ಬೆಂಗಳೂರು : ಈ ಬಾರಿ ಸ್ವಾತಂತ್ರೋತ್ಸವದ ಅಂಗವಾಗಿ ಕೆಂಗಲ್ ಹನುಮಂತಯ್ಯನವರ ಸ್ಮರಣಾರ್ಥ ಸಸ್ಯಕಾಶಿ ಲಾಲ್ ಭಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಆಗಸ್ಟ್ 4 ರಿಂದ 15 ರವರೆಗೆ ನಡೆಯಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು.


COMMERCIAL BREAK
SCROLL TO CONTINUE READING

ಲಾಲ್‌ಬಾಗ್‌ನ ಐತಿಹಾಸಿಕ ಬಂಡೆ ಹಿಂಭಾಗದಲ್ಲಿ ಪಶ್ಚಿಮ ಘಟ್ಟಗಳ ಘಟ್ಟಗಳ ವಿಶೇಷ ಸಸ್ಯ ಪ್ರಭೇದಗಳನ್ನು ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 214ನೇ ಫಲ ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ವಿಶೇಷವಾಗಿ ಕೆಂಗಲ್ ಹನುಮಂತಯ್ಯನವರ ಹಿರಿಮೆಯನ್ನು ಮತ್ತು ನಾಡಿಗೆ ಅವರು ನೀಡಿದ ಕೊಡುಗೆಗಳನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸುಮಾರು ಎರಡು ಕೋಟಿಯಷ್ಟು  ಪ್ರದರ್ಶನಕ್ಕೆ ವೆಚ್ಚದಲ್ಲಿ ನಡೆಸಲಾಗುತ್ತಿರುವ ಪ್ರದರ್ಶನವನ್ನು ಶುಕ್ರವಾರ ಸಿಎಂ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 10 ಲಕ್ಷಕ್ಕೂ ಹೆಚ್ಚು ವೀಕ್ಷಕರು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದರು.


ಇದನ್ನೂ ಓದಿ: ನಿಮ್ಮ ಬಳಿ ಇನ್ನೂ ಈ 100 ರೂಪಾಯಿ ನೋಟು ಇದೆಯೇ..? ಹಾಗಿದ್ದರೆ ತಕ್ಷಣ ಹೀಗೆ ಮಾಡಿ


ವಿಧಾನಸೌಧದ ನಿರ್ಮಾತೃ ಕೆಂಗಲ್‌ ಹನುಮಂತಯ್ಯನವರ 4 ಅಡಿ ಎತ್ತರದ ಪೀಠದ ಮೇಲೆ 14 ಅಡಿ ಎತ್ತರದ ಬೃಹತ್ ಹೂವಿನ ಪ್ರತಿಮೆ ವಿಶೇಷ ಆಕರ್ಷಣೆಯಾಗಿರಲಿದೆ. ಉಳಿದಂತೆ ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಅವರು ನಿರ್ಮಿಸಿದ ವಿಧಾನಸೌಧದ ಮತ್ತು ಶಿವಪುರ ಸತ್ಯಾಗ್ರಹಸೌಧದ ಪುಷ್ಪ ಮಾದರಿ ಜನರನ್ನು ಆಕರ್ಷಿಸಲಿವೆ. ರೈಲ್ವೇ ಸಚಿವರಾಗಿ ಕೆಂಗಲ್ ಹನುಮಂತಯ್ಯನವರ ಕೊಡುಗೆಗಳನ್ನು ನೆನಪಿಸುವ ಸಲುವಾಗಿ ವರ್ಟಿಕಲ್ ಗಾರ್ಡನ್ ಪರಿಕಲ್ಪನೆಯಲ್ಲಿ ಪುಷ್ಪಗಳಿಂದ ಸಜ್ಜಾದ ರೈಲು ಕೂಡ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ ಎಂದು ಮಾಹಿತಿ ನೀಡಿದರು.


ಲಕ್ಷಾಂತರ ಎಕ್ಸೋಟಿಕ್ ಆರ್ಕಿಡ್ಸ್, ಬರ್ಡ್ ಆಫ್ ಪ್ಯಾರಡೈಸ್ , ಬ್ರೋಮಿಲಿಯಾಡ್ಸ್, ಆಂಥೂರಿಯಂ, ಹತ್ತಾರು ಬಗೆಯ ವಾರ್ಷಿಕ ಹೂಗಳು ವಿವಿಧ ಪೊಲೀಸ್ ಜಾತಿಯ ಗಿಡಗಳನ್ನು ಬಳಸಿ ಇಂದು ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿ ಕೆಂಗಲ್ ಹನುಮಂತಯ್ಯ ನವರ ಪುತ್ತಳಿಯನ್ನು ವಿನ್ಯಾಸ ಮಾಡಿದೆ. 18 ಅಡಿ ಎತ್ತರದ ವಿಧಾನಸೌಧದ ಪುಷ್ಪ ಮಾದರಿಯನ್ನು  ಕಬ್ಬಿಣ ಮೆಷ್ ಮೊದಲಾದ ವಸ್ತುಗಳನ್ನು ಬಳಸಿ ಕೆಂಪು, ಪೀಚ್, ಹಳದಿ, ರಸ್ಟ್, ಆರೆಂಜ್ ಮತ್ತು ಶ್ವೇತ ವರ್ಣದ ಡಚ್ ಗುಲಾಬಿ ಹೂಗಳು ಪಿಂಚ್ದ ಕೆಂಪು ಗುಲಾಬಿ ಶ್ವೇತ ವರ್ಣದ ಸೇವಂತಿಗೆ ಹೂಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ. ಇನ್ನು  ಗಾಜಿನ ಮನೆಯ ಕೇಂದ್ರ ಭಾಗದ ಬಲಬದಿಯಲ್ಲಿ 17 ಅಡಿ ಸುತ್ತಳತೆ ಮತ್ತು 24 ಅಡಿ ಎತ್ತರದ ಧ್ವಜ ಸತ್ಯಾಗ್ರಹದ ಪುಷ್ಪ ಮಾದರಿಗೆ ಬಗೆ ಬಗೆಯ ಸೇವಂತಿಗೆ ಹೂಗಳನ್ನು ಬಳಸಲಾಗುತ್ತಿದೆ. 2200 ಚದುರ ಅಡಿಯ ಕಣ್ಮನ ಸೆರೆಯುವ ಮೆಗಾ ಯುರೋಪಿಯನ್ ಫ್ಲೋರಲ್ ಕಾರ್ಪೆಟ್ ಪ್ರದರ್ಶನದ ಕೇಂದ್ರಬಿಂದು ಆಗಲಿದೆ ಎಂದು ತಿಳಿಸಿದರು. 


ಇದನ್ನೂ ಓದಿ: Crime: ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್‌ ಎಮೋಜಿ ಕಳಿಸಿದ್ರೆ ಜೈಲ್‌ ಗ್ಯಾರಂಟಿ..!


ಕೋಲಾರ ಚಿನ್ನದ ಗಣಿಯ ರಾಷ್ಟ್ರೀಕರಣವನ್ನು ನೆನೆಯುವ ಕಲಾಕೃತಿ, ಹತ್ತು ಆಕರ್ಷಕ ಹೂವಿನ ಪಿರಮಿಡ್ ಗಳ ತುದಿಯಲ್ಲಿ ಕೆಂಗಲ್ ಹನುಮಂತಯ್ಯ ನವರ ಚಿತ್ರ ಸಂಯೋಜನೆ, ಗಾಜಿನ ಮನೆಯ ಒಳಾವರಣದಲ್ಲಿ ಹನುಮಂತಯ್ಯನವರ ವಿಶೇಷ ಛಾಯಾಚಿತ್ರ ಮಾಹಿತಿ- ಪ್ರದರ್ಶನ, ಕಂಬಗಳಲ್ಲಿ ಅರಳುವ ಪುಷ್ಪ ಧೂಮಗಳು ಶೀತ ವಲಯದ ಹೂಗಳ ಪ್ರದರ್ಶನ ದಾರದಲ್ಲಿ ಅರಳುವ ಕೆಂಗಲ್ ಹನುಮಂತನ ಅವರ ಮುಖಭಾವ ಮತ್ತು ವಿಧಾನಸೌಧದ ಕಲಾಕೃತಿ, ಫರ್ನರಿಯ ಪ್ರದರ್ಶನ ಜನ ಮೆಚ್ಚುಗೆಗೆ ಪಾತ್ರವಾಗಲಿವೆ.  ಎಂದು ವಿಶ್ವಾಸ ವ್ಯಕ್ತಪಡಿಸಿದರು. 


ಎಲ್ಲಾ ನಾಲ್ಕು ದ್ವಾರಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ವಿರಲಿದ್ದು, ವಾರದ ದಿನಗಳಲ್ಲಿ 70 ರೂಪಾಯಿ ಮತ್ತು ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ರಜಾ ದಿನಗಳಲ್ಲಿ 80 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. 12 ವರ್ಷದ ಕೆಳಗಿನ ಮಕ್ಕಳಿಗೆ 30 ರೂಪಾಯಿ ಪ್ರವೇಶ ಶುಲ್ಕವಿರಲಿದೆ. ಶಾಲಾ ಉಡುಗೆಯಲ್ಲಿ ಭೇಟಿ ನೀಡುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.


ಇದನ್ನೂ ಓದಿ: 'ಗೋ ಬ್ಯಾಕ್ ಮಿಸ್ಟರ್ ಕ್ರೈಮ್ ಮಿನಿಸ್ಟರ್’: ಪ್ರಧಾನಿ ಮೋದಿ ಟೀಕಿಸಿದ ಕಾಂಗ್ರೆಸ್


ತೋಟಗಾರಿಕೆ ಇಲಾಖೆಯು ಸಾರ್ವಜನಿಕರಲ್ಲಿ ಪರಿಸರ, ಗಿಡ-ಮರಗಳ ಬಗ್ಗೆ ಜಾಗೃತಿ ಮೂಡಿಸಲು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ. ಮಕ್ಕಳಿಗೆ ಪ್ರಬಂಧ ಹಾಗೂ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ವಿವಿಧ ಸಂಘ-ಸಂಸ್ಥೆ ಮತ್ತು ತರಬೇತಿ ಕೇಂದ್ರದ ಅಭ್ಯರ್ಥಿಗಳಿಗೆ  ಹಣ್ಣು- ತರಕಾರಿ ಕೆತ್ತನೆ, ಹೂವಿನ ಜೋಡಣೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್ ಎಸ್ ಮಲ್ಲಿಕಾರ್ಜುನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖೆಯ ನಿರ್ದೇಶಕರಾದ ಡಿ. ಎಸ್ ರಮೇಶ್, ಜಂಟಿ ನಿರ್ದೇಶಕರಾದ ಎಂ. ಜಗದೀಶ್ ಲಾಲ್‌ಬಾಗ್‌ನ  ಉಪನಿರ್ದೇಶಕಿ ಜಿ ಕುಸುಮ ಉಪಸ್ಥಿತರಿದ್ದರು. 


ಲಾಲ್ ಬಾಗ್ ನಲ್ಲಿ ಪಶ್ಚಿಮ ಘಟ್ಟಗಳ ಘಟ್ಟಗಳ ವಿಶೇಷ ಸಸ್ಯ ಪ್ರಭೇದ : ಬ್ರಿಟೀಷ್ ಆಳ್ವಿಕೆಯಲ್ಲಿ ಪ್ರಾರಂಭಗೊಂಡ ದಿನದಿಂದಲೂ ಲಾಲ್‌ಬಾಗ್‌ಗೆ ಕಾಲಕಾಲಕ್ಕೆ ದೇಶ–ವಿದೇಶಗಳ ಸಸ್ಯಪ್ರಬೇಧಗಳನ್ನು ಪರಿಚಯಿಸುವ ಕಾರ್ಯ ನಡೆಯುತ್ತಿದೆ. ಲಾಲ್‌ಬಾಗ್‌ನಲ್ಲ ಪ್ರಸ್ತುತ ಒಟ್ಟಾರೆ 2,350 ಕ್ಕೂ ಹೆಚ್ಚು ಸಸ್ಯ ಪ್ರಬೇಧಗಳ ಗಿಡಗಳನ್ನು ಕಾಣಬಹುದಾಗಿದೆ. ಇದರ ಭಾಗವಾಗಿ ಲಾಲ್‌ಬಾಗ್‌ನ ಐತಿಹಾಸಿಕ ಬಂದ ಹಿಂಭಾಗದ ಪ್ರದೇಶದಲ್ಲ ಕಳೆದ 70 ವರ್ಷಗಳಿಂದ ಖಾಲಿ ಇದ್ದ 6 ಎಕರೆ ಆಯ್ದ ಪ್ರದೇಶದಲ್ಲ ನಮ್ಮ ರಾಜ್ಯದ ಅಮೂಲ್ಯ ಸಂಪತ್ತಾದ ಸಹ್ಯಾದ್ರಿಯ 132 ಸಸ್ಯ ಪ್ರಭೇದಕ್ಕೆ ಸೇರುವ 450 ಸಸಿಗಳನ್ನು ಪ್ರಪ್ರಥಮ ಬಾರಿಗೆ ನೆಡಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.