ಮೆಟ್ರೋ ಟ್ರ್ಯಾಕಿಗೆ ಹಾರಿ ಆತ್ಮಹತ್ಯೆಗೆ ಯತ್ನ, ಸೂಸೈಡ್ ಹಾಟ್ ಸ್ಪಾಟ್ ಆಗ್ತಿದ್ಯಾ ನಮ್ಮ ಮೆಟ್ರೋ!
Namma Metro: ವ್ಯಕ್ತಿಯೋರ್ವ ಮೆಟ್ರೊ ಟ್ರ್ಯಾಕಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ರಾತ್ರಿ 8.56 ಕ್ಕೆ ಚಲ್ಲಘಟ್ಟ ಕಡೆಗೆ ತೆರಳುತ್ತಿದ್ದ ರೈಲು ಹೊಸಹಳ್ಳಿ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪ್ಲಾಟ್‌ಫಾರ್ಮ್ 2 ರಲ್ಲಿ ನಿಂತಿದ್ದ ಒಬ್ಬ ಯುವಕ ಇದ್ದಕ್ಕಿದ್ದಂತೆ ಹಳಿ ಮೇಲೆ ಹಾರಿ ರೈಲಿನ ಕಡೆಗೆ ಧಾವಿಸಿದ್ದಾರೆ. ಇದು ರೈಲು ಹತ್ತಲು ಕಾಯುತ್ತಿದ್ದ ಇತರ ಪ್ರಯಾಣಿಕರನ್ನು ಬೆಚ್ಚಿಬೀಳಿಸಿತು.
Namma Metro: ಖಿನ್ನತೆಯಿಂದ ಬಳಲುತ್ತಿದ್ದ 34 ವರ್ಷದ ಯುವಕನೊಬ್ಬ ಹೊಸಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುತ್ತಿದ್ದ ವೇಳೆ ಟ್ರ್ಯಾಕ್ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ (ಜೂನ್ 10) ರಾತ್ರಿ ನಡೆದಿದೆ. ಪ್ಲಾಟ್‌ಫಾರ್ಮ್‌ನಲ್ಲಿದ್ದ ತುರ್ತು ಟ್ರಿಪ್ ಸಿಸ್ಟಮ್ ಬಟನ್ ಅನ್ನು ತ್ವರಿತವಾಗಿ ಬಳಸಿದ್ದರಿಂದ ಅದೃಷ್ಟವಶಾತ್ ಯುವಕ ಪ್ರಾಣಾಪಾಯಿಂದ ಪಾರಾಗಿದ್ದಾನೆ. ಈ ಘಟನೆಯಿಂದ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ಮತ್ತು ಮೈಸೂರು ರಸ್ತೆ ನಿಲ್ದಾಣಗಳ ನಡುವೆ 33 ನಿಮಿಷಗಳ ಕಾಲ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿತ್ತು.
ಈ ಘಟನೆ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್‌ಸಿಎಲ್ (BMRCL) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾಣ್, ರಾತ್ರಿ 8.56 ಕ್ಕೆ ಚಲ್ಲಘಟ್ಟ ಕಡೆಗೆ ತೆರಳುತ್ತಿದ್ದ ರೈಲು ಹೊಸಹಳ್ಳಿ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪ್ಲಾಟ್‌ಫಾರ್ಮ್ 2 ರಲ್ಲಿ ನಿಂತಿದ್ದ ಒಬ್ಬ ಯುವಕ ಇದ್ದಕ್ಕಿದ್ದಂತೆ ಹಳಿ ಮೇಲೆ ಹಾರಿ ರೈಲಿನ ಕಡೆಗೆ ಧಾವಿಸಿದ್ದಾರೆ. ಇದು ರೈಲು ಹತ್ತಲು ಕಾಯುತ್ತಿದ್ದ ಇತರ ಪ್ರಯಾಣಿಕರನ್ನು ಬೆಚ್ಚಿಬೀಳಿಸಿತು ಎಂದು ತಿಳಿಸಿದ್ದಾರೆ.
ಇನ್ನೂ ಈ ಕುರಿತಂತೆ ಮಾಹಿತಿ ನೀಡಿರುವ ಪೊಲೀಸರು, ಯುವಕ ಖಿನ್ನತೆಯಿಂದ ಬಳಲುತ್ತಿದ್ದು, ಮೆಟ್ರೋ ಟ್ರ್ಯಾಕ್ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಲೆಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದಾರೆ.
ಇದನ್ನೂ ಓದಿ- ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಖಾತೆ ಬದಲಾವಣೆ: ಜೋಶಿ ಹೆಗಲೇರಿದ 2 ಖಾತೆಗಳು ಯಾವುವು?
ಸುಸೈಡ್ ಹಾಟ್ ಸ್ಪಾಟ್ ಆಗ್ತಿದ್ಯಾ ನಮ್ಮ ಮೆಟ್ರೋ?
ನಮ್ಮ ಮೆಟ್ರೋದಲ್ಲಿ (Namma Metro) 2024ರಲ್ಲಿ ಮೆಟ್ರೋ ಟ್ರ್ಯಾಕ್‌ಗಳಲ್ಲಿ ನಡೆದ ಮೂರನೇ ಆತ್ಮಹತ್ಯೆ ಯತ್ನ ಪ್ರಕರಣ ಇದಾಗಿದೆ. ಗಮನಾರ್ಹವಾಗಿ, ಕಳೆದ ಆರು ತಿಂಗಳಲ್ಲಿ ನಡೆದ ಆರನೇ ಆತ್ಮಹತ್ಯೆ ಪ್ರಕರಣ ಇದಾಗಿದ್ದು, ನಮ್ಮ ಮೆಟ್ರೊ ಸೂಸೈಡ್ ಹಾಟ್ ಸ್ಪಾಟ್ (A suicide hot spot) ಆಗ್ತಿದ್ಯಾ, ಇದು ನಮ್ಮ ಮೆಟ್ರೋ ವ್ಯವಸ್ಥೆಯ ಒಳಗಿನ ಅವ್ಯವಸ್ಥೆಯೇ ಇದಕ್ಕೆ ಕಾರಣವೇ, ಸೆಕ್ಯುರಿಟಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆಯೇ? ಎಂಬಿತ್ಯಾದಿ ಅನುಮಾನಗಳು ವ್ಯಕ್ತವಾಗುತ್ತಿವೆ.
ಜನರ ಜೀವಕ್ಕೆ ರಕ್ಷಣೆಯೇ ಇಲ್ಲ ಎಂದು ಜನರ ಆಕ್ರೋಶ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಲವು ಮೆಟ್ರೋ ಪ್ರಯಾಣಿಕರು, ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ (Majestic Metro Station) ನಲ್ಲಿ ಮಾತ್ರ ಬಿಎಂಆರ್‌ಸಿಎಲ್ ಸೆಕ್ಯುರಿಟಿಗಳು ಅಲರ್ಟ್ ಆಗಿರುತ್ತಾರೆ. ಬೇರೆಡೆ ಸೆಕ್ಯುರಿಟಿಗಳ ನಿರ್ಲಕ್ಷ್ಯದಿಂದಾನೇ ಇಂತಹ ಘಟನೆಗಳು ನಡೆಯುತ್ತಿವೆ. ಮೆಟ್ರೋ ಆರಂಭವಾಗಿ ಹದಿಮೂರು ವರ್ಷಗಳು ಕಳೆದಿವೆ. ಆದರೂ, ಟ್ರ್ಯಾಕ್ ಗೆ ಇದುವರೆಗೆ ಯಾವುದೇ ಭದ್ರತೆ ಇಲ್ಲ. 2011 ರಿಂದ ಮೆಟ್ರೋ ಆರಂಭವಾದರೂ ಜನರ ಜೀವಕ್ಕೆ ರಕ್ಷಣೆಯೇ ಇಲ್ಲ. ಈಗಾಗಲೇ ದೆಹಲಿ, ಚೆನ್ನೈ ಮೆಟ್ರೋದಲ್ಲಿ ಪಿಎಸ್‌ಡಿ ಡೋರ್ ಅಳವಡಿಸಲಾಗಿದೆ. ಆದರೆ ನಮ್ಮ ಮೆಟ್ರೋದಲ್ಲಿ ಮಾತ್ರ ಇನ್ನೂ ಪಿಎಸ್‌ಡಿ ಅಳವಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ- ಜನರ ತೀರ್ಪು ಎಚ್ಚರಿಕೆ ಗಂಟೆ, ನಮ್ಮ ತಪ್ಪುಗಳನ್ನು ಪರಾಮರ್ಶಿಸಿ ಸರಿಪಡಿಸಿಕೊಳ್ಳಬೇಕು: ಡಿಸಿಎಂ ಡಿಕೆ ಶಿವಕುಮಾರ್
ನಮ್ಮ ಮೆಟ್ರೋದಲ್ಲಿ ಆರು ತಿಂಗಳಲ್ಲಿ ನಿದ್ದೆಗೆಡಿಸಿದ ಆರು ಆತ್ಮಹತ್ಯೆ ಪ್ರಕರಣ!
ಮೊದಲ ಪ್ರಕರಣ:
ದಿನಾಂಕ: 1 ಜನವರಿ 2024
ಸ್ಥಳ: ಇಂದಿರಾ ನಗರ ಮೆಟ್ರೋ ನಿಲ್ದಾಣ
ಮೊಬೈಲ್ ತೆಗೆಯಲು ಟ್ರ್ಯಾಕ್ ಗೆ ಇಳಿದ ಮಹಿಳೆ.. ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಉಳಿದ ಜೀವ
ಎರಡನೇ ಪ್ರಕರಣ:
ದಿನಾಂಕ: 5 ಜನವರಿ 2024
ಸ್ಥಳ: ಜಾಲಹಳ್ಳಿ ಮೆಟ್ರೋ ನಿಲ್ದಾಣ
ಮೆಟ್ರೋ ಹಳಿಗೆ ಹಾರಿ ಯುವಕನಿಂದ ಆತ್ಮಹತ್ಯೆಗೆ ಯತ್ನ. .ಐಸಿಯುನಲ್ಲಿ ಚಿಕಿತ್ಸೆ
ಮೂರನೇ ಪ್ರಕರಣ:
ದಿನಾಂಕ: 6 ಜನವರಿ 2024
ಸ್ಥಳ: ಜೆ.ಪಿ.ನಗರ ಮೆಟ್ರೋ ನಿಲ್ದಾಣ
ಮೆಟ್ರೋ ಟ್ರ್ಯಾಕ್ ಮೇಲೆ ಬೆಕ್ಕು ಪ್ರತ್ಯಕ್ಷ.. ಆತಂಕಗೊಂಡ ಪ್ರಯಾಣಿಕರು
ನಾಲ್ಕನೇ ಪ್ರಕರಣ:
ದಿನಾಂಕ: 12 ಮಾರ್ಚ್ 2024
ಸ್ಥಳ :- ಜ್ಞಾನ ಭಾರತಿ ಮೆಟ್ರೋ ನಿಲ್ದಾಣ
ಜ್ಞಾನಭಾರತಿ ಮೆಟ್ರೋ ಸ್ಟೇಷನ್ ನಿಂದ ಪಟ್ಟಣಗೆರೆ ಮೆಟ್ರೋ ಸ್ಟೇಷನ್ ನಡುವಿನ ವಯಾಡಕ್ಟ್ ನಲ್ಲಿ ಕಾಣಿಸಿಕೊಂಡಿದ್ದ ಅಪರಿಚಿತ ವ್ಯಕ್ತಿ
ಐದನೇ ಪ್ರಕರಣ:
ದಿನಾಂಕ:- 21 ಮಾರ್ಚ್ 2024
ಸ್ಥಳ :- ಅತ್ತಿಗುಪ್ಪೆ
ಸಮಯ :- 2.10pm
ಮೆಟ್ರೋ ಹಳಿ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಯುವಕ
-ಧ್ರುವ್ ಎನ್ನುವ 19/20 ವರ್ಷದ ಯುವಕ
-ಟ್ರೈನ್ ಬರ್ತಾ ಇದೆ ಅಂತ ಗೊತ್ತಾಗಿ ಟ್ರ್ಯಾಕಿಗೆ ಹಾರಿದ ಯುವಕ
-ನ್ಯಾಷನಲ್ ಲಾ ಕಾಲೇಜಿನಲ್ಲಿ ಮೊದಲನೇ ವರ್ಷ ವ್ಯಾಸಂಗ ಮಾಡ್ತಿದ್ದ ಯುವಕ
ಆರನೇ ಪ್ರಕರಣ:
ದಿನಾಂಕ:- 10/06/2024
ಸ್ಥಳ:- ಹೊಸ್ಕೆರೆಹಳ್ಳಿ
ಸಮಯ :- ರಾತ್ರಿ 08:46
-ಹೊಸ್ಕೆರೆಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಯುವಕನೋರ್ವ ಟ್ರ್ಯಾಕ್ ಗೆ ಹಾರಿ ಆತ್ಮಹತ್ಯೆಗೆ ಯತ್ನ
-ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಯುವಕ ಬಚಾವ್
-ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.