ಸಹೋದರರ ಗಲಾಟೆಯಲ್ಲಿ ಮೂರನೇ ವ್ಯಕ್ತಿಯ ಹತ್ಯೆ..!
ನಾರಾಯಣ ಎಂಬಾತ ತನ್ನ ಸಹೋದರನ ಜೊತೆ ಜಗಳವಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ್ದ ಗಣೇಶ್ ನಾಯ್ಕ್ ತಲೆಗೆ ದೊಣ್ಣೆಯಿಂದ ಹೊಡೆದಿದ್ದ. ಪರಿಣಾಮ ತೀವ್ರ ರಕ್ತಸ್ರಾವದಿಂದ ಗಣೇಶ್ ನಾಯ್ಕ್ ಸಾವನ್ನಪ್ಪಿದ್ದಾನೆ. ಆರೋಪಿ ನಾರಾಯಣ ಪರಾರಿಯಾಗಿದ್ದಾನೆ.
ಬೆಂಗಳೂರು : ಮದ್ಯದ ಅಮಲಿನಲ್ಲಿ ದೊಣ್ಣೆಯಿಂದ ಹೊಡೆದು ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಸಾರ್ವಭೌಮ ನಗರದಲ್ಲಿ ತಡರಾತ್ರಿ ನಡೆದಿದೆ. ಗಣೇಶ್ ನಾಯ್ಕ್ (45) ಮೃತ ದುರ್ವೈವಿ, ನಾರಾಯಣ ಎಂಬ ಆರೋಪಿ ಪರಾರಿಯಾಗಿದ್ದಾನೆ.
ಆರೋಪಿ ನಾರಾಯಣನ ತಮ್ಮ ಮಲ್ಲೇಶ್ ಒಡೆತನದ ಮನೆಯಲ್ಲಿ ಗಣೇಶ್ ನಾಯ್ಕ್ ವಾಸವಿದ್ದ. ತಡರಾತ್ರಿ ಮದ್ಯಪಾನ ಮಾಡಿಕೊಂಡು ಮಲ್ಲೇಶನ ಮನೆಯ ಬಳಿ ಬಂದಿದ್ದ ನಾರಾಯಣ, 'ನಾನೂ ಈ ಮನೆಯ ಜಂಟಿ ಮಾಲೀಕ, ನನಗೆ ಬಾಡಿಗೆ ಕೊಡದೇ ಇವರೆಲ್ಲಾ ಏಕೆ ವಾಸವಿದ್ದಾರೆ ಎಂದು ಗಲಾಟೆ ಆರಂಭಿಸಿದ್ದ.
ಇದನ್ನೂ ಓದಿ: ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ : ʼಕಾವೇರಿʼ ಬಂದ್ ಹಿನ್ನೆಲೆ ಹೈಅಲರ್ಟ್ ಘೋಷಣೆ
ಈ ಸಂದರ್ಭದಲ್ಲಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದಾಗ ಮಧ್ಯ ಪ್ರವೇಶಿಸಿದ್ದ ಗಣೇಶ್ ನಾಯ್ಕ್ ತಲೆಗೆ ನಾರಾಯಣ ದೊಣ್ಣೆಯಿಂದ ಹೊಡೆದಿದ್ದ. ಪರಿಣಾಮ ತೀವ್ರ ರಕ್ತಸ್ರಾವದಿಂದ ಗಣೇಶ್ ನಾಯ್ಕ್ ಸಾವನ್ನಪ್ಪಿದ್ದು, ಆರೋಪಿ ನಾರಾಯಣ ಪರಾರಿಯಾಗಿದ್ದಾನೆ. ಸದ್ಯ ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪೂರ್ವಾಡ್ ಮಾಹಿತಿ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.