ಬೆಂಗಳೂರು: ನೈರುತ್ಯ ರೈಲ್ವೇ ವಲಯ ವ್ಯಾಪ್ತಿಯಲ್ಲಿ ಸಂಚಾರ ಮಾಡುವ ಕೆಲ ವಿಶೇಷ ರೈಲಿನ ಸಮಯವನ್ನ ವಿಸ್ತರಣೆ ಮಾಡಲಾಗಿದೆ. ಈ ಕೆಳಗಿನ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ಕೆಲ ದಿನಗಳ ಕಾಲ ವಿಸ್ತರಣೆ ಮಾಡಲು ನೈರುತ್ಯ ರೈಲ್ವೆ ವಲಯವು  ನಿರ್ಧರಿಸಲಾಗಿದೆ.


COMMERCIAL BREAK
SCROLL TO CONTINUE READING

 1 . ರೈಲು ಸಂಖ್ಯೆ 07355 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ರಾಮೇಶ್ವರಂ ನಿಲ್ದಾಣಗಳ ನಡುವೆ ಪ್ರತಿ ಶನಿವಾರ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜುಲೈ 1 ರಿಂದ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜೂನ್ 24 ರವರೆಗೆ ಓಡಿಸಲು ಸೂಚಿಸಲಾಗಿತ್ತು.


ಇದನ್ನೂ ಓದಿ: ದೇಶದಲ್ಲಿಯೇ ಪ್ರಪ್ರಥಮ ಸುಸಜ್ಜಿತ ತಂತ್ರಜ್ಞಾನದ ಪಾಲಿಕೆ ಕೌನ್ಸಿಲ್ ಸಭಾಂಗಣ


2.  ರೈಲು ಸಂಖ್ಯೆ 07356 ರಾಮೇಶ್ವರಂ ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಪ್ರತಿ ಭಾನುವಾರ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜುಲೈ  ರಿಂದ ಅಕ್ಟೋಬರ್ 1 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜೂನ್ 25 ರವರೆಗೆ ಓಡಿಸಲು ಸೂಚಿಸಲಾಗಿತ್ತು.


3.  ರೈಲು ಸಂಖ್ಯೆ 07377 ವಿಜಯಪುರ ಮತ್ತು ಮಂಗಳೂರು ಜಂಕ್ಷನ್‌ ನಿಲ್ದಾಣಗಳ ನಡುವೆ ದಿನಾಲೂ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜುಲೈ 1 ರಿಂದ ಅಗಸ್ಟ್ 31 ರವರೆಗೆ  ವಿಸ್ತರಿಸಲಾಗುತ್ತಿದೆ. ಈ  ಮೊದಲು ಜೂನ್ 30 ರವರೆಗೆ ಓಡಿಸಲು ಸೂಚಿಸಲಾಗಿತ್ತು.


ಇದನ್ನೂ ಓದಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನ - ಹೆಚ್‌ ಡಿ ಡಿ


4.  ರೈಲು ಸಂಖ್ಯೆ 07378 - ಮಂಗಳೂರು ಜಂಕ್ಷನ್‌ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ದಿನಾಲೂ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜುಲೈ 2 ರಿಂದ ಸೆಪ್ಟೆಂಬರ್  1 ರವರೆಗೆ  ವಿಸ್ತರಿಸಲಾಗುತ್ತಿದೆ. ಈ  ಮೊದಲು ಜುಲೈ 1 ರವರೆಗೆ ಓಡಿಸಲು ಸೂಚಿಸಲಾಗಿತ್ತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ