ಬೆಂಗಳೂರು : ತನ್ನೊಳಗಿನ ಕಿಚ್ಚು ತನ್ನನ್ನೆ ಸುಡದೇ ಪರರನ್ನ ಸುಡುವುದೇ ಎಂಬ ಮಾತಿದೆ. ಹೀಗೆ ಆತ ಕೂಡ ಏರಿಯಾದಲ್ಲಿ ಕಂಡ ಕಂಡವರ ಮೇಲೆ ಮನಸ್ಸಿನಲ್ಲೆ ಕಿಚ್ಚು ಹೊತ್ತಿಸಿಕೊಂಡು ಉರಿಯುತ್ತಿದ್ದ. ಅದೇ ಕಿಚ್ಚು ಈಗ ಅವನನ್ನೆ ಸುಟ್ಟಿದೆ. ಈಗ ಮೀಸೆ ಚಿಗುರಿದ ಹುಡುಗರು ಚಟ್ಟ ಕಟ್ಟಿ ಮಸಣ ಸೇರಿಸಿದ್ದಾರೆ. ಇದದ ಕಂಪ್ಲೀಟ್ ಸ್ಟೋರಿ ಇಲ್ಲಿದೆ..


COMMERCIAL BREAK
SCROLL TO CONTINUE READING

ಹೀಗೆ ಮಲಗಿದ್ದಲ್ಲೆ ಹೆಣವಾಗಿ ಹೋದವನು ವಿವೇಕನಗರ ಪೊಲೀಸ್ ಠಾಣೆಯ ರೌಡಿಶೀಟರ್ ಸತೀಶ್ @ ಮಿಲ್ಟ್ರಿ ಸತೀಶ್. ಇವನ ಹತ್ಯೆಗೆ ಕಾರಣರಾದವದರೇ ಗಡ್ಡ ಮೀಸೆ ಸರಿಯಾಗಿ ಬಾರದ ಈ ನಾಲ್ಕು ಜನ. ಪ್ರಶಾಂತ್, ಧನುಷ್, ಸುನಿಲ್ ಮತ್ತು ಕ್ಲಮೆಂಟ್.. ರೌಡಿಶೀಟರ್ ಅಗಿದ್ದ ಕೊಲೆಯಾದ ಸತೀಶ್ ಏರಿಯಾದಲ್ಲಿ ತನ್ನದೆ ಹವಾ ನಡೆಯಬೇಕು ಅಂತಾ ಅವಾಜ್ ಹಾಕಿಕೊಂಡು ಓಡಾಡ್ತಾ ಇದ್ದ. 


ಇದನ್ನೂ ಓದಿ:ಕಮಲಹಾಸನ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ? ತಮಿಳಿಗೆ ರೀ ಎಂಟ್ರಿ ಕೊಡಲಿರುವ ಬಾಲಿವುಡ್ ಬೆಡಗಿ!


ಅಷ್ಟೇ ಆಗಿದ್ರೆ ಇನ್ನು ಸ್ವಲ್ಪ ದಿನ ಹೆಂಡತಿ ಮಕ್ಕಳ ಜೊತೆ ಬದುಕಿರ್ತಾಯಿದ್ದ. ಆದ್ರೆ ಈತ ಮಾಡಿದ್ದೇ ಅವನನ್ನು ಮಸಣ ಸೇರುವಂತೆ ಮಾಡಿದೆ. ಇದಕ್ಕೆ ಕಾರಣ ಈ ನಾಲ್ಕು ಜನರನ್ನ ಕಂಡ ಕಂಡಲ್ಲಿ ಗುರಾಯಿಸಿದ್ದು, ಕಿಚಾಯಿಸಿದ್ದು, ಅವಾಜ್ ಹಾಕಿದ್ದು. ಇಷ್ಟಕ್ಕೆ ತಾಳ್ಮೆ ಕಳೆದುಕೊಂಡ ಹುಡುಗರು ರೌಡಿಶೀಟರ್ ಸತೀಶ್ ನ್ನ ಕಥೆ ಮುಗಿಸಿ ಕೊಂದು ಏಸ್ಕೇಪ್ ಅಗಿದ್ರು. 


ಹೌದು, ಕೊಲೆ ಯತ್ನ ಸೇರಿ ಹಲವು ಕ್ರಿಮಿನಲ್ ಪ್ರಕರಣದಲ್ಲಿ ಜೈಲಿಗೆ ಹೋಗಿ ಸತೀಶ್ ಹೊರಬಂದಿದ್ದ. ಜೈಲಿನಿಂದ ಬಂದವನ ಅಬ್ಬರ ಏರಿಯಾದಲ್ಲೆ ಹೆಚ್ಚಾಗಿತ್ತು. ಮೂರು ದಿನಗಳ ಹಿಂದೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ಒಂದರಲ್ಲಿ ಕಂಠಪೂರ್ತಿ ಕುಡಿದಿದ್ದ. ಕುಡಿದು ಹೊರಬಂದವನ ಕಣ್ಣಿಗೆ ಪ್ರಶಾಂತ್, ಧನುಷ್, ಸುನಿಲ್ ಮತ್ತು ಕ್ಲಮೆಂಟ್ ಟೀಮ್ ಎದುರಾಗಿತ್ತು. 


ಇದನ್ನೂ ಓದಿ:ಪ್ರತ್ಯೇಕ ಅಪಘಾತ; ಮೂವರು ಸಾವು, 7 ಮಂದಿಗೆ ಗಂಭೀರ ಗಾಯ!


ಅವರನ್ನ ನೋಡಿದವನೇ ಮೈಮೇಲೆ ದೆವ್ವ ಬಂದವನ ಹಾಗೆ ರಸ್ತೆಯಲ್ಲಿ ನಿಂತು ಒದರಿದ್ದ ಅಷ್ಟೇ, ಇನ್ನು ಇವನನ್ನ ಹೀಗೆ ಬಿಟ್ರೆ ನಾವು ಏರಿಯಾದಲ್ಲಿ ನೆಮ್ಮದಿಯಾಗಿ ಬದುಕೊದು ಕಷ್ಟ ಮಾತಾಡಿಕೊಂಡವರೆ ಪ್ಲಾನ್ ರೆಡಿ ಮಾಡಿದ್ರು. ಅದರಂತೆ ಮನೆಗೆ ಹೋಗುತ್ತಿದ್ದವನ ಹಿಂಬಾಲಿಸಿ ಮನೆ ಪತ್ತೆ ಮಾಡಿಕೊಂಡಿದ್ರು. ಯಾವಾಗ ಮನೆಯಲ್ಲೆ ಇದ್ದಾನೆ ಅಂತ ಕನ್ಪಾರ್ಮ್ ಅಯ್ತೊ ಏಕಾಏಕಿ ಮನೆಗೆ ನುಗ್ಗಿ ಲಾಂಗು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ರು.


ಘಟನೆಯ ಬೆನ್ನಲ್ಲೆ ಪ್ರಕರಣ ದಾಖಲು ಮಾಡಿಕೊಂಡಿದ್ದ ವಿವೇಕನಗರ ಪೊಲೀಸರು ನಾಲ್ಕು ಹಂತಕರ ಹೆಡೆಮುರಿ ಕಟ್ಟಿದ್ದಾರೆ. ಪ್ರಕರಣ ಸಂಬಂಧ ಮತ್ತೊರ್ವ ತಲೆಮರೆಸಿಕೊಂಡಿದ್ದು, ಆತನಿಗಾಗಿ ತಲಾಶ್ ನಡೆಸುತ್ತಿದ್ದಾರೆ. ಅದೇನೆ ಇರಲಿ, ಈ ಸತೀಶ ತನ್ನ ಪಾಡಿಗೆ ತಾನು ಇರದೇ.. ಸುಖಾ ಸುಮ್ಮನೆ ಹವಾ ಮೇಂಟೆನ್ ಮಾಡಲು ಹೋಗಿ ಮಸಣ ಸೇರಿದ್ದು ದುರಂತವೇ ಸರಿ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.