ಬೆಂಗಳೂರು : ರಾಜಧಾನಿಯಲ್ಲಿ ಉದ್ಯಮಿಗಳಿಗೆ ಧಮ್ಕಿ ಹಾಕೋದು, ಸುಲಿಗೆ ಮಾಡೋದು ಕಾಮನ್ ಆಗಿದೆ. ಇಂತಹ ಅನೇಕ ಪ್ರಕರಣಗಳು ಪ್ರತಿದಿನ ನಡೀತಾನೆ ಇವೆ, ಆದರೆ ಅದರಲ್ಲಿ ಬಯಲಿಗೆ ಬರೋದು ಒಂದೆರಡು ಮಾತ್ರ. ಸದ್ಯಕ್ಕೆ ಇಂತದ್ದೆ ಒಂದು ಪ್ರಕರಣದಲ್ಲಿ ನಕಲಿ ಆರ್‌ಟಿಐ ಕಾರ್ಯಕರ್ತ ಮತ್ತು ರೌಡಿಶೀಟರ್‌ ಅನ್ನು ಬಂಧಿಸಲಾಗಿದೆ.
 
ನಟ ಕಿಚ್ಚ ಸುದೀಪ್ ಮತ್ತು ರವಿಶಂಕರ್ ನಟಿಸಿರುವ ʼಕೆಂಪೇಗೌಡʼ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ಚಿತ್ರದಲ್ಲಿ ವಿಲನ್ ಆರುಮುಗಂ ಉದ್ಯಮಿಗಳನ್ನು ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡುತ್ತಿರುತ್ತಾರೆ. ಇದೀಗ ಇಂತದ್ದೆ ಒಂದು ರಿಯಲ್ ಕೇಸ್ ಬೆಂಗಳೂರಿನಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:ಮೀನುಗಾರಿಕೆಯಲ್ಲಿ 55 ಲಕ್ಷ ಹೊಸ ಉದ್ಯೋಗ ಸೃಷ್ಟಿ


ಹೌದು.. ಜೈ ಹಿಂದ್ ಎಂಬ ಸಂಘಟನೆ ಲೀಡರ್ ಆಗಿರುವ ದೀಪಕ್ ಗೌಡ ಒಂದಷ್ಟು ರೌಡಿಶೀಟರ್ಗಳ ಗುಂಪು ಕಟ್ಟಿಕೊಂಡಿದ್ದ. ಅಲ್ಲದೆ, ಸಿಟಿಯಲ್ಲಿ ಹೊಸ ಬಿಲ್ಡಿಂಗ್ ನೋಡಿದ್ರೆ ಸಾಕು ತಾನೊಬ್ಬ RTI ಕಾರ್ಯಕರ್ತ ಅಂತ ಬಿಲ್ಡಪ್ ಕೊಟ್ಕೊಂಡು ಒಂದಿಬ್ಬರು ರೌಡಿಗಳ ಜೊತೆ ಬಿಲ್ಡರ್‌ಗಳ ಹತ್ರ ಹೋಗುತ್ತಿದ್ದ. 


ಅಲ್ಲಿ ನಿಮ್ಮ ಬಿಲ್ಡಿಂಗ್ ಸರಿ ಇಲ್ಲ, ರೂಲ್ಸ್ ಪ್ರಕಾರ ಕಟ್ಟಿಲ್ಲ, ಇದನ್ನೆಲ್ಲ ಬಹಿರಂಗ ಮಾಡ್ತೀವಿ ಅಂತ ಬೆದರಿಸಿ ಹಣ ವಸೂಲಿ ಮಾಡ್ತಿದ್ದ. ಇದೇ ರೀತಿ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿರೋ ಬಿಲ್ಡರ್ ಒಬ್ಬರ ಬಳಿ ಹೋಗಿ 85 ಲಕ್ಷ ಕೊಡಿ ಅಂತ ಧಮ್ಕಿ ಹಾಕಿದ್ದ. ಆದ್ರೆ, ಆ ಬಿಲ್ಡರ್ ಕೊಟ್ಟ ದೂರಿನ ಮೇಲೆ ಸಿಸಿಬಿ ಟೀಂ ದೀಪಕ್ ಗೌಡ ಮತ್ತು ತಾವರೆಕೆರೆ ರೌಡಿಶೀಟರ್ ರಕ್ಷಿತ್ ನನ್ನ ಹೆಡೆಮುರಿ ಕಟ್ಟಿದ್ದಾರೆ.  ಅಲ್ಲದೆ, ಇತನಿಗೆ ಸಾಥ್ ನೀಡಿದ್ದ ಶ್ರೀರಾಂಪುರ ರೌಡಿಶೀಟರ್ ಅಜಯ್ ಕುಮಾರ್‌ಗೆ ಬಲೆ ಬೀಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.