ಬೆಂಗಳೂರು : ದುರಸ್ಥಿ ಸ್ಥಿತಿಯಲ್ಲಿರುವ ಹಾಗೂ ತಾಂತ್ರಿಕ ದೋಷದಿಂದ ಕೂಡಿದ್ದ 1,02,713 ವಿದ್ಯುತ್ ಪರಿವರ್ತಕ(ಟಿಸಿ)ಗಳನ್ನೂ ಬೆಸ್ಕಾಂ ಕಳೆದ 7 ತಿಂಗಳಲ್ಲಿ ರಿಪೇರಿ ಮಾಡಿದೆ. ಟಿಸಿ ನಿರ್ವಹಣೆಯನ್ನು ಎಲ್ಲಾ 535 ಸೆಕ್ಷನ್ ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಟಿಸಿ ನಿರ್ವಹಣೆ ಅಭಿಯಾನಕ್ಕೆ ಮೇ 5. 2022 ರಂದು ಚಾಲನೆ ನೀಡಲಾಗಿತ್ತು. ನವೆಂಬರ್‌ 24, 2022ರ ವೇಳೆಗೆ 102713 ಟಿಸಿಗಳ ನಿರ್ವಹಣೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. 


COMMERCIAL BREAK
SCROLL TO CONTINUE READING

ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಟಿಸಿಗಳಿಗೆ ಶಾಶ್ವತ ಕಾಯಕಲ್ಪ ಒದಗಿಸಲಾಗುತ್ತಿದ್ದು, ಟಿಸಿಗಳ ನಿರ್ವಹಣೆಯಿಂದಾಗಿ ಅವುಗಳ ಕಾರ್ಯಕ್ಷಮತೆ ಹೆಚ್ಚಾಗುವುದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಸಲು ನೆರವಾಗುತ್ತದೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.


ಇದನ್ನೂ ಓದಿ : ಟೀಚರ್ ನೇಮಕಾತಿ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಶಾಕ್...!


ಬೆಸ್ಕಾಂ ವ್ಯಾಪ್ತಿಯಲ್ಲಿ ಟಿಸಿಗಳ ನಿರ್ವಹಣೆಗೆ ವೇಗ ನೀಡಲು ಇತ್ತೀಚೆಗೆ ನಡೆದ ಪರಿಶೀಲನಾ ಸಭೆಯಲ್ಲಿ ಬೆಸ್ಕಾಂ ಎಂಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.


ನಿರ್ವಹಣೆ ಸಂದರ್ಭದಲ್ಲಿ ಟಿಸಿಯಲ್ಲಿನ ಬುಶ್ ಗಳು ಸಡಿಲಗೊಂಡಿದ್ದರೆ ಗಟ್ಟಿಗೊಳಿಸಲಾಗುವುದು,  ಜಂಪ್ ರಿಪೇಲ್ ಗಳ ನಿರ್ವಹಣೆ, ಸಡಿಲಗೊಂಡ ವೈರ್ ಸರಿಪಡಿಸುವಿಕೆ ಮತ್ತು ಟಿಸಿ ಆಯಿಲ್ ನಿರ್ವಹಣೆಯನ್ನು ಮಾಡಲಾಗುತ್ತಿದೆ.  ಬೆಸ್ಕಾಂನ ಬೆಂಗಳೂರು ನಗರ ಜಿಲ್ಲೆಯಲ್ಲಿ 35235 ಟಿಸಿಗಳ ನಿರ್ವಹಣೆ ಮಾಡಲಾಗಿದ್ದು, ದಾವಣೆಗೆರೆ ಜಿಲ್ಲೆಯಲ್ಲಿ 12365, ತುಮಕೂರು ಜಿಲ್ಲೆಯಲ್ಲಿ 16234, ಚಿತ್ರದುರ್ಗ ಜಿಲ್ಲೆಯಲ್ಲಿ 12230 ಟಿಸಿಗಳ ನಿರ್ವಹಣೆ ಮಾಡಲಾಗಿದೆ ಎಂದು ಬೆಸ್ಕಾಂ ಎಂಡಿ ಮಾಹಿತಿ ನೀಡಿದ್ದಾರೆ. ರಾಮನಗರದಲ್ಲಿ 9873, ಚಿಕ್ಕಬಳ್ಳಾಪುರ 7981, ಕೋಲಾರ 4018 ಹಾಗು ಬೆಂಗಳೂರು ಗ್ರಾಮಾಂತರ 4687 ಗಳ ನಿರ್ವಹಣೆ ಮಾಡಲಾಗಿದೆ. 


ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಿರ್ವಹಿಸಿರುವ 35235 ಟಿಸಿಗಳ ಪೈಕಿ ಪಶ್ಚಿಮ ವೃತ್ತದಲ್ಲಿ 7688, ದಕ್ಷಿಣ ವೃತ್ತದಲ್ಲಿ 10261, ಪೂರ್ವ ವೃತ್ತದಲ್ಲಿ 7015  ಹಾಗು ಉತ್ತರ ವೃತ್ತದಲ್ಲಿ 7519 ಟಿಸಿಗಳ ನಿರ್ವಹಣೆ ಕಾರ್ಯ ಪೂರ್ಣ ಗೊಳಿಸಲಾಗಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ. ಟಿಸಿ ನಿರ್ವಹಣೆ ಅಭಿಯಾನಕ್ಕೆ  ಮೇ 5 ರಂದು ಇಂಧನ ಇಲಾಖೆ ಚಾಲನೆ ನೀಡಿತ್ತು. ಟಿಸಿ ಗಳ ನಿರ್ವಹಣೆ ಕಾರ್ಯವನ್ನು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಆರಂಭಿಸಲಾಗಿದೆ.


ಇದನ್ನೂ ಓದಿ : ಗೂಡ್ಸ್ ವಾಹನ ಸಂಚಾರ ನಿರ್ಬಂಧ : ಹೆಬ್ಬಾಳದಲ್ಲಿ ಕಡಿಮೆಯಾಯ್ತು ಟ್ರಾಫಿಕ್ ಜಾಮ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.