ಸಿಲಿಕಾನ್ ಸಿಟಿಯಲ್ಲಿ ತಾಯಿಯಿಂದಲೇ ಮಗನ ಅಪಹರಣ: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..!?
ಅನುಪಮಗೆ 2014 ರಲ್ಲಿ ಸಿದ್ಧಾರ್ಥ್ ಎಂಬುವವರ ಜೊತೆ ವಿವಾಹವಾಗಿತ್ತು. ಆದರೆ ಕೌಟುಂಬಿಕ ಕಲಹದಿಂದ ಸಿದ್ದಾರ್ಥ್ ಹಾಗೂ ಅನುಪಮ ವಿಚ್ಚೇದನ ಪಡೆದಿದ್ದರು. ವಿಚ್ಛೇದನ ಬಳಿಕ ನ್ಯಾಯಲಯವು ಆರು ವರ್ಷದ ಮಗನನ್ನು ತಂದೆಯ ಸುಪರ್ದಿಗೆ ವಹಿಸಿತ್ತು... ಆದರೆ.. ನಂತರ ಆಗಿದ್ದೇನು..?..
ಬೆಂಗಳೂರು : ಹೆತ್ತ ತಾಯಿಯೊಬ್ಬಳು ತನ್ನ ಆರು ವರ್ಷದ ಮಗನನ್ನು ಹಾಡುಹಗಲೇ ಅಪಹರಿಸಿರುವ ಆರೋಪ ಕೇಳಿ ಬಂದಿದೆ. ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅನುಪಮ ಎಂಬಾಕೆಯೇ ಮಗನನ್ನು ಕಿಡ್ನಾಪ್ ಮಾಡಿದ ತಾಯಿಯಾಗಿದ್ದಾಳೆ.
ಮಗುವನ್ನು ಅಪಹರಿಸಲು ಅನುಪಮಗೆ ಆಕೆಯ ಸ್ನೇಹಿತನೊಬ್ಬ ಸಾಥ್ ಕೊಟ್ಟಿದ್ದಾನೆ. ಅನುಪಮಗೆ 2014 ರಲ್ಲಿ ಸಿದ್ಧಾರ್ಥ್ ಎಂಬುವವರ ಜೊತೆ ವಿವಾಹವಾಗಿತ್ತು. ಆದರೆ ಕೌಟುಂಬಿಕ ಕಲಹದಿಂದ ಸಿದ್ದಾರ್ಥ್ ಹಾಗೂ ಅನುಪಮ ವಿಚ್ಚೇದನ ಪಡೆದಿದ್ದರು. ವಿಚ್ಛೇದನ ಬಳಿಕ ನ್ಯಾಯಲಯವು ಆರು ವರ್ಷದ ಮಗನನ್ನು ತಂದೆಯ ಸುಪರ್ದಿಗೆ ವಹಿಸಿತ್ತು.
ಇದನ್ನೂ ಓದಿ:ನೈಟ್ ಔಟ್ ಹೋಗೋಣ ಬಾ.. ಬಾ..!! ಅಶೋಕ್ ಹಾಗೂ ಗಣೇಶನ ಕಾಟಕ್ಕೆ ಗೃಹಿಣಿ ಆತ್ಮಹತ್ಯೆ
ಹೀಗಾಗಿ ಬಾಲಕ ಸಹ ತಂದೆ ಹಾಗೂ ತಾತನ ಪಾಲನೆಯಲ್ಲಿ ಬೆಳೆಯುತ್ತಿದ್ದ. ಆದರೆ ಇಂದು ಬೆಳಗ್ಗೆ ಅಪಾರ್ಟ್ಮೆಂಟ್ ಬಳಿ ಸಿದ್ದಾರ್ಥ್ ತಂದೆ ಮೊಮ್ಮಗನ್ನು ಶಾಲಾ ಬಸ್ ಹತ್ತಿಸಲು ರಸ್ತೆ ಬಳಿ ನಿಂತಿದ್ದರು. ಇದೇ ಸಮಯಕ್ಕೆ ಕಾದು ಕೂತಿದ್ದ ಅನುಪಮ ಮತ್ತಾಕೆಯ ಸ್ನೇಹಿತ ಸ್ಥಳಕ್ಕೆ ಬಂದಿದ್ದಾರೆ. ನೋಡನೋಡುತ್ತಲೇ ಬಾಲಕನ ತಾತನನ್ನು ತಳ್ಳಿ ಬಾಲಕನನ್ನು ಅಪಹರಿಸಿ ಎಸ್ಕೇಪ್ ಆಗಿದ್ದಾರೆ.
ಇನ್ನೂ ಬಾಲಕನನ್ನು ಕಿಡ್ನ್ಯಾಪ್ ಮಾಡೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಬಾಲಕನ ತಾತ ವಿಡಿಯೋ ಮೂಲಕ ಪೊಲೀಸರಿಗೆ ಮನವಿ ಮಾಡಿದ್ದಾರೆ. ಘಟನೆ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.