ಬಟ್ಟೆ ತೊಳೆಯುತ್ತಿದ್ದಾಗ ಕಳ್ಳತನ..! ವರಮಹಾಲಕ್ಷ್ಮಿ ಹಬ್ಬಕ್ಕೆ ತಂದಿದ್ದ ಆಭರಣ ನಾಪತ್ತೆ
ವರಮಹಾಲಕ್ಷ್ಮಿ ಹಬ್ಬಕ್ಕೆ ಅಂತ ತಂದಿದ್ದ ಒಡವೆಗಳ ಕಳ್ಳತನವಾಗಿದೆ. ಈ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಚಿಕ್ಕಬಾಣವರದಲ್ಲಿ ನಡೆದಿದೆ. ಮನೆಯ ಕಿಟಕಿ ಹೊಡೆದು ಬಾಗಿಲು ತೆಗೆದು ಕಳ್ಳತನ ಮಾಡಲಾಗಿದೆ.
ಬೆಂಗಳೂರು : ಮನೆ ಮಹಡಿ ಮೇಲೆ ಬಟ್ಟೆ ತೊರೆಯುತ್ತಿದ್ದಾಗ ಮನೆಗಳ್ಳತನ ನಡೆದಿರುವ ಘಟನೆ ರಾಜಧಾನಿಯ ಉತ್ತರ ತಾಲ್ಲೂಕಿನ ಚಿಕ್ಕಬಾಣಾವರದಲ್ಲಿ ನಡೆದಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆಂದು ತಂದಿದ್ದ ಆಭರಣಗಳು ನಾಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಹೌದು.. ಹಾಡುಹಗಲೆ ಮನೆಯವರು ಮನೆಯಲ್ಲಿದ್ದಾಗ ಕಳ್ಳತನವಾಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಅಂತ ತಂದಿದ್ದ ಒಡವೆಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಚಿಕ್ಕಬಾಣವರದಲ್ಲಿ ನಡೆದಿದೆ. ಶ್ರೀನಿವಾಸ್ ರೆಡ್ಡಿ ಎಂಬುವವರಿಗೆ ಸೇರಿದ್ದ ಮನೆ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಪರಿಷ್ಕರಣೆಗೆ ಒತ್ತಾಯ : ಗಡ್ಕರಿಗೆ ಎಎಪಿ ಪತ್ರ
ಮನೆಯ ಮಡದಿ ಮಹಡಿಯ ಮೇಲೆ ಬಟ್ಟೆ ಹೊಗೆಯುತ್ತಿದ್ದಾಗ, ಮನೆಯ ಕಿಟಕಿ ಹೊಡೆದು ಬಾಗಿಲು ತೆಗೆದು ಕಳ್ಳತನ ಮಾಡಲಾಗಿದೆ. ಮನೆಯಲ್ಲಿದ್ದ 2.5 ಕೆ.ಜಿ ಬೆಳ್ಳಿ ಸೇರಿದಂತೆ 50ಗ್ರಾಂ ಚಿನ್ನ 50ಸಾವಿರ ನಗದು ಒಂದು ಲ್ಯಾಟಾಪ್ ಕಳ್ಳತನವಾಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆಂದು ಬೆಳ್ಳಿಯ ಒಡವೆಗಳನ್ನು ತಂದಿದ್ದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ಸೋಲದೇವಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.