Gruha Jyoti Yojane: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯು ಜನರಿಗೆ ಪ್ರತಿ ತಿಂಗಳು ಉಚಿತ ವಿದ್ಯುತ್ ಒದಗಿಸುವ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದೆ. ಆದರೆ, ಗೃಹಜ್ಯೋತಿ ಯೋಜನೆ ಇದರ ಷರತ್ತುಗಳಿಂದಾಗಿ ಬಹಳಷ್ಟು ಗೊಂದಲಗಳಿಗೆ ಗುರಿಯಾಗಿದೆ. ಸಾರ್ವಜನಿಕರಲ್ಲಿ ಈ ಗೊಂದಲಗಳನ್ನು ಹೋಗಲಾಡಿಸಾಲು ಬೆಸ್ಕಾಂ ಸ್ಪಷ್ಟೀಕರಣವನ್ನೂ ನೀಡಿದೆ. 


COMMERCIAL BREAK
SCROLL TO CONTINUE READING

ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ನಿಮಗೂ ಈ ಗೊಂದಲಗಳಿದ್ದರೆ ಇಲ್ಲಿದೆ ಸ್ಪಷ್ಟನೆ:
ಪ್ರಶ್ನೆ 1: 

ಗೃಹಜ್ಯೋತಿ ಯೋಜನೆಯ ಪ್ರಯೋಜನ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಲಭ್ಯವಾಗಲಿದೆಯೇ? 
ಉತ್ತರ: 
ಹೌದು, ನೀವು ಬಾಡಿಗೆದಾರರಾಗಿದ್ದರೂ ಸಹ ನೀವು ಈ ಯೋಜನೆಯ ಪ್ರಯೋಜನವನ್ನು ಪಡೆಯ್ಬಹುದು. ಇದಕ್ಕಾಗಿ ನೀವು ಮನೆಯ ವಿಳಾಸಕ್ಕೆ ಸಂಬಂಧಿಸಿದಂತೆ ದಾಖಲೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಲಿಂಕ್ ಮಾಡಿ ನೋಂದಾಯಿಸಬೇಕು. 


ಇದನ್ನೂ ಓದಿ- ಜೂನ್ 15 ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ


ಪ್ರಶ್ನೆ 2:  ಗೃಹ ಬಳಕೆದಾರರು/ಫಲಾನುಭವಿಗಳು ಯಾವುದಾದರೂ ಮಾಹೆಗಳಲ್ಲಿ ಮಾತ್ರ 200 ಯೂನಿಟ್ ಮಿತಿ ದಾಟಿದರೂ ಸದರಿ ಯೋಜನೆಯಲ್ಲಿ ಮುಂದುವರಿಯುವವರೆ...? 
ಉತ್ತರ: 
200 ಯೂನಿಟ್ ಗಳ ಬಳಕೆಯ ಮಿತಿಯನ್ನು ಯಾವುದಾದರೂ ಮಾಹೆಗಳಲ್ಲಿ ಮೀರಿದಲ್ಲಿ, ಆ ತಿಂಗಳ ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಿ, ಯೋಜನೆಯಲ್ಲಿ ಮುಂದುವರಿಯಬಹುದು. 


ಪ್ರಶ್ನೆ 3:
ಗೃಹಜ್ಯೋತಿ ಯೋಜನೆ ಬಗ್ಗೆ ಸರ್ಕಾರದ ಆದೇಶದ ಬಳಿಕ ಗೃಹಬಳಕೆಗಾಗಿ  ಹೊಸದಾಗಿ ವಿದ್ಯುತ್‌ ಸಂಪರ್ಕ ಪಡೆದ ಗ್ರಾಹಕರಿಗೆ ಬಳಕೆದಾರರಿಗೆ ಈ ಯೋಜನೆಯು ಆನ್ವಯಿಸುವುದೇ? 
ಉತ್ತರ: 
ಗೃಹ ಬಳಕೆಗಾಗಿ ಹೊಸ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರಿಗೆ ಬಳಕೆ ಇತಿಹಾಸ ಇರುವುದಿಲ್ಲ. ಹಾಗಾಗಿ, ರಾಜ್ಯದ ಗೃಹ ಬಳಕೆದಾರರ ಸರಾಸರಿ ಬಳಕೆ ಮಾಸಿಕ ಮಾಸಿಕ 53 ಯೂನಿಟ್‌ಗಳಾಗಿರುವುದರಿಂದ 53 ಯೂನಿಟ್‌ಗಳನ್ನೇ ನಿರ್ಧರಿಸಿ ಯೋಜನೆಯ ಸೌಲಭ್ಯವನ್ನು ವಿಸ್ತರಿಸಲಾಗುವುದು. 


ಪ್ರಶ್ನೆ 4:
2022-23 ರಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಬಳಕೆ ಅವಧಿಯ ಬಳಕೆ ದಾಖಲಾಗಿದ್ದಲ್ಲಿ, ಅಂತಹ ಗೃಹಬಳಕೆದಾರರ ಸರಾಸರಿ ಮನೆಗಳ ಅವಧಿಯ ಸರಾಸರಿ ವಿಧಾನ ಹೇಗೆ..? (Shifted Houses)
ಉತ್ತರ: 
ಗುಹ ಬಳಕೆ ಇತಿಹಾಸ ಇಲ್ಲದೇ ಇರುವುದರಿಂದ ರಾಜ್ಯದ ಗೃಹಬಳಕೆದಾರರ ಸರಾಸರಿ ಬಳಕೆಯು (53 ಯೂನಿಟ್ ಗಳನ್ನೇ ನಿರ್ಧರಿಸಿ) ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸಲಾಗುವುದು. 


ಇದನ್ನೂ ಓದಿ- ವಿದ್ಯುತ್ ಬಿಲ್ ಏರಿಕೆ ಖಂಡಿಸಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ


ಪ್ರಶ್ನೆ 5:
Multi Stored Apartment ಗಳಿಗೆ ಈ ಯೋಜನೆ ಅನ್ವಯಿಸುತ್ತದೆಯೇ..?
ಉತ್ತರ: 
ಯಾವ ಮನೆಗಳಿಗೆ ಪ್ರತ್ಯೇಕ ಮೀಟರ್ ಇದೆಯೋ ಹಾಗೂ ಮೀಟರ್ ರೀಡಿಂಗ್ ಮಾಡಲಾಗುತ್ತಿದೆಯೋ ಅಂತಹ ಎಲ್ಲಾ ಮನೆಗಳಿಗೆ ಈ ಯೋಜನೆ ಅನ್ವಯಿಸುತ್ತದೆ ಎಂದು ಬೆಸ್ಕಾಂ ಸ್ಪಷ್ಟನೆ ನೀಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ