ʼಜೋಡಿ ಕೊಲೆʼ ಮಾಡಿ ಎಸ್ಕೇಪ್ ಆದ ರೀಲ್ಸ್ ಸ್ಟಾರ್ ʼಜೋಕರ್ ಫಿಲಿಕ್ಸ್ʼ ..! ಬಂಧನಕ್ಕೆ ಬಲೆ ಬೀಸಿದ ಖಾಕಿ ಪಡೆ
Joker Felix murder case : ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಸಂಸ್ಥೆಯ ಹಳೆ ಸಂಸ್ಥೆಯ ಸಹೊದ್ಯೋಗಿ ಫಿಲಿಕ್ಸ್ ಅಲಿಯಾಸ್ ಜೋಕರ್ ಫಿಲಿಕ್ಸ್ ಎಂಬಾತನಿಂದ ಡಬ್ಬಲ್ ಮರ್ಡರ್ ನಡೆದಿದೆ.ಒಂದು ಕಾಲದಲ್ಲಿ ರ್ಯಾಪರ್ ಅಂತಾ ಹೇಳಿಕೊಂಡು ರೀಲ್ಸ್ ಮಾಡಿ ಸಖತ್ ಟ್ರೋಲ್ ಆಗಿದ್ದ ಜೋಕರ್ ಫಿಲಿಕ್ಸ್ ಈಗ ಕೊಲೆ ಮಾಡಿ ಮತ್ತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾನೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡ ಹಗಲೇ ಡಬಲ್ ಮರ್ಡರ್ ನಡೆದಿದೆ. ಡಬ್ಬಲ್ ಮರ್ಡರ್ ಸುದ್ದಿ ಕೇಳಿ ನಿಜಕ್ಕೂ ಆ ಏರಿಯಾ ಜನ ಶಾಕ್ ಆಗಿದ್ರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸ್ರಿಗೆ ಶಾಕ್ ಆಗಿತ್ತು. ಸಮಯ ಸರಿಯಾಗಿ ಸಂಜೆ ನಾಲ್ಕು ಗಂಟೆ ಸಮಯ. ಬೆಂಗಳೂರಿನ ಹೆಬ್ಬಾಳ ಸಮೀಪದ ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಡಬ್ಬಲ್ ಮರ್ಡರ್ ಆಗಿತ್ತು.
ಇಲ್ಲಿನ ಆರನೇ ಕ್ರಾಸ್ ನಲ್ಲಿರೋ ಏರೋನಿಕ್ಸ್ ಮೀಡಿಯಾ ಪ್ರವೈಟ್ ಲಿಮಿಟೆಡ್ ಎಂಬ ಸಂಸ್ಥೆಗೆ ನುಗ್ಗಿದ್ದ ಮೂವರು ಹಂತಕರು ಮಚ್ಚಿನಿಂದ ಕಚೇರಿಯಲ್ಲಿದ್ದ ಎಂಡಿ ಫಣೀಂದ್ರ ಹಾಗೂ ಸಿಇಓ ವಿನುಕುಮಾರ್ ಮೇಲೆ ಅಟ್ಯಾಕ್ ಮಾಡಿ ಮನ ಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಯಾದ ಫಣೀಂದ್ರ ನಾಲ್ಕು ತಿಂಗಳ ಹಿಂದೆ ಪಂಪಾ ಬಡಾವಣೆಯಲ್ಲಿ ಏರೋನಿಕ್ಸ್ ಮೀಡಿಯಾ ಪ್ರವೈಟ್ ಲಿಮಿಟೆಡ್ ಅನ್ನೋ ಸಂಸ್ಥೆ ತೆರೆದಿದ್ರು. ಅದಕ್ಕೆ ವಿನುಕುಮಾರ್ ಸಿಇಓ ಆಗಿ ಕೆಲಸ ಮಾಡ್ತಿದ್ರು.
ಇದನ್ನೂ ಓದಿ: ಸೋಲಿನ ಹತಾಶೆಯಲ್ಲಿರುವ ಬಿಜೆಪಿ ಕೊಲೆಗಡುಕರ ಮೋರ್ಚಾಕ್ಕೆ ಚಾಲನೆ ನೀಡಿದೆಯೇ?: ಕಾಂಗ್ರೆಸ್
ಇಂದು ಸಂಜೆ ನಾಲ್ಕು ಗಂಟೆಗೆ ಕಂಪನಿಯ ಸಿಬ್ಬಂದಿ ಜೊತೆ ಎಂಡಿ ಹಾಗೂ ಸಿಇಓ ಮೀಟಿಂಗ್ ಕರೆದಿದ್ರು. ಈ ಸಮಯಕ್ಕೆ ಎಂಡಿ ಹಾಗೂ ಸಿಇಓ ಬಂದೆ ಬರ್ತಾರೆ ಅಂತಾ ಕಾದಿದ್ದ ಹಳೆ ಸಂಸ್ಥೆಯಲ್ಲಿ ಸಹೋದ್ಯೋಗಿ ಆಗಿದ್ದ ಫಿಲಿಕ್ಸ್ ಅಲಿಯಾಸ್ ಜೋಕರ್ ಫಿಲಿಕ್ಸ್ ಹಾಗೂ ಆತನ ಸ್ನೇಹಿತರು ಫಣೀಂದ್ರ ಹಾಗೂ ವಿನುಕುಮಾರ್ ಜೊತೆಯಲ್ಲೆ ಕಚೇರಿ ಒಳಗೆ ಹೋಗಿದ್ರು. ಹಾಗೇ ಹೋಗಿದ್ದ ನಾಲ್ವರು ಕ್ಯಾಬಿನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಮಾರಕಾಸ್ತ್ರಗಳನ್ನ ತೆಗೆದು ಫಣೀಂದ್ರ ಹಾಗೂ ವಿನುಕುಮಾರ್‌ನ್ನ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ನಡುರಸ್ತೆಯಲ್ಲಿ ಕಂಬದಂತೆ ನೆಟ್ಟಗೆ ನಿಂತ ನಾಗರಹಾವು..! ವಿಸ್ಮಯಕಾರಿ ವಿಡಿಯೋ ವೈರಲ್
ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಜೋಡಿ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ. ಇನ್ನು ಫಣೀಂದ್ರ ಹಾಗೂ ವಿನುಕುಮಾರ್ ಬನ್ನೇರುಘಟ್ಟ ಸಮೀಪ್ ಜಿ ನೆಟ್ ಎಂಬ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು. ಇತ್ತೀಚಿಗೆ ಅಲ್ಲಿ ಕೆಲಸ ಬಿಟ್ಟು ತಮ್ಮದೇ ಆದ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಅನ್ನೋ ಸಂಸ್ಥೆ ತೆರೆದಿದ್ರು. ಇದರಿಂದ ಜಿ ನೆಟ್ ಕಂಪನಿಯ ವ್ಯವಹಾರದ ಮೇಲೆ ಒಡೆತ ಬಿದ್ದಿತ್ತು. ಆ ಕಾರಣದಿಂದಲೇ ಇಬ್ಬರ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.
ಅದಕ್ಕೆ ಫೂರಕವಾಗಿ ಫಿಲಿಕ್ಸ್ ಜಿ ನೆಟ್ ಮಾಲೀಕರೊಂದಿಗೆ ಸಂಪರ್ಕದಲ್ಲಿದ್ದು ಪೊಲೀಸರಲ್ಲಿ ಸಾಕಷ್ಟು ಅನುಮಾನ ಮೂಡಿದೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡಿರೋ ಅಮೃತಹಳ್ಳಿ ಪೊಲೀಸ್ರು ತಲೆಮರೆಸಿಕೊಂಡಿರೋ ಹಂತಕರ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ. ಒಂದು ಕಾಲದಲ್ಲಿ ರ್ಯಾಪರ್ ಅಂತಾ ಹೇಳಿಕೊಂಡು ರೀಲ್ಸ್ ಮಾಡಿ ಸಖತ್ ಟ್ರೋಲ್ ಆಗಿದ್ದ ಜೋಕರ್ ಫಿಲಿಕ್ಸ್ ಈಗ ಕೊಲೆ ಮಾಡಿ ಮತ್ತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.