ಸೆ. 11ರಂದು ʼಬೆಂಗಳೂರು ಬಂದ್ʼ : ಖಾಸಗಿ ಸಾರಿಗೆ ಹೋರಾಟಕ್ಕೆ ವಜಾಗೊಂಡ ಬಿಎಂಟಿಸಿ ನೌಕರರು ಸಾತ್
Bangalore bandh: ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಸೇವಾ ಸಂಘಟನೆಗಳು ಇದೇ 11 ರಂದು ಬೆಂಗಳೂರು ಬಂದ್ ಗೆ ಕರೆ ನೀಡಿವೆ. 2021ರ ಅವದಿಯಲ್ಲಿ ಸರ್ಕಾರದ ವಿರುದ್ದ ಹೋರಾಟ ಮಾಡಿ ವಜಾಗೊಂಡಿದ್ದ ಬಿಎಂಟಿಸಿ ಸಾರಿಗೆ ನೌಕರರಿಂದ ಬಂದ್ ಗೆ ಬೆಂಬಲ ಸಿಕ್ಕಿದೆ.
ಬೆಂಗಳೂರು : ಶಕ್ತಿ ಯೋಜನೆ ಸೇರಿ ಸರ್ಕಾರದ ಮೊಂಡುತನದ ವಿರುದ್ಧ ಖಾಸಗಿ ಸಾರಿಗೆ ಸೇವಾ ಸಂಘಟನೆಗಳು ಇದೇ 11 ರಂದು ಬೆಂಗಳೂರು ಬಂದ್ ಗೆ ಕರೆಕೊಡಲಾಗಿದೆ. ಹೀಗಾಗಿ ಖಾಸಗಿ ಸಾರಿಗೆ ಸಂಘಟನೆಗಳಿಗೆ ಬೆಂಬಲವಾಗಿ ಬಿಎಂಟಿಸಿ ವಜಾಗೊಂಡ ನೌಕರರು ನಿಂತಿದ್ದಾರೆ.
2021ರ ಅವದಿಯಲ್ಲಿ ಸರ್ಕಾರದ ವಿರುದ್ದ ಹೋರಾಟ ಮಾಡಿ ವಜಾಗೊಂಡಿದ್ದ ಬಿಎಂಟಿಸಿ ನೌಕರರಿಂದ ಬಂದ್ ಗೆ ಬೆಂಬಲ ಸಿಕ್ಕಿದ್ದು, ಆನೆ ಬಲ ಬಂದಂತಾಗಿದೆ. ಸದ್ಯ ನಟರಾಜ್ ಶರ್ಮ ನೇತೃತ್ವದಲ್ಲಿ ಕರೆ ಕೊಟ್ಟಿರುವ ಹೋರಾಟಕ್ಕೆ ವಜಾಗೊಂಡ ಎಲ್ಲ ನೌಕರರ ಬೆಂಬಲ ಘೋಷಣೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಜಿ20 ಶೃಂಗಸಭೆಗೆ ಅಂತಿಮ ಹಂತದ ಸಿದ್ಧತೆ
ಬಿಎಂಟಿಸಿ ವಜಾಗೊಂಡ ನೌಕರ ಜಯಂತ್ ಮರ್ಗಿ ಎಂಬುವವರು ಮಾತನಾಡಿದ್ದು, ಖಾಸಗಿ ಸಾರಿಗೆ ಮಾಲೀಕರು ಹಾಗೂ ಚಾಲಕರ ಹೋರಾಟ ನ್ಯಾಯಯುತವಾಗಿದೆ. ಅವರ ಹೋರಾಟಕ್ಕೆ ನಮ್ಮ ಬಿಎಂಟಿಸಿ ವಜಾಗೊಂಡ ನೌಕರರು ಬೆಂಬಲವಾಗಿ ನಿಲ್ಲಲಿದ್ದೇವೆ. ನಟರಾಜ್ ಶರ್ಮ ನೇತೃತ್ವದಲ್ಲಿ ನಡೆಯುತ್ತಿರುವ ಬಂದ್ ನಲ್ಲಿ ನಾವು ಕೂಡ ಭಾಗಿಯಾಗುತ್ತೇವೆ. ಸರ್ಕಾರದ ವಿರುದ್ದ ನಾವು ಹೋರಾಟ ಮಾಡಿದಾಗ ನಟರಾಜ್ ಶರ್ಮ ನಮ್ಮ ಪರವಾಗಿ ನಿಂತಿದ್ರು, ಕಾನೂನು ಹೋರಾಟದಲ್ಲೂ ಪ್ರಾಮಾಣಿಕವಾಗಿ ನಮ್ಮ ಪರ ಕೆಲಸ ಮಾಡುತ್ತಿದ್ದಾರೆ. ಆದ್ರಿಂದ ಸೋಮವಾರದ ಬಂದ್ ಗೆ ನಾವು ಸಂಪೂರ್ಣ ಬೆಂಬಲ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.