀಜ್ ಮಾಡಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.