ದಿನದ 24 ಗಂಟೆಯೂ ಸೇವೆ ಸಲ್ಲಿಸುವವರ ಸಾಲಿಗೆ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರೂ ಸೇರ್ತಾರೆ. ಇದೀಗ ಇಂತಹ ಸೇವೆ ಸಲ್ಲಿಸಿದ ಬಿಎಂಟಿಸಿ ಚಾಲಕರಿಗೆ ನಿಗಮ‌ ಬಿಗ್ ಗಿಫ್ಟ್ ನೀಡಿದೆ. ಏನದು ಗಿಫ್ಟ್ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್


COMMERCIAL BREAK
SCROLL TO CONTINUE READING

ಹೌದು... ರಾಜಧಾನಿ ಬೆಂಗಳೂರಿನ ಮೂಲೆ ಮೂಲೆಗೂ ಸಂಚಾರ ಮಾಡ್ತಿರೋ ಬಿಎಂಟಿಸಿ ನಿಗಮ ಇಡೀ ದೇಶದಲ್ಲೇ ಒಂದೊಳ್ಳೆ ಸಾರಿಗೆ ಸೇವೆ ಎಂದು ಹೆಸರು ಪಡೆದುಕೊಂಡಿದೆ.‌ ಈ ಹೆಸರು ಗಳಿಸೋದಕ್ಕೂ ಪ್ರಮುಖ ಕಾರಣ ಬಸ್ ನಲ್ಲಿ ಕಾರ್ಯ ನಿರ್ವಹಿಸುವ ಚಾಲಕರು. ಯಾಕಂತ ಹೇಳಿದ್ರೆ.. ನಿತ್ಯವೂ ಟ್ರಾಫಿಕ್ ಜಂಜಾಟದಲ್ಲಿ ಬಸ್ ಓಡಿಸೋದು ಅಂದ್ರೆ ಅಷ್ಟು ಸುಲಭದ ಮಾತಲ್ಲ.. ಇಷ್ಟು ತೀವ್ರ ಗತಿಯ ಟ್ರಾಫಿಕ್ ಮಧ್ಯೆಯೂ ಪ್ರಯಾಣಿಕರನ್ನ ಸೇಫಾಗಿ ತಮ್ಮ ಸ್ಥಳಗಳಿಗೆ ತಲುಪಿಸುವ ಕೆಲಸ ಮಾಡ್ತಾರೆ. ಹೀಗಾಗಿ..‌ಇಂತಹ ಚಾಲಕರನ್ನ ಗುರುತಿಸಿರುವ  ಬಿಎಂಟಿಸಿ ಪ್ರಮೋಷನ್ ಭಾಗ್ಯ ಕಲ್ಪಿಸಿದೆ. 


ಬರೊಬ್ಬರಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಂದುವರೆದಿರುವ ಒಂದು ಸಾವಿರಕ್ಕೂ ಹೆಚ್ಚು ಚಾಲಕರಿಗೆ ಕೂಡಲೇ ಜಾರಿಯಾಗುವಂತೆ ಪ್ರಮೋಷನ್ ಕಲ್ಪಿಸಲಾಗಿದೆ. ಕೂಡಲೇ ಮುಂಬಡ್ತಿ ಅರ್ಜಿ ಸಲ್ಲಿಸುವಂತೆ ಬಿಎಂಟಿಸಿ ನಿಗಮ ಸುತ್ತೋಲೆ ಪತ್ರ ಹೊರಡಿಸಿದೆ.


ಇದನ್ನೂ ಓದಿ- ನಾವು ದ್ವೇಷ ರಾಜಕಾರಣ ಮಾಡುತ್ತಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದೇವೆ: ಡಿಸಿಎಂ


ಬಿಎಂಟಿಸಿ ಹಿರಿಯ ಚಾಲಕರಿಗೆ ಮುಂಬಡ್ತಿ ಸಂಬಂಧ ಈಗಾಗಲೇ ಬಿಎಂಟಿಸಿ ಅಧಿಕಾರಿಗಳು ಒಂದು ಸುತ್ತಿನ ಸಭೆ ನಡೆಸಿದ್ದು, ಸಭೆಯಲ್ಲಿ ಎಷ್ಟು ಚಾಲಕರಿದ್ದಾರೆ. ಅವರ ವೇತನ ಮತ್ತು ಕರ್ತವ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಮುಂಬಡ್ತಿದೆ ಪಡೆಯುವ ಚಾಲಕರಿಗೆ ಯಾವ ಯಾವ ಹುದ್ದೆ ನೀಡಬೇಕಾಬಹುದು, ಅವರಿಗೆ ಹೆಚ್ಚುವರಿ ವೇತನ ನೀಡುವ ಬಗ್ಗೆಯೂ ಚರ್ಚೆ ಆಗಿದೆ.


ಬಿಎಂಟಿಸಿ ಜನರಲ್ ಮ್ಯಾನೇಜರ್ ಸೇರಿ ಇನ್ನಿತರ ಹಿರಿಯ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಅಂತಿಮ ಆದೇಶ ಜಾರಿ ಮಾಡಿ ಸುತ್ತೋಲೆ ಹೊರಡಿಸಲಾಗಿದೆ. ಕೂಡಲೇ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಚಾಲಕರು ಕೂಡಲೇ ತಮ್ಮ ಹಾಜರಾತಿ ಮತ್ತು ಇತರೆ ಮಾಹಿತಿ ಜರೂರಾಗಿ ಸಲ್ಲಿಸುವಂತೆ ಕೋರಲಾಗಿದೆ. ಇದಕ್ಕೆ ಡಿಸೆಂಬರದ  15ರವರೆಗೆ ಮಾತ್ರ ಗಡುವು ನೀಡಿದ್ದು, ಅಷ್ಟರೊಳಗೆ ಬಿಎಂಟಿಸಿ ಕೇಳಿರುವ ಮಾಹಿತಿ ಸಲ್ಲಿಸಬೇಕಿದೆ.


ಇದನ್ನೂ ಓದಿ- ಬಾಲ್ಯವಿವಾಹ: ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲು


ಒಟ್ನಲ್ಲಿ... ಹೊಸ ವರ್ಷದ ಸಂಭ್ರಮದ ದಿನದಂದು ಬಿಎಂಟಿಸಿ ಭರ್ಜರಿ ಲಾಭಗಳಿಸಿದ ಖುಷಿಯೊಂದಿಗೆ ಇತರರಿಗೂ ಇದು ಸಲ್ಲಿಕೆಯಾಗಲಿ ಎಂಬ ಉದ್ದೇಶದಿಂದ ತನ್ನೊಡಲಲ್ಲಿ ಸೇವೆ ಸಲ್ಲಿಸುವ ಚಾಲಕರಿಗೆ ಹೊಸ ವರ್ಷದ ಬಿಗ್ ಗಿಫ್ಟ್ ನೀಡುವ ಮೂಲಕ ಸಂತಸಕ್ಕೆ ಕಾರಣವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.