Traffic police alert for young drivers: ಸಂಚಾರ ನಿಯಮದಂತೆ 18 ವರ್ಷ ಪೂರ್ಣಗೊಳ್ಳದಿರುವ ಯಾವುದೇ ಯುವಕ-ಯುವತಿಯರು ವಾಹನಗಳನ್ನು ಚಲಾಯಿಸುವಂತಿಲ್ಲ. ಈ ನಿಯಮದ ಬಗ್ಗೆ ಅರಿವಿದ್ದರೂ ಸಹ  ಸಂಚಾರ ನಿಯಮವನ್ನು ಉಲ್ಲಂಘಿಸಿ ಪೋಷಕರು ತಮ್ಮ ಮಕ್ಕಳಿಗೆ ವಾಹನವನ್ನು ಚಲಾಯಿಸಲು ಬಿಟ್ಟಿದ್ದಾರೆ. ಅದರಲ್ಲೂ ಇಂತಹ ಬೇಜಾವಾಬ್ದಾರಿ ಪೋಷಕರ ಸಂಖ್ಯೆ ಸಿಲಿಕಾನ್ ಸಿಟಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಹೆಚ್ಚಾಗಿರುವುದು ಆತಂಕಕಾರಿ ವಿಷಯ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರಿ ನಿಯಮಕ್ಕೆ ಕ್ಯಾರೆ ಎನ್ನದ ಪೋಷಕರು ತಮ್ಮ ಮಕ್ಕಳಿಗೆ ವಾಹನ ನೀಡುತ್ತಿರುವುದು ಪೋಷಕರ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಂತಿದೆ. 18 ವರ್ಷ ತುಂಬದ ವಿದ್ಯಾರ್ಥಿಗಳಿಂದ ವಾಹನ ಬಳಕೆ ಹೆಚ್ಚಳವನ್ನು ಸೂಕ್ಷ್ಮವಾಗಿ ಗಮನಿಸಿರುವ ಟ್ರಾಫಿಕ್‌ ಬೆಂಗಳೂರು ಪೊಲೀಸರು  ಶಾಲಾ-ಕಾಲೇಜು ಬಳಿಯೇ ವಿದ್ಯಾರ್ಥಿಗಳು ತಂದ ವಾಹನ ತಡೆದು DL, ವಯಸ್ಸು ತಪಾಸಣೆ ನಡೆಸಿತ್ತಿದ್ದಾರೆ. 


ಇದುವರೆಗೂ ಬೆಂಗಳೂರಿನಲ್ಲಿ ಒಟ್ಟು 150ಕ್ಕೂ ಹೆಚ್ಚು ಶಾಲಾ-ಕಾಲೇಜುಗಳ ಬಳಿ  ಸಂಚಾರಿ ಪೊಲೀಸರು ಈ ರೀತಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸುಮಾರು 1500ಕ್ಕೂ ಹಚ್ಚು ವಿದ್ಯಾರ್ಥಿಗಳು ನಿಯಮ ಉಲ್ಲಂಘನೆ ಮಾಡಿರೋದು ಬಯಲಿಗೆ ಬಂದಿದೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. 


ಇದನ್ನೂ ಓದಿ-ದಕ್ಷಿಣ ಭಾರತದ ತೆರಿಗೆ ಹಣದಿಂದ ಉತ್ತರ ಭಾರತದ ಅಭಿವೃದ್ಧಿಗೆ ನನ್ನದೂ ವಿರೋಧವಿದೆ- ಸಚಿವ ಸಂತೋಷ್ ಲಾಡ್ 


ಇನ್ನೂ ಒಂದೇ ದಿನದಲ್ಲಿ ಸುಮಾರು 1800 ವಾಹನಗಳನ್ನು ತಡೆದು ದಂಡ ವಿಧಿಸಿರುವ ಸಂಚಾರಿ ಪೊಲೀಸರು, ಆ ಮಕ್ಕಳ ಪೋಷಕರನ್ನೆ ಕರೆಸಿ ದಂಡ ಹಾಕಿ ವಾಹನಗಳನ್ನು ಮಕ್ಕಳ ಕೈಗೆ ಕೊಡದಂತೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಮಕ್ಕಳಿಗೆ 18 ವರ್ಷ ತುಂಬುವ ಮೊದಲು ಪುನಃ ಅವರಿಗೆ ವಾಹನವನ್ನು ನೀಡಿದ್ದೆ ಆದರೆ, ಅಂತಹವರ ವಿರುದ್ಧ ಕೇಸ್ ದಾಖಲಿಸುವುದಾಗಿಯೂ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. 


ಈ ಕುರಿತಂತೆ ಶಾಲಾ-ಕಾಲೇಜುಗಳಲ್ಲಿಯೂ ಸರ್ಕ್ಯೂಲರ್ ಹೊರಡಿಸುವಂತೆ ಮನವಿ ಮಾಡಿರುವ ಟ್ರಾಫಿಕ್ ಪೊಲೀಸರು, 18 ವರ್ಷ ತುಂಬಿರದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಡಿಎಲ್ ಇಲ್ಲದೇ ವಾಹನವನ್ನು ತರುವಂತಿಲ್ಲ ಎಂದು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸರ್ಕ್ಯೂಲೇಷನ್ ಹೊರಡಿಸಬೇಕೆಂದು ಸೂಚನೆಯನ್ನು ನೀಡಿದ್ದಾರೆ. 


ಇದನ್ನೂ ಓದಿ- Political updates in Karnataka: ನಾನು ಪುಟ್ಬಾಲ್ ಅಲ್ಲ, ಯಾವುದೇ ಕಾರಣಕ್ಕೂ ಎಂಪಿ ಸ್ಥಾನಕ್ಕೆ ಸ್ಪರ್ಧೆ ಇಲ್ಲ: ಪ್ರಕಾಶ್ ಹುಕ್ಕೇರಿ


ಈ ಸಂಬಂಧ ಟ್ರಾಫಿಕ್ ಪೊಲೀಸರ ಕಾಳಜಿಗೆ ಸಹಮತ ವ್ಯಕ್ತಪಡಿಸಿರುವ ಶಾಲಾ-ಕಾಲೇಜು ಆಡಳಿತ ಮಂಡಳಿಗಳು ಸಂಚಾರಿ ಪೊಲೀಸರ ನಿರ್ಧಾರದಂತೆ ಕೆಲವೇ ದಿನಗಳಲ್ಲಿ ಸರ್ಕ್ಯೂಲರ್ ಹೊರಡಿಸುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.