ಬೆಂಗಳೂರು:  ಬಂದು ಹೋಗುವ ಸರ್ಕಾರಗಳು ಆಟೋ ಚಾಲಕರ ಸಮಸ್ಯೆ ಬಗ್ಗೆ ಆಲಿಸುತ್ತಿಲ್ಲ ಎಂದು ಅಸಮಾಧಾನವನ್ನ ಹೊರಹಾಕಿದ್ದಾರೆ. ಹೀಗಾಗಿ ಕಳೆದ ಹತ್ತು ವರ್ಷದಿಂದ ಆಟೋ ಮೀಟರ್ ದರವನ್ನ  ಕೇವಲ ಎರಡು ಬಾರಿ ಏರಿಕೆ ಮಾಡಲಾಗಿದೆ.  ಸದ್ಯ ಇದಕ್ಕೆಲ್ಲಾ ಮುಕ್ತಿ ಕೊಟ್ಟು ವರ್ಷಕ್ಕೊಮ್ಮೆ ಆಟೋಗಳ ಮೀಟರ್ ದರ ಏರಿಕೆ ಮಾಡಿ ಎಂದು ಬೆಂಗಳೂರು ಆಟೋ ಡ್ರೈವರ್ಸ್ ಯೂನಿಯನ್ ಆಗ್ರಹವ್ಯಕ್ತಿಪಡಿಸಿದೆ.


COMMERCIAL BREAK
SCROLL TO CONTINUE READING

ಹೌದು... ಆಟೋ ಚಾಲಕರ ದುಪ್ಪಟ್ಟು ಸುಲಿಗೆಗೆ ಸರ್ಕಾರ ಮೀಟರ್ ದರ ಏರಿಸದೇ ಇರೋದೆ ಕಾರಣವಂತೆ. ಹೀಗಾಗಿ ಆಟೋ ಮೀಟರ್ ದರ ಪರಿಷ್ಕರಣೆ ಮಾಡುವಂತೆ ಆಟೋ‌ ಯೂನಿಯನ್‌ಗಳು ಪಟ್ಟು ಹಿಡಿದಿವೆ. ಪ್ರತಿ ವರ್ಷ ಮೀಟರ್ ದರ ಏರಿಕೆ ಮಾಡುವಂತೆ ಆಟೋ ಡ್ರೈವರ್ಸ್ ಯೂನಿಯನ್ ಸಾರಿಗೆ ಸಚಿವರಿಗೆ ಪತ್ರ ‌ಬರೆದಿದ್ದಾರೆ. ಕಳೆದ 10 ವರ್ಷದಿಂದ ಎರಡು ಬಾರಿ ಮಾತ್ರ ಆಟೋ ಮೀಟರ್ ದರ ಏರಿಕೆ ಮಾಡಲಾಗಿದೆ. ಅದರ ಬದಲು ದರ ಏರಿಕೆಗೆ ತಕ್ಕಂತೆ ಪ್ರತಿ ವರ್ಷ ಮೀಟರ್ ದರ ಪರಿಷ್ಕರಣೆ ಮಾಡುವಂತೆ ಒತ್ತಾಯ‌ ಮಾಡಿದ್ದಾರೆ.


ಹಾಗಾದ್ರೆ ಆಟೋ ಯೂನಿಯನ್ ಬರೆದ ಪತ್ರದಲ್ಲಿ ಏನಿದೆ?
ಬೆಂಗಳೂರಿನಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಆಟೋರಿಕ್ಷಾಗಳಿವೆ. ಆದರೂ ಜನರಿಗೆ ಆಟೋರಿಕ್ಷಾಗಳು ಸಿಗುವುದೇ ಕಷ್ಟವಾಗಿ ಹೋಗಿದೆ, ಜೊತೆಗೆ ಆಟೋ ಚಾಲಕರ ಅಸಮರ್ಪಕರ ಸಹಕಾರದಿಂದ ಜನರಿಗೆ ಸರಿಯಾಗಿ ಆಟೋ ಸಿಗ್ತಿಲ್ಲ, ಸರ್ಕಾರ ನಿಗದಿ ಪಡಿಸಿದ ಮೀಟರ್ ದರಕ್ಕೆ ಹಲವು ಚಾಲಕರು ಬಾಡಿಗೆ ಮಾಡ್ತಿಲ್ಲ..ಜೊತೆಗ ಆಟೋ ಚಾಲಕರು ಅವರಿಷ್ಟಕ್ಕೆ ಬಂದಷ್ಟು ಹಣ ಕೇಳ್ತಿದ್ದಾರೆ, ಜೊತೆಗೆ ಕರೆದಲ್ಲಿಗೂ ಬರ್ತಿಲ್ಲ. ಇದಕ್ಕೆಲ್ಲ ಕಾರಣ ಬೆಲೆ ಏರಿಕೆ ಅನುಸರ ಆಟೋ ಮೀಟರ್ ದರ ಏರುತ್ತಿಲ್ಲ. ಕಳೆದ ಒಂದು ದಶಕದಿಂದ ಕೇವಲ ಎರಡು ಬಾರಿ ದರ ಏರಿಕೆ ಮಾಡಲಾಗಿದೆ. ಎರಡು ಬರೀ ದರ ಹೆಚ್ಚಿಸಿದ್ದು ಅದು ಈಗಿನ‌ ಬೆಲೆ ಏರಿಕೆಗೆ ಅನುಗುಣವಾಗ್ತಿಲ್ಲ ಅಂತ ತಮ್ಮ‌ ಆಟೋ ಯೂನಿಯನ್ ಬರೆದ ಪತ್ರದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. 


ಇದನ್ನೂ ಓದಿ- PSI Recruitment: ಪರೀಕ್ಷಾ ದಿನಾಂಕ ಮುಂದೂಡುವಂತೆ ಸಿಎಂಗೆ ವಿಜಯೇಂದ್ರ ಆಗ್ರಹ


ಇನ್ನೂ ಸೆಕ್ಷನ್ 67(ಐ) ಎಂವಿ ಆ್ಯಕ್ಟಿನ್ ಅಡಿ ಆಟೋ ದರ ಕಾಲಕಾಲಕ್ಕೆ ನಿಗದಿಪಡಿಸುವಂತೆ ಸೂಚಿಸಲಾಗಿದೆ. ಆದರೆ ಕಾಲಕಾಲಕ್ಕೆ ಎಂಬ ಪದ ನಿರ್ದಿಷ್ಟ ಸಮಯ ಅಂತ ಅನುಸಾರವಾಗಿ ಸೂಚಿಸಿಲ್ಲ. ಇದೇ ಕಾರಣಕ್ಕೆ ಅಧಿಕಾರಿಗಳು, ತಮ್ಮ‌ ಮನಕ್ಕೆ ಬಂದಂತೆ ದರಗಳ ವಿಷಯದಲ್ಲಿ ಗಮನ ಹರಿಸ್ತಾರೆ ಅಂತ ಆಟೋ ಯುನಿಯನ್ ಗಳು ಆರೋಪ ಮಾಡ್ತೀವೆ.


ಕಾನೂನು ತಿದ್ದುಪಡಿಗೆ ಆಗ್ರಹ:
ಕೇಂದ್ರ ಸರ್ಕಾರದಿಂದ 2020ರಲ್ಲಿ ಮೋಟರ್ ಅಗ್ರಿಗೇಟರ್ ಗೈಡ್ಲೈನ್ಸ್ ಜಾರಿ ಮಾಡಿದ್ದು, ಅದರ ಅಡಿ ದರ ಹೋಲ್ ಸೆಲ್ ಪ್ರೈಸ್ ಇಂಡೆಕ್ಸ್ ಗೆ ಅನುಗುಣವಾಗಿ ನಿಗದಿಗೆ ಸೂಚಿಸಿದೆ. ಪ್ರತಿ ವರ್ಷ ದರ ಏರಿಕೆಗೆ ಸರ್ಕಾರ ಮಟ್ಟದಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಅಂತ ಸಲಹೆಯಯನ್ನು ನೀಡಿದ್ದಾರೆ. ಕೇಂದ್ರ ಸರ್ಕಾರ ಮೋಟರ್ ಅಗ್ರಿಗೇಟರ್ ಗೈಡ್ಲೈನ್ಸ್ ಅಡಿ ದರ ಹೋಲ್ ಸೆಲ್ ಪ್ರೈಸ್ ಇಂಡೆಕ್ಸ್ ಗೆ ಅನುಗುಣವಾಗಿ ನಿಗದಿಗೆ ಸೂಚಿಸಿದೆ.‌ ಕೇಂದ್ರ ಸರ್ಕಾರದ ಸೂಚನೆಯಂತೆ ಕಾನೂನು ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕಾಲಕಾಲಕ್ಕೆ ಬದಲು ಪ್ರತಿ ವರ್ಷ ಹೋಲ್‌ ಸೇಲ್ ಪ್ರೈಸ್ ಇಂಡೆಕ್ಸ್ ಅನುಗುಣ ತಿದ್ದು‌ಪಡಿಗೆ ಆಟೋ ಯೂನಿಯನ್ ಆಗ್ರಹಿಸಿದೆ. 


ಇದನ್ನೂ ಓದಿ- ತರಕಾರಿ ಮಾರಿದಂತೆ ಹಸುಗೂಸುಗಳ ಮಾರಾಟ: ಸಿಲಿಕಾನ್ ಸಿಟಿಯ ರಸ್ತೆಯಲ್ಲೇ ನಡೆಯುತ್ತಿದೆ ದಂಧೆ!


ಒಟ್ಟಾರೆ ಆಟೋ ಮೀಟರ್ ದರ ಏರಿಕೆ ಪ್ರಸ್ತಾಪ ಸರ್ಕಾರದ ಅಂಗಳ ತಲುಪಿದೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೆ ಅಂತ ಕಾದುನೋಡಬೇಕಿದೆ. ಆದರೆ ಜನ ಮಾತ್ರ ಈಗಲೇ ಆಟೋ ಚಾಲಕರು ಮಾಡ್ತಿರುವ ಸುಲಿಗೆ ಹೆಚ್ಚಾಗಿದೆ ಅಂತಿದ್ದಾರೆ. ಮತ್ತೆ ಹೆಚ್ಚಳ ಮಾಡಿದ್ರೆ ಸುಲಿಗೆ  ನಿಲ್ಲುತ್ತಾ ಅಂತ ಪ್ರಶ್ನಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.