ದೇಶದಲ್ಲಿಯೇ ಪ್ರಪ್ರಥಮ ಸುಸಜ್ಜಿತ ತಂತ್ರಜ್ಞಾನದ ಪಾಲಿಕೆ ಕೌನ್ಸಿಲ್ ಸಭಾಂಗಣ
Technology Corporation Council Hall: ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿರುವ ಕೌನ್ಸಿಲ್ ಸಭಾಂಗಣ 10ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಮುಂದುವರೆದಿದೆ.ಈ ಹಿನ್ನೆಲೆ ಇಂದು ಕಾಮಗಾರಿ ಸ್ಥಳಕ್ಕೆ ಎಂ.ಪಿ.ಡಿ.ಮುಖ್ಯ ಅಭಿಯಂತರಾದ ವಿನಾಯಕ್ ಸುಗ್ಗೂರು, ಸೂಪರಿಡೆಂಟ್ ಇಂಜನಿಯರ್ ಹೇಮಲತಾ, ಸಹಾಯಕ ಅಭಿಯಂತರಾದ ಹರ್ಷರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿರುವ ಕೌನ್ಸಿಲ್ ಸಭಾಂಗಣ 10ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಮುಂದುವರೆದಿದೆ.ಈ ಹಿನ್ನೆಲೆ ಇಂದು ಕಾಮಗಾರಿ ಸ್ಥಳಕ್ಕೆ ಎಂ.ಪಿ.ಡಿ.ಮುಖ್ಯ ಅಭಿಯಂತರಾದ ವಿನಾಯಕ್ ಸುಗ್ಗೂರು, ಸೂಪರಿಡೆಂಟ್ ಇಂಜನಿಯರ್ ಹೇಮಲತಾ, ಸಹಾಯಕ ಅಭಿಯಂತರಾದ ಹರ್ಷರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Siddaramaiah : ಫೇಕ್ ನ್ಯೂಸ್‌ಗಳ ಮೂಲ ಪತ್ತೆ ಹಚ್ಚಿ : ಸಿಎಂ ಸಿದ್ದರಾಮಯ್ಯ ಸೂಚನೆ..!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ 198ರಿಂದ 243ಸದಸ್ಯರ ಸಂಖ್ಯೆ ಹೆಚ್ಚಳದಿಂದ ಮತ್ತು ಲೋಕಸಭಾ ರಾಜ್ಯಸಭಾ,ವಿಧಾನಪರಿಷತ್ ಹಾಗೂ ಅಧಿಕಾರಿಗಳಿಗೆ ಕೌನ್ಸಿಲ್ ಸಭೆಯಲ್ಲಿ ಆಸನ ವ್ಯವಸ್ಥೆಗೆ 365ಸಂಖ್ಯೆ ಆಸನಗಳ ನಿರ್ಮಾಣವಾಗುತ್ತಿದೆ.
ಈ ನಿಟ್ಟಿನಲ್ಲಿ ಕೌನ್ಸಿಲ್ ಸಭಾಂಗಣ 365 ಆಸನಗಳ ಪ್ರತಿಯೊಬ್ಬರಿಗೂ ಪ್ರತ್ಯಕ ಆಸನಗಳು, ಸಾಮಾಜಿಕ ಅಂತರ ಆಸನಗಳ ನಡುವೆ ಹಾಗೂ ಅತ್ಯಾಧುನಿಕ ಮೈಕ್ ವ್ಯವಸ್ಥೆ, ಬಯೋಮೇಟ್ರಿಕ್ ಬಟನ್ ಒತ್ತುವ ಮೂಲಕ ಮಾತನಾಡಲು ಅವಕಾಶ ಇರಲಿದೆ.
ಇದನ್ನೂ ಓದಿ: ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜಕೀಯ ಪ್ರೇರಿತ ಪ್ರತಿಭಟನೆ: ಬಸವರಾಜ ಬೊಮ್ಮಾಯಿ
ಎರಡೇ ತಿಂಗಳಲ್ಲಿ ಪಾಲಿಕೆ ಸಭಾಂಗಣ ಸಿದ್ದ;
ಪ್ರತಿಯೊಂದು ಆಸನಗಳಲ್ಲಿ ಡಿಜಿಟಲ್ ನಾಮಫಲಕಗಳು ಮತ್ತು ಹವಾನಿಯಂತ್ರಣ ವ್ಯವಸ್ಥೆ ಮಾಡಲು 10ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಭರದಿಂದ ಸಾಗಿದೆ. ಕೌನ್ಸಿಲ್ ಸಭಾಂಗಣ ಕಾಮಗಾರಿ ಭರದಿಂದ ಸಾಗಿದ್ದು ಇನ್ನು ಎರಡು ತಿಂಗಳ ಒಳಗೆ ಕಾಮಗಾರಿ ಸಂಪೂರ್ಣಗೊಳ್ಳಲಿದ್ದು, ಅತ್ಯಧುನಿತ ತಂತ್ರಜ್ಞಾನವುಳ್ಳ ಕೌನ್ಸಿಲ್ ಸಭಾಂಗಣ ಮುಂಬರುವ ಪಾಲಿಕೆ ಸದಸ್ಯರುಗಳ ಆಗಮನಕ್ಕೆ ಸಜ್ಜಾಗಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ